ಶಿಕಾರಿಪುರ | ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ; ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ

ಶಿಕಾರಿಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮತ್ತು ವಸತಿ ನಿಯಲದ ಮೇಲ್ವಿಚಾರಣಧಿಕಾರಿಗಳ ಸತತ ನಿರ್ಲಕ್ಷ್ಯ ತನದಿಂದ ಶಿಕಾರಿಪುರ ನಗರದ ಆಶ್ರಯ ಬಡಾವಣೆ ಹತ್ತಿರವಿರುವ ಪರಿಶಿಷ್ಟಜಾತಿ ಪಂಗಡ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ, ಚಾರ್ಟ್ ಮೆನು ಪ್ರಕಾರ ಸರಿಯಾಗಿ ಆಹಾರ ಒದಗಿಸುತ್ತಿಲ್ಲ ಮತ್ತು ಶುಚಿರುಚಿಯಾದ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಹಾಗೂ,

ವಸತಿ ನಿಲಯದಲ್ಲಿ ಆಹಾರದ ಸಾಮಾಗ್ರಿಗಳ ಕೊಠಡಿಯಲ್ಲಿ ಆಹಾರ ಸಾಮಗ್ರಿಗಳು ಇರುವುದಿಲ್ಲ ಮತ್ತು ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲವೆಂಬ ವಿದ್ಯಾರ್ಥಿಗಳ ಆಕ್ರೋಶದ ಪರವಾಗಿ ಧ್ವನಿಯಾಗುವ ಮೂಲಕ ವಸತಿ ನಿಲಯಕ್ಕೆ ಬೇಟಿನೀಡಿ ಸಾಂಕೇತಿಕವಾಗಿ ಪ್ರತಿಭಟಿಸಾಯಿತು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

ಈ ಪ್ರತಿಭಟನೆ ನಡಿಸಿದರು ಕೂಡ ವಸತಿನಿಲಯಕ್ಕೆ ಯಾವ ಅಧಿಕಾರಿಗಳು ಬೇಟಿನೀಡಿ ವಸತಿ ನಿಲಯದ ಸಮಸ್ಯೆಯನ್ನು ಆಲಿಸಲಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಈ ಸಂದರ್ಭದಲ್ಲಿ ಶಿವು ಹುಲ್ಮಾರ್ ಯುವ ಕಾಂಗ್ರೆಸ್ ಅಧ್ಯಕ್ಷರು ಶಿಕಾರಿಪುರ ಬ್ಲಾಕ್, ಯುವ ಕಾಂಗ್ರೆಸ್ ಮುಖಂಡ ಶರತ್ MH ಮತ್ತು ವಸತಿ ನಿಲಯದ ವಿದ್ಯಾರ್ಥಿಗಳಾದ ಗಿರೀಶ್ ಮತ್ತು ಇನ್ನೂ ಮುಂತಾದವರು ಇದ್ದರು.

Author