ಶಿವಮೊಗ್ಗ | ಹಾಡುಹಗಲೇ ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸ ; ಕಣ್ಣಿದ್ದು ಕುರುಡರಾದ ಅಧಿಕಾರಿಗಳು..!?

ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ನಲ್ಲಿ ಒಂದು ಖಾಸಗಿ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿ ಮನೆಯೊಂದಿದೆ. ಈ ಮನೆಯ ಮುಂಭಾಗದಲ್ಲಿ ಹಳೆಯ ತಂತಿ ಗ್ರಿಲ್ ಅಳವಡಿಸಿದ ಕಾಂಪೌಂಡ್ ಇತ್ತು .‌ ಇದೀಗ ಹಳೆಯ ಗ್ರಿಲ್ ಬೇಲಿಯ ಮುಂಭಾಗದ 5 ಅಡಿ ಒತ್ತುವರಿ ಮಾಡಿಕೊಂಡು ದೊಡ್ಡದಾದ ಸುಮಾರು 10 ಅಡಿ ಹೊಸ ಕಾಂಪೌಂಡ್ ನಿರ್ಮಾಣಗೊಂಡಿದೆ.