ಶಿವಮೊಗ್ಗ,ನೂತನವಾಗಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವ ಮಾನ್ಯ ಡಿ.ಕೆ ಶಿವಕುಮಾರ್ ರವರು ತಿಳಿಸಿರುವಂತೆ ಕಾರ್ಯಕರ್ತರ ಎಲ್ಲರು ಸಹ ತಮ್ಮ ತಮ್ಮ ಕ್ಷೇತ್ರ ಜಿಲ್ಲೆ ನಗರ ವಾರ್ಡ್ ಮಟ್ಟದಲ್ಲಿ ಅಧಿಕಾರ ಸ್ವೀಕಾರ ಸಮಾರಂಭವನ್ನು ನೇರ ಪ್ರಸಾರದ ಮುಖಾಂತರವೇ ವೀಕ್ಷಿಸಬೇಕಾಗಿ ತಿಳಿಸಿರುತ್ತಾರೆ.
ಬೆಂಗಳೂರು ನಗರದ ಪ್ರವೇಶಕ್ಕೆ ಸಹ ಬಹಳಷ್ಟು ನಿರ್ಬಂಧನೆಗಳಿದ್ದು ವಾಹನ ದಟ್ಟಣೆ ಹಾಗೂ ಗ್ಲಾಸ್ ಹೌಸ್ ನಲ್ಲಿ ಅಧಿಕ ಭದ್ರತಾ ವ್ಯವಸ್ಥೆ ಇರುವುದರಿಂದ ಬೆಂಗಳೂರು ನಗರಕ್ಕೆ ಬರಬಾರದೆಂದು ತಿಳಿಸಿರುತ್ತಾರೆ.
ಇದರ ಸಂಬಂಧ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ನಾಳೆ ದಿವಸ ದಿನಾಂಕ 03/06/2026ರ ಮಧ್ಯಾಹ್ನ 3:30 ರಿಂದ ಅಧಿಕಾರ ಸ್ವೀಕಾರ ಸಮಾರಂಭ ಮುಗಿಯುವ ತನಕ ಬೃಹತ್ ಎಲ್ಇಡಿ ವ್ಯವಸ್ಥೆಯನ್ನು ಮಾಡಿ ಕಾರ್ಯಕ್ರಮದ ನೇರ ವೀಕ್ಷಣೆಯನ್ನು ಏರ್ಪಡಿಸಿದ್ದು,
ಈ ಕಾರ್ಯಕ್ರಮದ ನೇತೃತ್ವವನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್. ಸಿ. ಯೋಗೇಶ್ ರವರು ವಹಿಸಿದ್ದು ಹಾಗೂ ಶಿವಮೊಗ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷರವರು ಕಾರ್ಯಕರ್ತರು ವಾರ್ಡ್ ಅಧ್ಯಕ್ಷರುಗಳ ಜೊತೆಯಾಗಿ ಸಿದ್ಧತೆ ನಡೆಸಿದ್ದು.
ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಾರ್ವಜನಿಕರು ಸನ್ಮಾನ್ಯ ಡಿಕೆ ಶಿವಕುಮಾರ್ ರವರು ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿ ಪದಗ್ರಹಣ ಸ್ವೀಕಾರ ಕಾರ್ಯಕ್ರಮದ ವೀಕ್ಷಣೆಗೆ ಬರಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಕೊರಿರುತ್ತಾರೆ.

