ಶಿವಮೊಗ್ಗ | ನರಸಿಂಹ ಕೊಲೆ ಪ್ರಕರಣ : ಆರೋಪಿಗಳು ​ ಅರೆಸ್ಟ್

ಕ್ರೈಂ

ಶಿವಮೊಗ್ಗ, ನಗರದ ಗಾಂಧಿ ಬಜಾರ್ ಸಮೀಪ ನಡೆದ ನರಸಿಂಹನ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ ವಿಶೇಷ ತಂಡ ಐವರನ್ನು ಬಂಧಿಸಿದೆ. ಇವತ್ತು ಬೆಳಗ್ಗೆ ಆರೋಪಿಗಳನ್ನ ಶಿವಮೊಗ್ಗ ಕೋಟೆ ಠಾಣೆಗೆ ಕರೆತರಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಅಡಿಷನಲ್​ ಎಸ್​ಪಿ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡ 24 ಗಂಟೆಯ ಒಳಗಾಗಿ ಆರೋಪಿಗಳನ್ನ ವಶಕ್ಕೆ ಪಡೆದಿದೆನಿನ್ನೆ ಶುಕ್ರವಾರ ಸಂಜೆ ನಾಲ್ಕು ಮುಕ್ಕಾಲರ ಹೊತ್ತಿಗೆ ಇಸ್ಪೀಟ್​ ಅಡ್ಡೆಯಲ್ಲಿ ಎಂಟ್ರಿ ಯಾಗಿದ್ದ ತಂಡ, ನರಸಿಂಹನನ್ನು ಹತ್ಯೆ ಮಾಡಿತ್ತು.

ಈ ಪ್ರಕರಣ ಸಂಬಂಧ ಪೊಲೀಸರು, ಅಂಬು ಅನಿಲ್, ಮಧು, ರವಿ, ಹಾಗೂ ಕತ್ತೆ ಕಾರ್ತಿಕ್​, ಶಬರೀಶ್ ಸೇರಿದಂಥೆ ಐವರನ್ನು ಅರೆಸ್ಟ್ ಮಾಡಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

Author