ಶಿವಮೊಗ್ಗ, ಬಾಲಕನಿಗೆ ಸ್ಕೂಟರ್ ಓಡಿಸಲು ಕೊಟ್ಟ ವೆಹಿಕಲ್ ಓನರ್ ಮಹಿಳೆಗೆ ಕೋರ್ಟ್ ₹25,000 ಫೈನ್ ಹಾಕಿದೆ. ಅಕ್ಟೋಬರ್ 25 ರಂದು ಸಂಜೆ 7:26ರ ಸುಮಾರಿಗೆ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಎಸ್ಐ ಭಾರತಿ ಬಿ.ಎಚ್. ನಿರ್ಮಲಾ ಆಸ್ಪತ್ರೆಯ ಚಾನೆಲ್ ಬಳಿಯ 100 ಅಡಿ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತ ನಿಂತಿದ್ದರು.
ಈ ವೇಳೆ KA-14-H..-**** ರಿಜಿಸ್ಟ್ರೇಷನ್ನ ಹೋಂಡಾ ಡಿಯೋ ಸ್ಕೂಟರನ್ನ ಬಾಲಕನೊಬ್ಬ ಓಡಿಸಿಕೊಂಡು ಬರುತ್ತಿರುವುದು ಕಾಣಿಸಿದೆ. ಯಥಾಪ್ರಕಾರ, ಗಾಡಿ ಅಡ್ಡಹಾಕಿ, ಆತನ ಬಳಿ ಲೈಸೆನ್ಸ್ ಇತ್ಯಾದಿ ವಿಚಾರಿಸಲಾಗಿದೆ.ಆ ಬಳಿಕ, ಡಿಯೋ ಓನರನ್ನ ಕರೆಸಿಕೊಂಡು ಮೋಟಾರು ವಾಹನ ಕಾಯ್ದೆಯ ಕಲಂ 199(A) ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನದ ಮಾಲೀಕರಿಗೆ ಒಟ್ಟು ₹25,000 ದಂಡ ವಿಧಿಸಿ ಆದೇಶಿಸಿದೆ.
