ಶಿವಮೊಗ್ಗ, ದಿನಾಂಕ 15.07.2026 ರ ಬುಧವಾರದಿಂದ ದಿನಾಂಕ 20.07.2026ರ ಸೋಮವಾರದ ಪರ್ಯಂತ ರವೀಂದ್ರ ನಗರದಲ್ಲಿರುವ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಯಜುರ್ವೇದ ಸಂಹಿತಾಯಾದಾಗ ಚತುರ್ವೇದ ಪಾರಾಯಣ ಭಜನೆ, ವಿದ್ವಾಂಸರಿಗೆ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಡೆಯುವುದು.
ಸನಾತನ ಆರ್ಯಧರ್ಮದ ಸಮಸ್ತ ಸಾಹಿತ್ಯವು ವೇದಮೂಲವೇ ಆಗಿದೆ. ಭಗವಂತನಿಂದ ಅನುಗ್ರಹಿಸಲ್ಪಟ್ಟ ದುರ್ಲಭವಾದ ಸಂಪತ್ತು ವೇದ. ವೇದಗಳು ನಾಲ್ಕೆಂಬುದು ಸರ್ವವಿದಿತ. ಋಕ್, ಯಜು: ಸಾಮ, ಅಥರ್ವ ಗಳಾಗಿವೆ. ಪದ್ಯಾತ್ಮಕ ವಾದದ್ದು ಋಗ್ವೇದ. ಗದ್ಯರೂಪವಾದ ಮಂತ್ರಗಳು ಯಜುರ್ವೇದ. ಗಾನಕ್ಕೆ ಯೋಗ್ಯವಾದ ಋಕ್ ಗಳು ಸಾಮವೇದ. ಪಾದಗಳ ವ್ಯವಸ್ಥೆಯಿಂದ ಕೂಡಿದ ಮಂತ್ರ ಸಮೂಹವೇ ಅಥರ್ವ ವೇದ. ಇಷ್ಟ ಪ್ರಾಪ್ತಿ , ಅನಿಷ್ಟ ನಿವೃತ್ತಿ ಪ್ರಯೋಜನಗಳೇ ಉಪಾಸಕನಿಗೆ ವೇದದ ಪರಮ ಸಾಧನಗಳಾಗಿವೆ.

ನಿತ್ಯ ಅಧ್ಯಯನ , ವೇದ ಪಾರಾಯಣ. ಸಂಹಿತಾ ಯಾಗ, ಹಾಗೂ ಶ್ರೌತ – ಸ್ಮಾರ್ತ ಕರ್ಮಗಳು ಉಪಾಸನೆಯ ಭಾಗವಾಗಿವೆ. ಕಳೆದ ಮೂವತ್ತೈದು ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ದೇವರ ಸನ್ನಿಧಿಯಲ್ಲಿ ದಿವ್ಯ ಚೇತನರಾದ ಕೀರ್ತಿಶೇಷ ಶ್ರೀ ಅ.ಪ. ರಾಮ ಭಟ್ಟರ ಸಂಕಲ್ಪದಂತೆ, ಲೋಕಕಲ್ಯಾಣಾರ್ಥವಾಗಿ, ಅನುಕ್ರಮವಾಗಿ ನಾಲ್ಕು ವೇದಗಳ ಸಮಗ್ರ ಮಂತ್ರ ಗಳ ಸ್ವಾಹಾಕಾರವು, ನೆರವೇರಿದೆ.ಪ್ರಸ್ತುತ ಒಂಭತ್ತನೇಯ ಬಾರಿ ಯಜುರ್ವೇದದ ಸಂಹಿತಾ ಯಾಗವು ಶ್ರೀ ದೇವರ ಸನ್ನಿಧಿಯಲ್ಲಿ ನೆಡೆಸುವುದೆಂದು ನಿಶ್ಚಯಿಸಿದೆ. ಪ್ರತಿ ದಿನ ಬೆಳಗ್ಗೆ 8 ರಿಂದ ಸಂಹಿತಾ ಯಾಗ ಆರಂಭವಾಗುತ್ತದೆ. ಸಂಜೆ ಭಜನಾ ಪರಿಷತ್ ಶಿವಮೊಗ್ಗ (ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ) ಇವರ ಸಹಕಾರದಿಂದ ಪ್ರತಿದಿನ ಸಂಜೆ 6ರಿಂದ 7ರ ವರೆಗೆ ಭಜನಾ ಕಾರ್ಯಕ್ರಮ ನಂತರ ಅಷ್ಟಾವಧಾನ ಸೇವೆ ನಡೆಯುತ್ತದೆ.

ದಿನಾಂಕ 20.07.2026ರ ಸೋಮವಾರದಂದು ಪರಮಪೂಜ್ಯಶ್ರೀ ವಿದ್ಯೋಪಾಸಕ ಶ್ರೀ ವಿದ್ಯಾ ತಪೋನಿಧಿ ಶ್ರೀ ವಿದ್ಯಾ ಸಾಧಕೋತ್ತಮ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಯಜುಃಸಂಹಿತಾ ಯಾಗ ದ ಮಹಾ ಪೂರ್ಣಾಹುತಿ ನಡೆಯುವುದು.
ನಂತರ ಪ್ರತಿ ವರ್ಷದಂತೆ ವಿದ್ವಾಂಸರಿಗೆ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿಗೆ ಪ್ರದಾನ ಪುರಸ್ಕೃತರು ವಿದ್ವಾನ್ ವೇದ ಬ್ರಹ್ಮ ಶ್ರೀ ಶ್ರೀನಿವಾಸ ಮೂರ್ತಿಗಳು ಇವರು ಶಿವಮೊಗ್ಗದ ಹಿರಿಯ ವೇದ ವಿದ್ವಾಂಸರು ಹಾಗೂ ಡಾ. ಶಿಕಾರಿಪುರ ಕೃಷ್ಣಮೂರ್ತಿಗಳು ನಾಡಿನ ಹಿರಿಯ ವಿದ್ವಾರು ಇವರಿಗೆ ಶ್ರೀ ಶ್ರೀಗಳ ಅಮೃತ ಹಸ್ತದಿಂದ ಪ್ರಶಸ್ತಿ ಪ್ರದಾನ ನಡೆಯುವುದು.ನಂತರ ಪರಮಪೂಜ್ಯ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳವರ ಅನುಗ್ರಹ ಪ್ರವಚನ ನಂತರ ಪ್ರಸಾದ ವಿನಿಯೋಗ ನಡೆಯುವುದು.

ಈ ಮಂಗಳ ಕಾರ್ಯಕ್ಕೆ ಧರ್ಮ ಶ್ರದ್ಧೆಯಿಂದ ಎಲ್ಲರೂ ಭಾಗವಹಿಸಿ ಶ್ರೀ ವೇದನಾರಾಯಣನ ಕೃಪೆಗೆ ಪಾತ್ರರಾಗಬೇಕಾಗಿಪ್ರಧಾನ ಅರ್ಚಕರು ಶಂಕರನಾರಾಯಣ ಭಟ್ ಶ್ರೀ ಪ್ರಸನ್ನ ಗಣಪತಿ(ಬಲಮುರಿ) ದೇವಸ್ಥಾನ ರವೀಂದ್ರ ನಗರ ಶಿವಮೊಗ್ಗ ಇವರು ವಿನಂತಿಸಿದ್ದಾರೆ.
