‘ಟಾಸ್’ (Toss) ಒಂದು ರೋಮ್ಯಾಂಟಿಕ್-ಕಾಮಿಡಿ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಶಿವನ ಕಥೆಯನ್ನು ಒಳಗೊಂಡಿದೆ. ತನ್ನ ತಂದೆಯ ನಾಟಕ ತಂಡದ ಇಬ್ಬರು ಸದಸ್ಯರು ನಿಗೂಢವಾಗಿ ಹತ್ಯೆಯಾದಾಗ, ಕುಟುಂಬ ಮತ್ತು ನ್ಯಾಯದ ಮೇಲಿನ ಶಿವನ ನಂಬಿಕೆಗೆ ಪರೀಕ್ಷೆ ಎದುರಾಗುತ್ತದೆ.
ಅಪಾಯಕಾರಿ ಸಂಘರ್ಷವೊಂದರಲ್ಲಿ ಸಿಲುಕಿಕೊಳ್ಳುವ ಅವನು, ಸತ್ಯವನ್ನು ಬಯಲಿಗೆಳೆಯುವ ಜೊತೆಗೆ ವಿಧಿ ಮತ್ತು ತನ್ನದೇ ಆದ ಸ್ವಂತ ಹಾದಿಯನ್ನು ರೂಪಿಸಿಕೊಳ್ಳುವ ಆಯ್ಕೆಯ ನಡುವೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಅರ್ಜುನ್ ದೇವ್ ನಿರ್ದೇಶನದ ಟಾಸ್ ಸಿನಿಮಾವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ತಯಾರಾಗಿದ್ದು, ಸೆಪ್ಟೆಂಬರ್ 18, 2026 ರಂದು ಬಿಡುಗಡೆಯಾಗಿದೆ.
ನಿರ್ದೇಶನ: ಅರ್ಜುನ್ ದೇವ್ಭಾಷೆ: ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಡುಗಡೆಯಾಗಿದೆ.
ಬಿಡುಗಡೆಯಾದ ದಿನಾಂಕ: ಇಂದು ಸೆಪ್ಟೆಂಬರ್ 18, 2026.
ಪ್ರಮುಖ ಅಂಶಗಳು: ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ.

ನಿರ್ದೇಶಕ ಅರ್ಜುನ್ ದೇವ್, ‘ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆಯಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದಿದೆ.
ಸಾಗರ್ ಪೂಜಾರಿ ಅವರು ಚಿತ್ರ ನಿರ್ಮಿಸಿದ್ದು, ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಗೀತೆಗಳನ್ನು ದೇವದಾಸ್ ಕಾಪಿ ಕಾಡ್ ರಚಿಸಿದ್ದಾರೆ. ಜೋಯೆಲ್ ಶಮನ್ ಡಿಸೋಜ ಛಾಯಾಗ್ರಹಣ ಹಾಗೂ ತಾರಾಗಣದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೆಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ, ಕೃತಿ ಶೆಟ್ಟಿ ಇದ್ದಾರೆ.

ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಗ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಚಿತ್ರದಲ್ಲಿದೆ.





