ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದೇವನಹಳ್ಳಿ ಸಮೀಪದ ಕೆರೆಯಲ್ಲಿ ರಂಗನಾಥಪುರ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಈ ದುರ್ಗಟನೆ ನಡೆದಿದ್ದು, ರಾಕೇಶ್ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಮೃತ ಯುವಕನಾಗಿದ್ದಾನೆ.
ಚೌಡೇಶ್ವರಿ ದೇವಾಲಯದ ಬಳಿಯ ಕೆರೆಯಲ್ಲಿ ಗಣಪತಿ ವಿಸರ್ಜನೆಗೆ ಸಿದ್ಧತೆ ವೇಳೆ ಕೆರೆಗೆ ಇಳಿದಿದ್ದ ಯುವಕ ರಾಕೇಶ್ ಈ ವೇಳೆ ಆಯತಪ್ಪಿ ನೀರಿನೊಳಗೆ ಮುಳುಗಿದ್ದ ಎಂದು ತಿಳಿದು ಬಂದಿದೆ.
ಇಂದು ಬೆಳಗಿನಜಾವದವರೆಗೆ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದ ನಿರಂತರ ಶೋಧದ ಬಳಿಕ ರಾಕೇಶ್ ಅವರ ಮೃತದೇಹ ಪತ್ತೆಯಾಗಿದ್ದು ಯುವಕನ ಸಾವಿನ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶೋಕದ ವಾತಾವರಣ ಉಂಟಾಗಿದೆ.





