ಶಿವಮೊಗ್ಗ,ಸರ್. ಎಂ.ವಿ ಅವರ ವಿಚಾರಧಾರೆಗಳು ನಿರಂತರವಾಗಿ ತಿಳಿಸುವಂತಾಗಲಿ, ಎಂದು ನಗರದ ಮಾಜಿ ಶಾಸಕರಾದ ಕೆ.ಬಿ ಪ್ರಸನ್ನ ಕುಮಾರ್ ಅವರು ಅಭಿಪ್ರಾಯಪಟ್ಟರು.
ಇಂದು ನಗರದ ಶಾಸಕರ ವಿಶೇಷ ಅನುದಾನದಲ್ಲಿ ವಿನ್ಯಾಸಗೊಂಡಂತಹ ಸರ್.ಎಂ .ವಿ ಅವರ ಪುತ್ತಳಿಯ ಹಿಂಭಾಗದ ಕಲಾಕೃತಿಗೆ ವಿಪ್ರ ಸಮಾಜದ ವಿವಿಧ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್. ಎಂ.ವಿ ಅವರ ವ್ಯಕ್ತಿತ್ವ ಅಂದಿನ ಕಾಲದಲ್ಲೇ ಬ್ರಿಟಿಷರು ಅರಿತು ಅಭಿವೃದ್ಧಿ ಕೆಲಸಗಳಿಗೆ ಅವರನ್ನು ತೊಡಗಿಸಿಕೊಂಡಿದ್ದರು ಶಿವಮೊಗ್ಗ ಜಿಲ್ಲೆಗೆ ಅವರ ಕೊಡುಗೆ ಅಪಾರ ವಿ.ಐ.ಎಸ್.ಎಲ್. ಸಾವಿರಾರು ಜನಕ್ಕೆ ದಾರಿ ದೀಪವಾಗಿತ್ತು ಅವರು ಸ್ಥಾಪಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಹಳಷ್ಟು ಮೈಲಿಗಲ್ಲನ್ನು ಸ್ಥಾಪಿಸಿತು.
ಸರ್.ಎಂ.ವಿ ಅವರು ವಿಪ್ರ ಸಮಾಜಕ್ಕೆ ಮಾತ್ರ ಸೀಮಿತವಲ್ಲದೇ ಇಡೀ ದೇಶಕ್ಕೆ ಅವರು ಅಭಿವೃದ್ಧಿ ಪತಗಳಲ್ಲಿ ಮನೆ ಮಾತಾಗಿದ್ದರು ಇಂದಿನ ಮಕ್ಕಳಿಗೆ ಅವರ ವಿಚಾರಧಾರೆಗಳು ತಿಳಿಸುವಂತಹ ಕೆಲಸವಾಗಬೇಕು ಕೇವಲ ಪಠ್ಯಪುಸ್ತಕದಲ್ಲಿ ಅಲ್ಲದೆ ಸಾಮಾಜಿಕವಾಗಿ ನಿರಂತರವಾಗಿ ಅವರ ಯೋಚನೆಗಳು ಮಕ್ಕಳಿಗೆ ತಿಳಿಸುವಂತಾಗಬೇಕು ಸಮಾಜದ ವಿವಿಧ ಸಂಘಗಳಲ್ಲಿ ಇರುವ ಅಧ್ಯಕ್ಷರುಗಳು ಯುವಕರಲ್ಲಿ ಇರುವ ಕಲೆಗಳನ್ನು ಗುರುತಿಸಿ ಬೆಳೆಸುವಂತೆ ಆಗಬೇಕು.
ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಯುವಕರನ್ನು ಮಹಾನಗರ ಪಾಲಿಕೆಗೆ ಸದಸ್ಯರಾಗುವಂತೆ ಮಾಡೋಣ ಈ ಹಿಂದೆ ಪಾಲಿಕೆ ವತಿಯಿಂದ ಆಚಾರ್ಯತ್ರಯರ ಜಯಂತಿಗೆ ಅನುದಾನ ದೊರೆಯುತ್ತಿತ್ತು ಈಗ ಇಲ್ಲದಂತಾಗಿದೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಪಾಲಿಕೆ ಸದಸ್ಯರು, ಉಪಮೇಯರ್ ,ಮೇಯರ್ ಆಗುವಂತೆ ಸಮಾಜದವರು ಬೆಳೆಸಲಿ ಎಂದರು.
ನಂತರ ಮಾತನಾಡಿದ ಡಾಕ್ಟರ್ ಶ್ರೀಧರ್ ರವರು ಯುವಕರನ್ನು ಸೇರಿಸುವ ಕೆಲಸ ವಿಪ್ರ ಯುವ ಪರಿಷತ್ ಮಾಡುತ್ತಿದೆ ಪುತ್ತಳಿಯ ಹತ್ತಿರ ಹಲವಾರು ಕಾರ್ಯಕ್ರಮಗಳನ್ನು ರೂಪಿಸೋಣ ಅದರ ಸ್ವಚ್ಛತೆಗೆ ಗಮನ ಹರಿಸೋಣ, ರಾತ್ರಿ ಸಂದರ್ಭದಲ್ಲಿ ಬೆಳಕಿನ ವ್ಯವಸ್ಥೆ ಇನ್ನು ಹೆಚ್ಚಾಗಿ ಆಗುವಂತೆ ಮಾಡೋಣ ವಿಶೇಷವಾಗಿ ಕಲಾಕೃತಿಮಾಡಿರುವಂತಹ ಶಿಲ್ಪಿ ಜೀವನ್ ಅವರಿಗೆ ಹಾಗೂ ಅನುದಾನವನ್ನು ನೀಡಿರುವಂತಹ ಶಾಸಕರಾದ ಚನ್ನಬಸಪ್ಪನವರಿಗೆ ಧನ್ಯವಾದವನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರಾದ ಸುರೇಶ ನಾಡಿಗ್ , ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ರಘುರಾಮ್, ವಿಪ್ರ ಯುವಪರಿಷತ್ತಿನ ಅಧ್ಯಕ್ಷರಾದ ರಾಘವೇಂದ್ರ ಉಡುಪ, ಬಿಓಐ ನ ಅಧ್ಯಕ್ಷರಾದ ವೆಂಕಟೇಶ್ ರಾವ್ , ಮಾಧವ ಮೂರ್ತಿ, ದಿನದಯಾಳು, ಸುಬ್ರಮಣ್ಯ ಭಟ್, ಜಿಎಸ್ ಅನಂತ, ಹೆಚ್ ಡಿ ಚಂದ್ರಶೇಖರ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು


