ಬಡ ದಲಿತ ಅಡುಗೆ ಸಿಬ್ಬಂದಿಗಳ ಮೇಲೆ ಶಿವಮೊಗ್ಗದ ಅಲ್ಪಸಂಖ್ಯಾತ ಅಧಿಕಾರಿಗಳ ಕಣ್ಣು ಬಿದ್ದೀತೆ?

ಶಿವಮೊಗ್ಗ

ಶಿವಮೊಗ್ಗದ ಶಂಕರಘಟ್ಟ ಅಲ್ಪಸಂಖ್ಯಾತ ಹಾಸ್ಟೆಲ್ ನಲ್ಲಿ ಕಳಪೆ ಆಹಾರ ಸರಬರಾಜು ಆಗುತ್ತಿದೆ ಎಂಬ ಒಂದು ಸುದ್ದಿ ಪ್ರಕಟವಾಗಿತ್ತು. ಆದರೆ ಸುದ್ದಿಯಲ್ಲಿ ಎಲ್ಲಿಯೂ ಸಹ ಅಡುಗೆ ಸಿಬ್ಬಂದಿಗಳು ಆಗಲಿ ಅಧಿಕಾರಿಗಳನ್ನು ಆಗಲಿ ಯಾರನ್ನ ಸಹ ದೂಷಣೆ ಮಾಡಿಲ್ಲ..!

ಅದಗ್ಯ್ ಸುದ್ದಿಯಲ್ಲಿ ಇರುವುದು ಅಧಿಕಾರಿಗಳು ಗಮನ ವಹಿಸಬೇಕಿದೆ ಎಂಬುದು ಅಷ್ಟೇ ಸುದ್ದಿ ಪ್ರಕಟಣೆ ಆಗಿದೆ.ಆದರೆ ಒಬ್ಬ ಅಧಿಕಾರಿ ಹಲವಾರು ವರ್ಷದಿಂದ ಶಿವಮೊಗ್ಗ ಅಲ್ಪಸಂಖ್ಯಾತ ತಾಲೂಕ್ ಕಚೇರಿಯಲ್ಲೇ ಕೆಲಸ ಮಾಡುತ್ತ ಬಲಿಷ್ಠ ರಾಜಕಾರಣಿಗಳ ಬೆಂಬಲದಿಂದ ಬಡ ದಲಿತ ಮಹಿಳಾ ಅಡುಗೆ ಅವರನ್ನು ತಮ್ಮ ವಿಚಾರ ಆಚೆ ಬಂದರೆ ಎಂಬ ಕಾರಣದಿಂದ ವಿದ್ಯಾರ್ಥಿಗಳಿಂದಾನೆ ದೂರು ಸಂಗ್ರಹಿಸಿ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಬಡ ದಲಿತ ಅಡುಗೆ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಹಿಂದೆ ಸಹ ಆ ಸಿಬ್ಬಂದಿಯನ್ನ ತಾಲೂಕ್ ಶಿವಮೊಗ್ಗ ಕಚೇರಿಯಿಂದ ವರ್ಗಾವಣೆ ಮಾಡಲಾಗಿತ್ತು ತಮ್ಮೆಲ್ಲ ವಿಚಾರ ತಿಳಿದಿದೆ ಎಂಬ ಕಾರಣಕ್ಕೆ ಅದೇ ರೀತಿ ಈಗ ಆ ಸಿಬ್ಬಂದಿ ಜೀವನನೇ ನಾಶ ಮಾಡಲು ಹೊರಟರೆ ಕೆಲಸದಿಂದ ತೆಗೆಯಲು ಎಂಬ ಆರೋಪ ತಾಲೂಕು ಅಧಿಕಾರಿ ಮೇಲೆ ಕೇಳಿಬರುತ್ತಿದೆ. ಬಡ ದಲಿತ ಮಹಿಳೆ ಜೀವನ ಕಟ್ಟಿಕೊಳ್ಳಳೆ ಬಾರದ? ಇಷ್ಟು ವೈಯಕ್ತಿಕ ಮಟ್ಟಿಗೆ ಒಂದು ಹೆಣ್ಣು ಮತ್ತೊಂದು ಹೆಣ್ಣಿನ ಮೇಲೆ ಜಿದ್ದಿಗೆ ಇಳಿಬೇಕಾ ಎಂಬ ಪ್ರಶ್ನೆ ಕೂಡ ಆಕ್ರೋಶಕ್ಕೆ ಕಾರಣವಾಗಿದೆ!

ಜೊತೆಗೆ ಅಲ್ಪಸಂಖ್ಯಾತ ತಾಲೂಕ್ ಅಧಿಕಾರಿ ಈ ಸಂಬಂಧ ಅರೋಗ್ಯ ಸಚಿವರು ಹಾಗೂ ಅಲ್ಪಸಂಖ್ಯಾತ ಸಚಿವರಿಗೆ ವಿದ್ಯಾರ್ಥಿಗಳೆ ಮನವಿ ಮಾಡಿ ಅಡುಗೆ ಸಿಬ್ಬಂದಿಗಳು ಬೇಡ ಇಲ್ಲಿ ಕೆಲಸಕ್ಕೆ ಎಂಬ ಕಾರಣವೆಂಬಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.ಹಾಗೂ ಇಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಹುಳ ಇರುವ ಅಕ್ಕಿ ಕೊಳೆತು ಹೋಗಿರುವ ತರಕಾರಿ, ಹುಳ ಹಿಡಿದಿರುವ ಬೇಳೆ ಕಾಳು ಈ ರೀತಿ ಅನೇಕ ಪದಾರ್ಥವನ್ನ ದೃಶ್ಯದಲ್ಲಿ ನೋಡಬಹುದಾಗಿದೆ.ಹಾಗೂ ತಾಲೂಕು ಅಲ್ಪಸಂಖ್ಯಾತ ಆ ಅಧಿಕಾರಿಗೆ ನಾವು ಹಾಳಾಗಿರುವ ಪದಾರ್ಥ ನೀಡಿ ಅಡುಗೆ ಚೆನ್ನಾಗಿ ಹೇಗೆ ಮಾಡಲು ಸಾಧ್ಯವೆಂದು ಪ್ರಶ್ನೆ ಮಾಡಿದರೆ ಕೊಳೆತು ಹೋಗಿರುವ ಪದಾರ್ಥ ತೆಗೆದು ಚೆನ್ನಾಗಿ ಅಡುಗೆ ಮಾಡಬಹುದು ಎಂದು ಉಡಾಫೆ ಉತ್ತರ ನೀಡುತ್ತಾರೆ ಈ ಸಂಬಂಧ ಈ ಅಧಿಕಾರಿ ನಮಗೆ ಕರೆ ಮಾಡದೇ ಬೇರೆ ಒಬ್ಬರಿಗೆ ಕರೆ ಮಾಡಿ ನಮ್ಮೊಂದಿಗೆ ಮಾತನಾಡಿ ಈ ರೀತಿ ಹೇಳುತ್ತಾರೆ ಸ್ವತಃ ನಮ್ಮ ನಂಬರ್ ನೀಡಿದ್ದರು ಸಹ.

ಎಲ್ಲದಕ್ಕು ಆ ಅಧಿಕಾರಿಗಳ ಬಳಿ ಉತ್ತರ ರೆಡಿ ಇದೆ.ಈ ರೀತಿ ಅವ್ಯವಸ್ಥೆ ಯಾಕಂದ್ರೆ ಅದುಕ್ಕೆ ಎಲ್ಲದಕ್ಕೂ ಅಡುಗೆ ಸಿಬ್ಬಂದಿಗಳು ಕಾರಣ ಇದು ಹೇಗಾಗಿದೆ ಅಂದರೆ Contract Basis ಮೇಲೆ ಇರುವಂತ ಬಡ ಅಡುಗೆ ಸಿಬ್ಬಂದಿಗಳ ಮೇಲೆ ಅಧಿಕಾರಿಗಳು ದರ್ಪಕ್ಕೆ ಮುಂದಾಗಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ.

ಇನ್ನು ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ರಾಘವೇಂದ್ರ ಅವರಿಗೆ ಸಂಪರ್ಕ ಮಾಡಿದರೆ ಕರೆ ಸ್ವೀಕಾರ ಮಾಡುತ್ತಿಲ್ಲ.ಹಾಗೂ ನಾನು 10 ವರ್ಷದಿಂದ ಇಲ್ಲೇ ಇದೆ ಇಲಾಖೆಯಲ್ಲಿ ಇದ್ದೇನೆ ನನಗೆ ಎಲ್ಲದು ಗೊತ್ತು ಅಂತ ದುರಹಂಕಾರದಿಂದ ಆ ಅಲ್ಪಸಂಖ್ಯಾತ ಅಧಿಕಾರಿ ಮಾತಾಡುತ್ತಾರೆ. 10 ವರ್ಷಕ್ಕೂ ಮೇಲ್ಪಟ್ಟು ಆ ಅಧಿಕಾರಿ ಇಲ್ಲಿ ಕರ್ತವ್ಯ ಮಾಡಲು ಅದು ಯಾವ ಶಕ್ತಿ ಕೃಪಾಕಟಾಕ್ಷ ಇವರ ಬೆಂಬಲಕ್ಕೆ ನಿಂತಿದೆ ಎಂಬ ಪ್ರಶ್ನೆ ಮೂಡಿದೆ?ತಮ್ಮ ಬಳಿ ಸರ್ಕಾರಿ ನೌಕರಿ ಇದೆ ನಾವು ಏನು ಬೇಕಾದರೂ ಮಾಡಬಹುದು ನಮಗೆ ಅವರು ಗೊತ್ತು ಇವರುಗಳು ಗೊತ್ತು ಅಂತೆಲ್ಲ ಏನೇ ದುರುಪಯೋಗ ಪಡಿಸಿಕೊಂಡರು ಕಾನೂನು ಎಲ್ಲರಿಗೂ ಒಂದೇ ಅಲ್ಲವೇ?ಎಲ್ಲದಕ್ಕೂ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಯಾಕೆ ಕಳಪೆ ಗುಣಮಟ್ಟ ಆಹಾರ ಪದಾರ್ಥ ಸರಬರಾಜು ಆಗುತ್ತಿರುವುದು ತುಂಬಾ ಮುಖ್ಯ ಪ್ರಶ್ನೆಯಾಗಿದೆ?

ಹಾಗೂ ಮಾಧ್ಯಮಗಳಿಗೆ ಮಾಹಿತಿ ತಿಳಿಸಿರುವ ಅಡುಗೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಬೇರೆ ರೀತಿಯಲ್ಲಿ ಅಡುಗೆ ಸಿಬ್ಬಂದಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಕೂಡ ನಮ್ಮ ಗಮನಕ್ಕೆ ಬಂದಿದೆ.ಹಾಗೂ ಇದೆಲ್ಲದಕ್ಕಿಂತ ಮುಖ್ಯವಾಗಿ ನಾವು ಸುದ್ದಿ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಸರಬರಾಜು ಆಗುತ್ತಿರುವ ಕುರಿತು ನ್ಯಾಯ ಸಿಗಬೇಕಾಗಿದೆ..!

ಯಾರೋ ಯಾರದೋ ವೈಯಕ್ತಿಕ ದ್ವೇಷಕ್ಕೆ ಕಾರಣಗಳಿಗೆ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಸರಬರಾಜು ಆಗಬಾರದು ಹಾಗೂ ಅಧಿಕಾರಿಗಳು ತಮ್ಮ ದರ್ಪದಿಂದ ತಮ್ಮ ಕೆಳಗಿನ ಕನಿಷ್ಠ ಜೀವನ ನಡೆಸುತ್ತಿರುವವರ ಮೇಲೆ ತಮ್ಮ ದರ್ಪ ತೋರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ನಾಳೆ ಮತ್ತೆ ಹೊಸ ಅಡುಗೆ ಸಿಬ್ಬಂದಿಗಳು ನಿಯೋಜನೆ ಆದರೂ ಕೂಡ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತೆ ಈ ಸಮಸ್ಯೆ ಉಲ್ಬಣ ಆಗಲಿದೆ.

ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಿ ನ್ಯಾಯ ಕೊಡಿಸುವ ಅವಶ್ಯಕತೆ ಹೆಚ್ಚಾಗಿದೆ.ಬಡವರು ದಲಿತರು ಮನೆ ಕಟ್ಟಿಕೊಂಡು ಮಾತ್ರಕ್ಕೆ ಅವರು ಅಕ್ರಮ ಹಣ ಸಂಪಾದನೆ ಮಾಡಿದ್ದಾರೆ ಅಂತ ಅಲ್ಲ ಈ ಸುದ್ದಿ ಮುಖೇಣ ತಿಳಿಸುವುದೇನೆಂದರೆ ನೀವು ಅಧಿಕಾರಿಗಳು ಸರಿ ಇದ್ದರೆ ವ್ಯವಸ್ಥೆ ಸರಿ ಇರಲಿದೆ. ನಿಮ್ಮ ತಪ್ಪುಗಳನ್ನು ಮುಚ್ಚಿ ಹಾಕಲು ಬಡಪಾಯಿಗಳನ್ನ ಬಲಿಕೊಡಬೇಡಿ.

ನಿಮಗೆ ಸರ್ಕಾರಿ ಸಂಬಳವಿದೆ ಆದರೆ Contract Basis ಮೇಲೆ ಇರುವ ದಲಿತ ಅಡುಗೆ ಸಿಬ್ಬಂದಿಗಳು ಜೀವನ ರೂಪಿಸಿಕೊಳ್ಳಬಾರದೆ? ಎಂಬ ಪ್ರಶ್ನೆ ನಾಗರಿಕರದ್ದು! ಮಾನವೀಯತೆ, ದುರದ್ರಷ್ಠಿ ಸಮಾಜಮುಖಿ ಕೆಲಸ ಅಧಿಕಾರಿಗಳದ್ದು ಆಗಿರಲಿ. ಬಡಪಾಯಿಗಳನ್ನು ಬಲಿಪಶು ಮಾಡಿದಲ್ಲಿ ಅದರ ಫಲ ನೀವು ಅನುಭವಿಸಬೇಕಾಗಲಿದೆ ಯಾಕಂದ್ರೆ ಎಲ್ಲರಲ್ಲೂ ತಪ್ಪು ಹುಳಕು ಇರಲಿದೆ.

ಸಮಸ್ಯೆಗಳು ಬಂದಾಗ ಕೊಡಲಿ ತಗೊಂಡು ಒಂದಷ್ಟು ಅಸಹಾಯಕರ ಬದುಕನ್ನೇ ಬೀದಿಗೆ ತರುವ ಹಕ್ಕು ಯಾರಿಗೆ ಯಾರು ಕೊಟ್ಟಿಲ್ಲ ಇಂದು ಅವರಿಗೆ ಮಾಡಿದರೆ ನಾಳೆ ನಿಮಗೆ ಕಾದಿರತ್ತೆ ಮರೆಯದಿರಿ! ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗು ಬದುಕಲು ಅವಕಾಶವಿದೆ ಮರೆಯದಿರಿ..!

Author