ಶಿವಮೊಗ್ಗ | 6 ತಿಂಗಳಲ್ಲಿ 24.50 ಲಕ್ಷ ರೂ. ಮೌಲ್ಯದ ಗಾಂಜಾ ವಶ : ಎಸ್ಪಿ. ನಿಖಿಲ್. ಬಿ ಮಾಹಿತಿ

ಕ್ರೈಂ

ಶಿವಮೊಗ್ಗ,ವಿವಿಧ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ, ಅಮಾನತ್ತು ಪಡಿಸಿಕೊಂಡ ಗಾಂಜಾ ಮೌಲ: 24,55,640/- ರೂ. ಒಟ್ಟು 59 ಕೆ.ಜಿ 119 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಬಿ. ನಿಖಿಲ್, ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ, ಶಿವಮೊಗ್ಗ ಜಿಲೆಯ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳು ಮತ್ತು ಪಂಚರ ಸಮಕ್ಷಮ ಮಾಚೇನಹಳ್ಳಿಯಮೆ.‌ಸುಶ್ರುತಾ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ ಮೆಂಟ್ ನೆರವಿನಿಂದ ಶನಿವಾರ ನಾಶ ಪಡಿಸಲಾಯಿತೆಂದರು.

ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ, ಅಮಾನತ್ತುಪಡಿಸಿಕೊಂಡಿರುವ ಸುಮಾರು 16 ಕೆ.ಜಿ ಮಾದಕ ವಸ್ತು ಗಾಂಜಾವನ್ನು ನ್ಯಾಯಾಲಯದ ಪಡೆದುಕೊಂಡು ಮುಂದಿನ ದಿನಗಳಲಿ, ನಾಶಪಡಿಸಲಾಗುವುದು ಎಂದರು.

ದ್ರೋಣ್ ಕ್ಯಾಮೆರಾ ಕಣಾವಲು :

ಜಿಲ್ಲೆಯಾದ್ಯಂತ ಡ್ರೈ ಕ್ಯಾಮರಾ ಕಾಲನ್ನು ಕೈಗೊಳ್ಳಲಾಗಿದ್ದು, ಹೊರ ಮುಖಗಳಲಿ, ಆ‌ ಪ್ರದೇಶಗಳಲಿ., ಗಾಂಜಾ ಬೆಳೆದಿರುವ ಬಗೆ, ಹಾಗೂ ಶಾಲಾ ಕಾಳಿಯಗಳ ಸುತ್ತ ಮುತ್ರ, ನಗರದ ಖಾಲೀ ಲೇ ಔಟ್ ಗಳ ಹಾಗೂ ಚಾನೆಲ್ ಏರಿಯಾಗಳ ಮೇಲೆ ಡೈಗ್ ಪಾರಿಸಿ, ಪತ್ರೆಗೆ ಕ್ರಮ ಕೈಗೊಳ್ಳಲಾಗಿರುತ್ತದೆ.

ಗಾಂಜಾ ಕಿಟ್ನಿಂದ ಪರೀಕ್ಷೆ:

ಈ ಬಾರಿ ವಿಶೇಷವಾಗಿ ಪದವಿ ಕಾಲೇಜುಗಳಲಿ, ಯುವ ಜನತೆಯು ಮಾದಕದ್ರವ್ಯ ವ್ಯಸನಕ್ಕೆ ತುತ್ತಾಗುವುದನ್ನು, ತಡೆಯುವ ಹಿನ್ನೆಲೆಯಲಿ,ಗಾಂಜಾ ಸೇವನೆಯ ಬಗ್ಗೆ ಜಿಲ್ಲೆಯಾದ್ಯಂತ 21 ಕಾಲೇಜುಗಳಿಲಿ, ಗಾಯಾ ಟೆನ್ನಿಂಗ್ ಕಿಟ್ ಮುಖೇನ ಒಟ್ಟು 484 ಜನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ 03 ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ, ನಂತರ ಸದರಿ ವಿದ್ಯಾರ್ಥಿಗಳು ಹಾಗೂ ಪೋಷಕರ ಅಪ್ಪ ಸಮಾಲೋಚನೆ ನಡೆಸಿ, ಗಾರಾ ಸೇವನೆಯ ವಿರುದ್ಧ ಕೈಗೊಳ್ಳಲಾಗುವ ಕಾನೂನು ಕ್ರಮ ಹಾಗೂ ದುಷ್ಪರಿಣಾಮಗಳ ಬಗ್ಗೆ ಸೂಕ್ತ ತಿಳಿವಳಿಕೆ ನೀಡಲಾಗಿದೆ ಎಂದರು.ಕೆಎಸ್‌ಪಿ ಅಪಿಕೇಷನ್ ನಲ್ಲಿನ Drug Free Karnataka ದ ಬಗ್ಗೆ ಜಾಗೃತಿ ಮೂಡಿಸಿದೆ.

ರಾಷ್ಟ್ರೀಯ ಮಾದಕ ವಸ್ತು ಸಹಾಯವಾಣಿ 1908 ಬಳಕೆಯ ಬಗ್ಗೆ, ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಮಾದಕ ವಸ್ತು ವ್ಯಸನಕ್ಕೆ, ತುತ್ತಾದವರಿಗೆ ಆಪ್ತ ಸಮಾಲೋಚನೆ ಸಂಬಂಧ ಇರುವ ರಾಷ್ಟ್ರೀಯ ಮಾನಸ್ ಸಹಾರ ಸಂಖ್ಯೆ 1933 ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Author