ಶಿವಮೊಗ್ಗ | ಜೂ. 05 ರಂದು ಹಣ್ಣಿನ ಮೇಳ ಉದ್ಘಾಟನೆ ಕಾರ್ಯಕ್ರಮ

ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘವು ಜೂ. 05 ರಂದು ಬೆಳಗ್ಗೆ 10.00ಕ್ಕೆ ನಗರದ ವಿನೋಬನಗರ 100 ಅಡಿ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಹಾಪ್ ಕಾಮ್ಸ್ ಜಾಗದಲ್ಲಿ ಹಣ್ಣಿನ ಮೇಳ ಆಯೋಜಿಸಿದ್ದು,

ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ನಿಗಮ ಮಂಡಳಿಯ ಅಧ್ಯಕ್ಷರುಗಳ ಭಾಗವಹಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Author