ಹೊಸನಗರ | ಕೊಡಚಾದ್ರಿ ಟ್ರೆಕ್ಕಿಂಗ್‌ ; ಹೃದಯಾಘಾತದಿಂದ ಸಿನಿಮಾ ನಿರ್ಮಾಪಕ ಬಾ.ಮಾ.ಹರೀಶ್ ಪುತ್ರ ದುರ್ಮರಣ

ಅವಘಡ ದುರಂತ

ಹೊಸನಗರ, ಕೊಡಚಾದ್ರಿ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಬೆಂಗಳೂರಿನ ಯುವಕ ಉಲ್ಲಾಸ್ ಗೌಡ (28) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಪ್ರಸಿದ್ಧ ಸಿನಿಮಾ ನಿರ್ಮಾಪಕ ಬಾ.ಮಾ.ಹರೀಶ್ ಅವರ ಪುತ್ರ. ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯರೊಂದಿಗೆ ಟ್ರೆಕ್ಕಿಂಗ್ ತೆರಳಿದ್ದಾಗ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಉಲ್ಲಾಸ್ ಗೌಡ ಹಾಗೂ ಅವರ ಸ್ನೇಹಿತರು ಒಟ್ಟು 13 ಮಂದಿ ಬೆಂಗಳೂರಿನಿಂದ ಟಿಟಿಯಲ್ಲಿ ಕೊಡಚಾದ್ರಿಗೆ ಬಂದಿದ್ದರು, ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದವರೆಗೆ ಟ್ರೆಕ್ಕಿಂಗ್ ಹೊರಟಿದ್ದರು. ಮೇಲಿನವರೆ ಟ್ರಕ್ ಮಾಡಿದ ಅವರು ವಾಪಸ್ ಇಳಿಯುವಾಗ ದೇವಸ್ಥಾನದ ಬಳಿ ಉಲ್ಲಾಸ್ ಅವರಿಗೆ ಎದೆನೋವು ಕಾಣಿಸಿದೆ.

ಅಲ್ಲಿ ಕುಸಿದು ಬಿದ್ದ ಅವರನ್ನು ಬೆಟ್ಟದಿಂದ ಕೆಳಕ್ಕೆ ತಂದು ನಗರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಂದ ಹೊಸನಗರ ತಾಲೂಕು ಆಸ್ಪತ್ರೆಗೆ ಕರೆತರುವಾಗ ಉಲ್ಲಾಸ್‌ ಸಾವನ್ನಪ್ಪಿದ್ಧಾರೆ.

Author