ಶಿವಮೊಗ್ಗ | ಸೈಬರ್ ವಂಚನೆಗೆಗೊಳಗಾದ ಮಹಿಳಾ ಅಧಿಕಾರಿ

ಕ್ರೈಂ

ಶಿವಮೊಗ್ಗ, ಸಹೋದ್ಯೋಗಿಯೊಬ್ಬರಿಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ ಬೆನ್ನಲ್ಲೇ, ಮಹಿಳಾ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ ₹98 ಸಾವಿರ ನಗದು ಆನ್‌ಲೈನ್ ಮೂಲಕ ನಾಪತ್ತೆಯಾಗಿದೆ.

ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಹ್ಯಾಕ್ ಮಾಡಿ ವಂಚನೆಸರ್ಕಾರಿ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿರುವ ಮಹಿಳೆ, ತಮ್ಮ ಸಹೋದ್ಯೋಗಿಗೆ ಗೂಗಲ್ ಪೇ ಆ್ಯಪ್ ಮೂಲಕ ₹1,500 ಹಣ ಕಳುಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಅವರಿಗೆ ತಿಳಿಯದೆ ಮೊಬೈಲ್‌ಗೆ ಯಾವುದೋ ಆ್ಯಪ್ ಇನ್‌ಸ್ಟಾಲ್ ಆಗಿದೆ.

ಕೆಲವೇ ಹೊತ್ತಿಗೆ ಮೊಬೈಲ್ ಅನ್ನು ಹ್ಯಾಕ್ ಮಾಡಲಾಗಿದೆ.ಹ್ಯಾಕ್ ಮಾಡಿದ ಆ್ಯಪ್ ಮೂಲಕ ದೂರುದಾರರು ಶಿವಮೊಗ್ಗದ ಸಿ.ಇ.ಎನ್.‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Author