ಶಿವಮೊಗ್ಗ,ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪತ್ರಕರ್ತರ ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ.ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಭಿನಂದಿಸಿ, ಶುಭ ಕೋರಿದೆ.
ಪ್ರಜಾವಾಣಿ ಪತ್ರಿಕೆ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಮತ್ತು ಶಿಲ್ಪ ದಂಪತಿಯ ಪುತ್ರಿ ಎನ್. ಸಾನ್ವಿ, ಶೇಕಡ ೯೩.೪೪ ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಗಳಿಸಿದ್ದಾಳೆ.
ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಉಪಸಂಪಾದಕ ಆರ್. ಅಭಿನಂದನ್ ಮತ್ತು ಸವಿತಾ ದಂಪತಿಗಳ ಪುತ್ರಿ ಎ. ಸಂಜನಗೆ ಶೇ. ೯೫ ಅಂಕಗಳಿಸಿದ್ದಾರೆ.
ಸಾತ್ವಿಕ ಪತ್ರಿಕೆ ಸಂಪಾದಕ ಸತೀಶ್ ರವರ ಪುತ್ರ ಎಂ. ಎಸ್. ಸಾತ್ವಿಕ್ ಶೇ. ೮೦.೬೦ ಅಂಕ ಗಳಿಸಿದ್ದಾರೆ. ಧ್ರುವ ಎಸ್. ಹೆಗಡೆ* ಶೇ.೯೫.೫೦ ಸಾಧನೆ ಮಾಡಿದ್ದಾರೆ. ಈತ ಶಿವಮೊಗ್ಗ ವಿಕಾಸ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದು, ವಿಜಯವಾಣಿ ಶಿವಮೊಗ್ಗ ಬ್ಯೂರೋ ಮುಖ್ಯ ಉಪಸಂಪಾದಕ ಸಂದೇಶ ಹೆಗಡೆ ಹಾಗೂ ಆಶಾ ಹೆಗಡೆ ದಂಪತಿ ಪುತ್ರ.ಪತ್ರಕರ್ತ ಆದಿತ್ಯಪ್ರಸಾದ್ ಹಾಗೂ ಡಾ. ಮೈತ್ರೇಯಿರವರ ಪುತ್ರ ಸಿದ್ಧಾರ್ಥ ಎ. ಕಶ್ಯಪ ೬೨೫ಕ್ಕೆ ೬೦೦ ಅಂಕಗಳನ್ನು ಗಳಿಸಿ ಹೆಮ್ಮೆ ತಂದಿದ್ದಾರೆ.
ಪತ್ರಕರ್ತೆ ಪದ್ಮಿನಿ ವಿಶ್ವನಾಥ್ ಮತ್ತು ವಿಶ್ವನಾಥ್ ದಂಪತಿಗಳ ಪುತ್ರಿ ಪ್ರೇರಣಾ ಕೆ. ರಾವ್ ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ ೫ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ಸ್‌ನಲ್ಲಿ ಚಿನ್ನದ ಪದಕ ಸ್ವೀಕರಿಸಿದ್ದಾರೆ.
ಚೇತನಾಗೆ 553 ಮಾರ್ಕ್ಸ್ ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಎಚ್.ವೈ.ಚೇತನಾ ಎಸ್‌ಎಸ್‌ಎಲ್‌ಸಿಯಲ್ಲಿ 553 ಅಂಕ ಗಳಿಸಿದ್ದಾರೆ. ಈಕೆ ವಿಜಯವಾಣಿ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ಬಿ.ಆರ್.ಸೌಮ್ಯಾ ದಂಪತಿಯ ಪುತ್ರಿ.

ತನ್ನಿಷ್ಕ ನುಡಿಗಿಡ ಪತ್ರಿಕೆ ಡಿ ಟಿ ಪಿ ಆಪರೇಟರ್ ಶೋಭ ಅವರ ಮಗ.ಎನ್ ಇ ಎಸ್ ಪ್ರೌಢಶಾಲಾ ಯಲ್ಲಿ ಓದ್ದಿದ್ದು 551 ಅಂಕ ಗಳಿಸಿ ಕ್ಲಾಸಿಗೆ ಮೊದಲಿಗ ನಾಗಿದ್ದಾರೆ.
ಈ ಎಲ್ಲಾ ಪ್ರತಿಭಾನ್ವಿತರಿಗೆ ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ಅಭಿನಂದನೆಗಳು.

