ಶಿವಮೊಗ್ಗ,ನಮ್ಮ ನೆಲದ ಜೀವನಾಡಿಯಾದ ಅನ್ನದಾತ ಹಾಗೂ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸುವ ಪವಿತ್ರ “ಮಣ್ಣು ಎತ್ತಿನ ಅಮಾವಾಸ್ಯೆ”ಯ (ಮಣ್ಣೆತ್ತಿನ ಅಮಾವಾಸ್ಯೆ) ಸುಸಂದರ್ಭದಲ್ಲಿ ಇಂದು ಸನಾತನ ಪರಂಪರೆಯಂತೆ ಗೋಮಾತೆಗೆ ಪ್ರೀತಿಯಿಂದ ಮೇವು ಉಣಿಸಿ, ಶ್ರದ್ಧಾಭಕ್ತಿಗಳಿಂದ ಗೋಪೂಜೆ ನೆರವೇರಿಸಿದ ಸಂಸದ ಬಿ. ವೈ. ರಾಘವೇಂದ್ರ.

ನಂತರ ಮಾತನಾಡಿದ ಸಂಸದರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗುವ ಈ ಶುಭ ದಿನದಂದು, ಕೃಷಿ ಕಾಯಕದ ದೇವರೆಂದೇ ಬಿಂಬಿತವಾಗಿರುವ ಎತ್ತುಗಳನ್ನು ಹಾಗೂ ನಮಗೆ ಅನ್ನ ನೀಡುವ ಪವಿತ್ರ ಮಣ್ಣನ್ನು ಪೂಜಿಸುವುದು ನಮ್ಮ ಮಣ್ಣಿನ ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ.
ಭೂಮಿತಾಯಿಯ ಒಡಲು ಹಸಿರಾಗಿ, ರೈತಾಪಿ ವರ್ಗದ ಶ್ರಮ ಸಾರ್ಥಕಗೊಳ್ಳಲಿ. ಪ್ರಕೃತಿ ಮಾತೆ ಹಾಗೂ ಗೋಮಾತೆಯು ನಾಡಿನ ಸಮಸ್ತ ಜನರಿಗೂ ಆಯುಷ್ಯ, ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ನಮ್ಮ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಸಮಸ್ತ ಅನ್ನದಾತರಿಗೂ, ಕೃಷಿ ಬಾಂಧವರಿಗೂ ಮಣ್ಣು ಎತ್ತಿನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಈ ಮುಂಗಾರು ಹಂಗಾಮು ನಮ್ಮ ರೈತರ ಬದುಕಿನಲ್ಲಿ ಬಂಗಾರದ ಬೆಳೆ ತರಲಿ! ಎಂದು ಆಶಿಸಿದರು.
