ಶಿವಮೊಗ್ಗದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸ ಹಾಡುಹಗಲೇ ನಡೆದಿದೆ. ಈ ನೆಲದ ಕಾನೂನನ್ನು ಕಾಪಾಡಬೇಕಾದ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿದ್ದಾರೆಯೇ?. ಅಥವಾ ಕುರುಡು ಕಾಂಚನ ಕೆಲಸ ಮಾಡಿತೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ.
ಇಂತಹದೊಂದು ಪ್ರಶ್ನೆಗೆ ಕಾರಣವಾಗಿರುವುದು ಶಿವಮೊಗ್ಗದ ಹಾಲ್ಕೊಳ ಸರ್ಕಲ್ ಬಳಿ ಇರುವ ಒಂದು ಬೃಹತ್ ಗಾತ್ರದ ದಿಡೀರ್ ಉದ್ಭವವಾದ ಕಾಂಪೌಂಡ್..!!!

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ನಲ್ಲಿ ಒಂದು ಖಾಸಗಿ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿ ಮನೆಯೊಂದಿದೆ. ಈ ಮನೆಯ ಮುಂಭಾಗದಲ್ಲಿ ಹಳೆಯ ತಂತಿ ಗ್ರಿಲ್ ಅಳವಡಿಸಿದ ಕಾಂಪೌಂಡ್ ಇತ್ತು . ಇದೀಗ ಹಳೆಯ ಗ್ರಿಲ್ ಬೇಲಿಯ ಮುಂಭಾಗದ 5 ಅಡಿ ಒತ್ತುವರಿ ಮಾಡಿಕೊಂಡು ದೊಡ್ಡದಾದ ಸುಮಾರು 10 ಅಡಿ ಹೊಸ ಕಾಂಪೌಂಡ್ ನಿರ್ಮಾಣಗೊಂಡಿದೆ.
ಮೊದಲು ಗ್ರಿಲ್ ಬೇಲಿಯ ಕಾಂಪೌಂಡ್ ಹೊರಗಿದ್ದ ಮೂರ್ನಾಲ್ಕು ವಿದ್ಯುತ್ ಕಂಬಗಳು ಈಗ ಹೊಸ ಕಾಂಪೌಂಡ್ ಒಳಭಾಗದಲ್ಲಿ ಸೇರಿಕೊಂಡಿದೆ. ಧಿಡೀರನೆ ಈ ರೀತಿಯ ಪವಾಡ ನಡೆಯಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಉದ್ಭವವಾಗಿದೆ ಆದರೆ ಪ್ರಶ್ನೆ ಇರುವುದು ಕಾಂಪೌಂಡ್ ಕಟ್ಟಿರುವ ಬಗ್ಗೆ ಅಲ್ಲ,
ಆದರೆ ಚರಂಡಿ ಪಕ್ಕ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಹೇಗೆ ಕಟ್ಟಲು ಸಾಧ್ಯ? ಏಕೆಂದರೆ ಆಲ್ಕೊಳದಿಂದ ಗಾಡಿಕೊಪ್ಪ ಕಡೆ ಹಾದು ಹೋಗುವ ರಸ್ತೆಯ ಒಂದು ಕಡೆ ಚರಂಡಿ ಪಕ್ಕದಲ್ಲಿ ಇಂಟೆರ್ ಲಾಕ್ ಅಳವಡಿಸಿರುವ ಪಾದಾಚಾರಿ ಮಾರ್ಗ ಕಂಡುಬರುತ್ತದೆ. ಆದರೆ ಕಾಂಪೌಂಡ್ ನಿರ್ಮಾಣ ಮಾಡಿರುವ ಜಾಗದಲ್ಲಿ ಪಾದಚಾರಿ ಮಾರ್ಗ ಮಾಯವಾಗಿದೆ.

ಹಳೆಯ ಮತ್ತು ಹೊಸ ಕಂಪೌಂಡ್ ಮದ್ಯೆ ಸುಮಾರು 5 ಅಡಿ ಜಾಗವಿರುವುದು ಕಣ್ಣಿಗೆ ಎರಚುವಂತೆ ಇದೆ. ಹೀಗಿದ್ದರೂ ಸಹ ಧಿಡೀರ್ ಎಂದು ಕಾಂಪೌಂಡ್ ನಿರ್ಮಾಣವನ್ನು ಮಾಲೀಕ ಹೇಗೆ ಕಟ್ಟಿದರು ಹಾಗೂ ವಿದ್ಯುತ್ ಕಂಬಗಳು ಕಾಂಪೌಂಡ್ ಒಳ ಭಾಗದಲ್ಲಿ ಸೇರಿಕೊಂಡಿದ್ದು ಹೇಗೆ ? ಈ ಸಂಬಂಧ ಮೆಸ್ಕಾಂ ಇಲಾಖೆ ಹೇಗೆ ವಿದ್ಯುತ್ ನೀಡುವ ಮೂಲಕ ಅವಕಾಶ ನೀಡಿದೆ?
ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬದುಕಿದ್ದಾರಾ?ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬದುಕಿದ್ದಾರಾ? ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಲ್ಲಿ? ಎಂಬ ಸಾಲು ಸಾಲು ಪ್ರಶ್ನೆ ನಾವು ಎತ್ತುತ್ತಿಲ್ಲ ಇದು ಸಾರ್ವಜನಿಕರದ್ದಾಗಿದೆ..!?
ಇನ್ನು ಈ ಸಂಬಂಧ ಸಾರ್ವಜನಿಕರ ನಮ್ಮ ಗಮನಕ್ಕೆ ತಂದಾಗ ನಾವು ಕೂಡ ಏನು ಅನಾಹುತ ಆಗಿರಬಹುದು ಎಂದು ವೀಕ್ಷಿಸಿದಾಗ? ಹೀಗೆ ಕಾಂಪೌಂಡ್ ನಿರ್ಮಾಣ ಮಾಡಿರುವಾಗ ನಾಳೆ ದಿವಸ ವಿದ್ಯುತ್ ದುರಸ್ಥಿಯನ್ನು ಮೆಸ್ಕಾಂ ಅಧಿಕಾರಿಗಳು ಹೇಗೆ ಮಾಡುತ್ತಾರೆ? ಇನ್ನು ಈ ಸಂಬಂಧ ಮೆಸ್ಕಾಂ ಅಧಿಕಾರಿಗಳು ಮನೆಯ ಮಾಲೀಕನಿಗೆ ನೋಟೀಸ್ ಯಾಕೆ ನೀಡಿಲ್ಲ? ಯಾಕಿಷ್ಟು ಮನೆಯ ಮಾಲೀಕನ ಮೇಲೆ ಮಮತೆ..! ಪ್ರೀತಿಗೆ ಏನು ಕಾರಣ ಎಂಬುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆ?
ಇನ್ನು ಈ ಪ್ರಶ್ನೆಗೆ ಉತ್ತರವನ್ನು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಮೆಸ್ಕಾಂ ಕಚೇರಿಯ ಎಇಇ ಸುರೇಶ್ ಪಿಲ್ಲೈ ಅವರೇ ಉತ್ತರಿಸ ಬೇಕಿದೆ..?
ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವರು ಭೂ ಪರಿವರ್ತನೆ ಒಳಪಡಿಸಿದ್ದೇವೆ ಅನ್ನುತ್ತಾರೆ. ಹಾಗಾದರೆ ರಸ್ತೆಯ ಈ ಭಾಗದಲ್ಲಿ ಈ ಸಂಬಂಧ ಏನಾಗಿದೆ ಅನ್ನುವುದು ತಿಳಿಸಬೇಕಾಗಿದೆ.ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರಿಯ ಅಧಿಕಾರಿಗಳು ಯಾಕೆ ಜಾಣ ಮೌನವಾಗಿದ್ದರೆ?
ಇನ್ನು ಮಹಾನಗರ ಪಾಲಿಕೆ ವಾರ್ಡ್ ಇಂಜಿನಿಯರ್, ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಂಬಂಧ ಏನು ಮಾಡುತ್ತಿದ್ದಾರೆ?ಯಾರು ಹೇಗೆ ಏನು ಬೇಕಾದರೂ ಕಟ್ಟಿ ಕೊಳ್ಳಬಹುದಾ? ಹಾಗಾದ್ರೆ ಅರ್ಥ ಆದರೂ ಏನು? ಕಾನೂನು ಅನ್ನುವುದು ಎಲ್ಲರಿಗೂ ಒಂದೇ ಅಲ್ಲವೇ?
ಜನಸಾಮಾನ್ಯರ ಬಗ್ಗೆ ಅಧಿಕಾರಿಗಳಿಗೆ ಕಳಕಳಿ ಇಲ್ಲವೇ?
ಸದ್ಯ SIR ಅಂತ ಬಹುಮುಖ್ಯ ಕೆಲಸದಲ್ಲಿ ನಿರತರಾಗಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇದೆ, ಅದು ಸಹ ಮುಗಿಯುತ್ತ ಬಂದಿದೆ ಈಗಲಾದರೂ ಮಹಾನಗರ ಪಾಲಿಕೆಯ ಜೆಸಿಬಿ ಈ ಕಂಪೌಂಡ್ ಅಧಿಕೃತವೇ? ಅನಧಿಕೃತವೇ? ಎಂಬುದನ್ನು ಪರಿಶೀಲಿಸಿ ಘರ್ಜನೆ ಮಾಡಲಿದೆಯೇ?

ಪಾದಚಾರಿ ಮಾರ್ಗ (Footpath) ಈ ರಸ್ತೆಯಲ್ಲಿ ಬೇಡವೇ ಬೇಕೆ ಎಂಬುದನ್ನು ತೀರ್ಮಾನ ಮಾಡಲಿ. ಇಲ್ಲವೇ ಇಂಥದೊಂದು ಕಾಂಪೌಂಡ್ ನಿರ್ಮಾಣ ಮಾಡಲು ಹೇಗೆ ಸಾಧ್ಯ? ಎಂಬುದನ್ನಾದರೂ ಸಾರ್ವಜನಿಕರಿಗೆ ಸ್ಪಷ್ಟಪಡಿಸಲಿ. ಇದು ನಗರದೊಳಗೆ ಹಾದುಹೋಗುವ ಮುಖ್ಯ ರಸ್ತೆ ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಕೂಡ ಹೌದು. ಇಲ್ಲಿಯೇ ಪಾದಚಾರಿ ಸುರಕ್ಷತೆಗೆ ಇರುವ ಫುಟ್ ಪಾತ್ ಇಲ್ಲದಿದ್ದರೆ ಪಾದಾಚಾರಿಗಳು ನಡೆದು ಹೋಗಲು ಹೇಗೆ ಸಾಧ್ಯ?.
ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಮೆಸ್ಕಾಂ ಅಧಿಕಾರಿಗಳು ಹೀಗೆ ಸಂಬಂಧಪಟ್ಟ ನಾನು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯಕ್ಕೆ ಚಳಿ ಬಿಡಿಸಲುಮತ್ತೊಮ್ಮೆ ಲೋಕಾಯುಕ್ತರು ಶಿವಮೊಗ್ಗಕ್ಕೆ ಭೇಟಿ ನೀಡಿ ಚಾಟಿ ಬೀಸುವ ಜರೂರತ್ತು ಹೆಚ್ಚಾಗಿದೆ ಹಾಗೂ ಈ ಮೂಲಕ ಅದ್ವಾನಗೊಂಡಿರುವ ಸಾರ್ವಜನಿಕರ ರಸ್ತೆಯ ಸುಗಮ ಸಂಚಾರಕ್ಕೆ ಸರಿಪಡಿಸಿ ಕೊಡಬೇಕಾಗಿದೆ.
ಹಾಗೂ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂಬ ಸಂದೇಶ ಮನೆಯ ಮಾಲೀಕನಿಗೆ ತಲುಪಿಸಬೇಕಾಗಿದೆ. ಇದೆಲ್ಲ ಸಾರ್ವಜನಿಕರ ಕಳಕಳಿಯಾಗಿದೆ. ನಮ್ಮದೇನಿದ್ದರೂ ಜನಪರ ಕಾಳಜಿಯಷ್ಟೇ. ಇದೆಲ್ಲ ಸರಿಪಡಿಸಿ ಕೊಡಲು ಆಗುವುದಿಲ್ಲವೆಂದರೆ ವಿವಿಧ ಇಲಾಖೆಗಳ ಅಧಿಕಾರಿಗಳೇ ಜನರ ಮುಂದೆ ನಗೆಪಾಟಲಿಗೆ ಈಡಾಗುತ್ತೀರಾ ಅಷ್ಟೇ..!?


