ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ..!

ರಾಜಕೀಯ

ವಿಜಯಪುರ,ರಾಜ್ಯ ಬಿಜೆಪಿ ನವೆಂಬರ್ ಕ್ರಾಂತಿ ವಿಚಾರ ಕುರಿತು ವಿಜಯಪುರದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ ನವೆಂಬರ್ ಕ್ರಾಂತಿ ಆಗದೆ ಹೋದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಉಳಿಯಲ್ಲ ಎಂದರು. ವಿಜಯೇಂದ್ರ ನಾಯಕತ್ವದಲ್ಲೇ ಮುಂದುವರೆದರೆ ಬಿಜೆಪಿ ಮುಗಿದು ಹೋಗಲಿದೆ ಎಂದು ವ್ಯಂಗ್ಯವಾಡಿದರು.

ಇನ್ನು ವಿಜಯೇಂದ್ರ ವಿರುದ್ಧ ಮುಗಿಬಿದ್ದ ಯತ್ನಾಳ್ ಇಂಟ್ ಸರ್ವೇ ಮಾಡಿದ್ದರೆ ಒದ್ದು ಹೊರಗೆ ಹಾಕುತ್ತಾರೆ ಇಲ್ಲವೇ ಬಿಜೆಪಿ ಅಸ್ತಿತ್ವ ಖಲಾಸ್ ಮಾಡುತ್ತಾರೆ ಎಂದರು.ಓಟು ಹಾಕಿ ಬಂದಮೇಲೆ ಹಿಂದಿನ ದಿನಾಂಕ ಹಾಕಿ ವಿಪ್ ಕೊಟ್ಟಿದ್ದಾರೆ ಮೂರ್ಖರು ಇವರು ಎಂದರು.

ಡಿಕೆಶಿ ಭಯಕ್ಕೆ ಓಟ್ ಮಾಡಿದಮೇಲೆ ವಿಪ್ ಕೊಟ್ಟಿದ್ದಾರೆ ಇವರಿಗೆ ಡಿಕೆಶಿ ಅಂದರೆ ಚಡ್ಡಿಯಲ್ಲಿ ಚರ್ ಅಂತ ಹೋಗಿರ್ತಾವೆ ಎಂದರು. ಡೂಪ್ಲಿಕೇಟ್ ಸಹಿ ತೆಗಿತೀನಿ ಅಂದಿರುವುದಕ್ಕೆ ಹೀಗಾಗಿದೆ ಎಂದು ಕುಟುಕಿದರು. ಡಿಕೆಶಿ ಎದರು ಟ್ರಾನ್ಸ್ಫರ್ ಗಾಗಿ ಕೈ ಕಟ್ಟಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮುಂದುವರೆದು ಮಾತನಾಡಿದ ಯತ್ನಾಳ್ ಮೊನ್ನೆ ರಟ್ಟೆ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬರಿ 45 ಜನರಿದ್ದರು. ಇವ್ರೆಲ್ಲ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೇಳುವವರು ಎಂದು ಕುಹೂಕವಾಡಿದರು. ಅದೇ ನಾನು ಭೇಟಿ ನೀಡಿದಾಗ ಸಾವಿರಾರು ಜನರು ಸೇರಿದ್ರು ಎಂದು ಜನಬೆಂಬಲವಿಲ್ಲಾವೆಂದು ತಿವಿದರು.

ಇನ್ನು ಅದು ಬಿ.ಸಿ. ಪಾಟೀಲ್ ಕ್ಷೇತ್ರವಾಗಿದೆ ಅವರು ಎಲ್ಲಿದ್ದರೋ ಗೊತ್ತಿಲ್ಲವೆಂದರು. ಇನ್ನು ಕ್ಷೇತ್ರದಲ್ಲಿ ಹಿಂದೂ ಯುವಕನ ಹತ್ಯೆಯಾದರು ಭೇಟಿ ನೀಡಿಲ್ಲವೆಂದರು.ಇವರು ಯಾವ ರೀತಿ ಪಕ್ಷ ನಡೆಸುತ್ತಿದ್ದಾರೆ ನೋಡಿ ಎಂದರು.ಇಂತಹವರನ್ನ ಇಟ್ಟುಕೊಂಡು ನವೆಂಬರ್ ನಂತರ ಪಟ್ಟ ಕಟ್ಟುತ್ತೇವೆ ಎಂದರೆ ನಾವೇನು ಮಾಡುವುದಕ್ಕೆ ಆಗಲ್ಲ. ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲವೆಂದರು.

ಈ ಹಿಂದಿನ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ನಮಗೆ ಅಪಾಯಿಂಟಮೆಂಟ್ ಕೊಡುತ್ತಿರಲಿಲ್ಲವೆಂದು ಆರೋಪಿಸಿದರು. ಏನಿದ್ದರೂ ವಿಜಯೇಂದ್ರನ ಹೋಗಳೋ ಕೆಲಸ ಮಾಡುತ್ತಿದ್ದರು ಎಂದರು. ಇನ್ನು ಇಂತಹ ಉಸ್ತುವಾರಿ ತೆಗೆದುಕೊಂಡು ಏನುಮಾಡೋದು, ಇದೆಲ್ಲ ನಂತರ ನನ್ನನ್ನ ಪಕ್ಷದಿಂದ ಹೊರಗೆ ಹಾಕಿದರೂ, ಇನ್ನು ಎಷ್ಟು ದಿನ ಅಂತ ನಿಷ್ಠಾವಂತರನ್ನ ಪಕ್ಷದಿಂದ ಹೊರಗಡೆ ಇಡುತ್ತೀರಾ? ಎಂದು ಯತ್ನಾಳ್ ಇದೇ ವೇಳೆ ಪ್ರಶ್ನೆ ಮಾಡಿದರು.

ವಿಜಯಪುರದಲ್ಲಿ ಮೇಯರ್ ಕಾರ್ಪೊರೇಟರ್ ಸೇರಿ ದೊಡ್ಡ ಗುಂಪೇ ನಮ್ಮೊಂದಿಗೆ ಇದೆ. ಇಷ್ಟು ದೊಡ್ಡ ತಂಡವನ್ನು ಪಕ್ಷದಿಂದ ಹೇಗೆ ಹೊರಗೆ ಹಾಕುತ್ತೀರಾ? ಎಂದು ಯತ್ನಾಳ್ ಪ್ರಶ್ನಿಸಿದರು.

ಕಾರ್ಯಕರ್ತರ ಭಾವನೆ ತಿಳಿದುಕೊಳ್ಳದ ಪಕ್ಷದಲ್ಲಿ ಅಸ್ತಿತ್ವ ಉಳಿಯಲ್ಲ ಎಂದು ಕಟುವಾಗಿ ಟೀಕಿಸಿದರು.

ನಾನು ಏನಾದರು ಬಿಜೆಪಿಗೆ ಓಟು ಹಾಕುತ್ತೀನಿ ಎಂಬ ವಿಷಯ ಬಿಜೆಪಿ ರಾಷ್ಟ್ರಧ್ಯಕ್ಷರಿಗೆ ಪತ್ರ ಬರೆಯದೆ ಹೋಗಿದ್ದರೆ ನಾನು ಕಾಂಗ್ರೆಸ್ ಗೆ ಮತ ಚಲಾಯಿಸಿದೀನಿ ಎಂದು ಸುದ್ದಿ ಹಬ್ಬಿಸುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರು ಕಾಂಗ್ರೆಸ್ ಗೆ ಅಡ್ಡ ಮತದಾನ ಮೂಲಕ ಓಟು ಮಾಡಿದರು ಎಂದು ತಿಳಿಯಲು ಸಿ.ಟಿ ರವಿ ತಂಡ ಬೇಕಾಗಿಲ್ಲ MLA ಫಂಡ್ ಹಂಚುವಾಗ ಬಿಜೆಪಿ ಶಾಸಕರಿಗೆ ಎಷ್ಟೆಷ್ಟು ಕೋಟಿ ಕೊಡುತ್ತಾರೆ ಎನ್ನುವುದರ ಮೇಲೆ ಗೊತ್ತಾಗಲಿದೆ ಅವರಿಗೆಲ್ಲ ಕಾಂಗ್ರೆಸ್ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪವ್ಯಸಗಿದರು.

Author