ಸಾಗರ | KSRTC ಬಸ್‌ ಕಂಡಕ್ಟರ್‌ ವಿರುದ್ಧ ಪೊಲೀಸ್‌ಗೆ ಕಂಪ್ಲೇಂಟ್‌ ನೀಡಿದ ವಿದ್ಯಾರ್ಥಿಗಳು

ಕ್ರೈಂ

ಸಾಗರ, ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಸಾಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಸೊರಬ ಭಾಗದಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ನಿರ್ವಾಹಕನೊಬ್ಬ ಅನುಚಿತವಾಗಿ ವರ್ತಿಸಿ, ಅವಹೇಳನ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಾಲೂಕಿನ ಕೆಲವು ಗ್ರಾಮೀಣ ಭಾಗಗಳಿಂದ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳನ್ನು ಕೆಲ ನಿರ್ವಾಹಕರು ಹಾಗೂ ಚಾಲಕರು ತಾತ್ಸಾರ ಮನೋಭಾವದಿಂದ ನೋಡುತ್ತಿದ್ದಾರೆ.ಉದ್ದೇಶಪೂರ್ವಕವಾಗಿ ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದೆ ಇರುವುದು ಹಾಗೂ ಇದನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳನ್ನು ಅವಮಾನಿಸುವ ವಿದ್ಯಮಾನ ನಡೆಯುತ್ತಿದೆ ಎಂದು ದೂರಲಾಗಿದೆ.

ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ತಾತ್ಸಾರ ಮನೋಭಾವದಿಂದ ನೋಡದಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಭಿಷೇಕ್ ಶೆಟ್ಟಿ, ಮೋಹನ್ ಹೆಚ್.ಜಿ, ಪುನೀತ್.ಜಿ, ದಯಾನಂದ್, ಪ್ರೀತಮ್, ಶ್ರೇಯಸ್, ಚೇತನ್, ರಾಕೇಶ್.ಆರ್, ಆಕಾಶ್.ಎಸ್.ಕೆ, ಜೀವನ್, ಪ್ರಜ್ವಲ್, ದರ್ಶನ್, ಮಣಿ ಎಸ್.ಎಂ, ಸಂಜಯ್ ಹಾಗೂ ಡಿ.ಕೆ.ಭರತ್ ಉಪಸ್ಥಿತರಿದ್ದರು.

Author