ಶಿವಮೊಗ್ಗ,ಹಣಗೆರೆ, ಕನ್ನಂಗಿ, ಅಲಸೆ, ಮಾಳೂರು, ಕಲ್ಕೂಪ್ಪ, ಸಿರಿಗೆರೆ, ತಮ್ಮಡಿಹಳ್ಳಿ, ಭಾಗದಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ಹಾಗೂ ಅವರು ಸರಿಯಾದ ಸಮಯಕ್ಕೆ ಶಿಕ್ಷಣ ಪಡೆಯುವ ಸಲುವಾಗಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಅನುಕೂಲವಾಗಲು ಮತ್ತು ಸಿರಿಗೆರೆ, ತಮ್ಮಡಿಹಳ್ಳಿ, ಕಲ್ಲುಕೊಪ್ಪ ಕೆರೇಹಳ್ಳಿ, ಹಣಗೆರೆ, ಬಸವನಗದ್ದೆ, ಕನ್ನಂಗಿ, ಹೊನ್ನಸಗದ್ದೆ, ಅಲಸೆ ಭಾಗದಿಂದ 40ಕ್ಕೂ ಹೆಚ್ಚು ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ದಿನ ಕರ್ತವ್ಯಕ್ಕೆ ಹೋಗುತ್ತಿದ್ದು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ತೊಂದರೆ ಉಂಟಾಗುತ್ತಿದೆ ಆದ್ದರಿಂದ ಶಿವಮೊಗ್ಗದಿಂದ 8.20 or 8.30 ಕ್ಕೆ ದಿನಾಂಪ್ರತಿ ಬಸ್ ಸೌಲಭ್ಯ ಒದಗಿಸಲು ಈ ಮೂಲಕ ಕೋರಿದ್ದು ಹಾಗೂ ಕನ್ನಂಗಿ ಗ್ರಾಮಕ್ಕೆ ಪ್ರತಿನಿತ್ಯವೂ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಬ್ಯಾಂಕ್ ಆಸ್ಪತ್ರೆ, ವಂಚಾಯಿತಿ ಸಿಬ್ಬಂದಿಗಳು, ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಹಣಗೆರೆ ಮತ್ತು ಅಲಸೆಗೆ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ.

ಕಛೇರಿ ಹಾಗೂ ಶಾಲಾ ಸಮಯಕ್ಕೆ ಸರಿಯಾಗಿ ಯಾವುದೇ ಬಸ್ ವ್ಯವಸ್ಥೆ ಕನ್ನಂಗಿ ಗ್ರಾಮಕ್ಕೆ ಇರುವುದಿಲ್ಲ. ಸರ್ಕಾರಿ ನೌಕರರಿಗೆ KAAMS ಬಂದಿದ್ದು ವೇಳೆಗೆ ಸರಿಯಾಗಿ ಬಸ್ ಇಲ್ಲದೇ ಕಷ್ಟವಾಗುತ್ತಿದೆ. ಈಗಾಗಲೇ ಎರಡು ಮೂರು ದಿನಗಳಿಂದ 8.30 ಕ್ಕೆ ಬೆಳಗಿನ ಅವಧಿಗೆ ಬಸ್ ಬಿಡಲಾಗಿದ್ದು ಅದು ಕನ್ನಂಗಿಗೆ ಬಾರದೇ ಅಲಸೆಗೆ ಹೋಗುತ್ತಿದೆ. ಆದರೆ ಕನ್ನಂಗಿಗೆ ಬರುವ ಸರ್ಕಾರಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ.

ಸುಮಾರು 50 ಮಕ್ಕಳು ಬಸ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುವವರಿದ್ದಾರೆ.ಆದ್ದರಿಂದ ಬೆಳಗೆ 8.15 ಕ್ಕೆ ಶಿವಮೊಗ್ಗದಿಂದ ಹೊರಟು ಆಯನೂರು,ಸಿರಿಗೆರೆಹಣಗೆರೆ ಮಾರ್ಗವಾಗಿ 9.30 ಕನ್ನಂಗಿ ಬಂದು ಅಲಸೆ ನಿಲುಗಡೆ.ಮಧ್ಯಾಹ್ನ 3.00 ಕೆ ಶಿವಮೊಗದಿಂದ ಹಣಗೆರೆ ಮಾರ್ಗವಾಗಿ ಕನ್ನಂಗಿ ತಲುಪಿ ಕನ್ನಂಗಿಯಿಂದ 4.35 ಕ್ಕೆ ಪುನಃ ಶಿವಮೊಗ್ಗಕ್ಕೆ ತೆರಳು ಅನುಕೂಲವಾಗುವಂತೆ ಸರ್ಕಾರಿ ಬಸ್ ನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನವಿ ಮಾಡಿದ್ದರು.
ಸದರಿ ಮನವಿ ಪುರಸ್ಕರಿಸಿದ ಅಧಿಕಾರಿಗಳು ದಿನಾಂಕ 02 ಸೆಪ್ಟೆಂಬರ್ 2026 ರಿಂದ ಮೇಲ್ಕಂಡ ಮಾರ್ಗವಾಗಿ KSRTC Bus ಸಂಚಾರ ಪ್ರಾರಂಭ ಮಾಡುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದರು. ಆ ಒಂದು ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು KSRTC ಅಧಿಕಾರಿಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಹ ತಿಳಿಸಿದ್ದರು.
ಮುಂದೆ ಓದಿ 👇
ಕೆಲವೇ ದಿನಗಳಲ್ಲಿ ಮತ್ತೆ ಪ್ರಾರಂಭವಾದ ಸಮಸ್ಯೆ :
ಕೆಲವೇ ದಿನಗಳಲ್ಲಿ ಮತ್ತೆ ಪ್ರಾರಂಭವಾದ ಸಮಸ್ಯೆ :
ಪ್ರಸ್ತುತ ಕೆಲವು ದಿನಗಳಿಂದ ಮತ್ತೆ ಶಾಲಾ ಕಾಲೇಜ್ ಆಫೀಸ್ ಸಮಯಕ್ಕೆ ಬಾರದ KSRTC Bus ಮೇಲೆ ಮತ್ತೆ ಭುಗಿಲೆದ್ದಿರುವ ಆಕ್ರೋಶ ಇನ್ನು ಸಮಯಕ್ಕೆ ಸರಿಯಾಗಿ KSRTC Bus ಬರದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸರ್ಕಾರದ ವ್ಯವಸ್ಥೆ ಬಗ್ಗೆ ಶಾಪ ಹಾಕುತ್ತಿದ್ದಾರೆ. ಮತ್ತೊಂದು ಕಡೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಮ್ಮ ಮಾಧ್ಯಮಕ್ಕೆ ಸಮಸ್ಯೆ ಸಂಬಂಧ ಮಾಹಿತಿ ತಿಳಿಸಿದ್ದಾರೆ.
ಹಾಗೂ ಇಷ್ಟೇ ಅಲ್ಲದೆ KSRTC Bus ನಿರ್ವಾಹಕ ಹಾಗೂ ಚಾಲಕನ ವಿರುದ್ದ ಸಹ ವಿದ್ಯಾರ್ಥಿಗಳು ದೂರುಗಳನ್ನ ಹೇಳುತ್ತಿದ್ದಾರೆ.
ಮತ್ತೊಂದುಕಡೆ ಖಾಸಗಿ Bus ನವರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮನಸೋ ಇಚ್ಛೆ ಹೀಯಾಳಿಸಿ ದೌರ್ಜನ್ಯ ಪದ ಬಳಸುತ್ತರುವ ಆರೋಪವನ್ನು ಸಹ ವಿದ್ಯಾರ್ಥಿಗಳು ಶಿಕ್ಷಕರು ತಿಳಿಸುತ್ತಿದ್ದಾರೆ. ಉಚಿತ Bus ಸೇವೆ ಅಂತ KSRTC Bus ಗೆ ಹೋಗುತ್ತಾರೆ, ಇವರಿಗೆ ಉಚಿತ ಅನ್ನೋ ಪದದ ಬಗ್ಗೆಯೇ ಕೀಳು ಮಟ್ಟದ ಪದ ಪ್ರಯೋಗ ಮಾಡುತ್ತಾರೆ ಎಂಬ ಆರೋಪ ಸಹ ಖಾಸಗಿ Bus ಅವರು ಮಾಡುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

ಅಂತವರು ಇಂತವರು ಎಂಬಂತೆ ಖಾಸಗಿ Bus ಅವರು ಮಾತಾಡುತ್ತಾರೆ ಮಹಿಳೆಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಎಂಬ ಆರೋಪವು ಕೇಳಿಬರುತ್ತಿದೆ.
ಹಾಗೂ ಖಾಸಗಿ Bus ಜೊತೆಗೆ KSRTC ಅಧಿಕಾರಿಗಳು ಶಾಮಿಲಿನ ಭಾಗವೇಈ ರೀತಿ ಅವ್ಯವಸ್ಥೆ ಎಂಬ ಆರೋಪವು ಕೇಳಿಬರುತ್ತಿದೆ.
ಇದೆಲ್ಲ ಸಮಸ್ಯೆ ಬಗೆಹರಿಸಿಕೊಡಲು ಮಾನ್ಯ ಸಾರಿಗೆ ಸಚಿವರೇ ಹಾಗೂ ನಾಗಲಕ್ಷ್ಮಿ ಚೌಧರಿ ಅವರು ಮತ್ತೊಮ್ಮೆ ಶಿವಮೊಗ್ಗಕ್ಕೆ ಬರಬೇಕಾಗಿದೆ ಅಂತ ಪ್ರಯಾಣಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನು ಶಿವಮೊಗ್ಗ KSRTC Bus ಪಾಸ್ ಪಡೆಯಲು ಶಿವಮೊಗ್ಗದ ಮುಖ್ಯ Bus ನಿಲ್ದಾಣ ಕೌಂಟರ್ ನಲ್ಲಿ ಬೆಳಿಗ್ಗೆ 8 ಗಂಟೆ ಅಂತ ನಾಮಫಲಕ ಹೆಸರಿಗೆ ಇದೆ ಆದರೆ ಈ ಸಮಯಕ್ಕೆ ಯಾವ ಒಬ್ಬ ಸಿಬ್ಬಂದಿ ಅಥವಾ ಅಧಿಕಾರಿ ಇರುವುದಿಲ್ಲ ಇದರಿಂದ ಕೂಡ ಸಾಕಷ್ಟು ದಿನ ಪ್ರಯಾಣಿಕರು ಪಾಸ್ ಗಾಗಿ ಪರದಾಡುವಂತಾಗಿದೆ.
ಶಿವಮೊಗ್ಗ KSRTC ಅಧಿಕಾರಿಗಳು ಪ್ರಶ್ನಾತೀತರು ?
ಇದು ಮೇಲ್ಕಂಡ ಮಾರ್ಗದಷ್ಟೇ ಸಮಸ್ಯೆ ಆಗಿಲ್ಲ, ಶಿವಮೊಗ್ಗ ಭದ್ರಾವತಿ KSRTC Bus ಸೇವೆ ಇದರಿಂದ ಹೊರತಾಗಿಲ್ಲ ಹಲವಾರು ಬಾರಿ ಹಲವಾರು ಮಾಧ್ಯಮಗಳು ಸುದ್ದಿ ಬಿತ್ತರಿಸಿದೆ KSRTC ಅವ್ಯವಸ್ಥೆ ಬಗ್ಗೆ ಇಲ್ಲಿಯವರೆಗೆ ಯಾವದೇ ಕ್ರಮವಾಗಿಲ್ಲ ಹಾಗೂ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆ ಬಗೆಹರಿದಿಲ್ಲ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಸರ್ಕಾರದ ಈ ಉಚಿತ ಶಕ್ತಿ ಯೋಜನೆ ವ್ಯವಸ್ಥೆಯು ಅವ್ಯವಸ್ಥೆಯಾಗಿರುವ ವಿರುದ್ಧ ಮಹಿಳ ಪ್ರಯಾಣಿಕರು ವಿದ್ಯಾರ್ಥಿಗಳು ಹೈರಾಣಾಗಿ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಉಳಿದಿರುವ ಒಂದು ವರೆ ವರ್ಷದಲ್ಲಿ ಆದರೂ ಶಿವಮೊಗ್ಗದಲ್ಲಿ ಪ್ರಯಾಣಿಕರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಾಪಗ್ರಸ್ತವಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವ ಮೂಲಕ KSRTC ಅವ್ಯವಸ್ಥೆಯನ್ನ ಸರಿಯಾಗಿ ವ್ಯವಸ್ಥೆ ಮಾಡದಿದ್ದಲ್ಲಿ,
ಮುಂಬರುವ ಚುನಾವಣೆಯಲ್ಲಿ ಅದಕ್ಕೆ ತಕ್ಕ ಬೆಲೆ ತೆತ್ತಬೇಕಾಗತ್ತೆ ಎಂದು KSRTC Bus ಅವ್ಯವಸ್ಥೆಯಿಂದ ನೊಂದ ಮಹಿಳಾ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.





