ಶಿವಮೊಗ್ಗ,ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾನ್ಯ ಶಿವಮೊಗ್ಗ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಶುಭಕೋರಿದ್ದಾರೆ.
ಮುಂದುವರೆದು ರಾಜ್ಯದ ಸರ್ವತೋಮುಖ ಪ್ರಗತಿ ಹಾಗೂ ಜನಕಲ್ಯಾಣದ ನಿಟ್ಟಿನಲ್ಲಿ ನಿಮ್ಮ ಅಧಿಕಾರಾವಧಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ವಿಕಸಿತ ಭಾರತದ ನಿರ್ಮಾಣದ ನಿಟ್ಟಿನಲ್ಲಿ ಕರ್ನಾಟಕದ ವಿಕಾಸವೂ ಕೂಡ ಅತ್ಯಂತ ಪ್ರಮುಖವಾಗಿದ್ದು, ತಮ್ಮ ಆಡಳಿತಾವಧಿಯಲ್ಲಿ ವಿಕಸಿತ ಕರ್ನಾಟಕದ ನಿಟ್ಟಿನಲ್ಲಿ ವೇಗದಿಂದ ಮುನ್ನಡೆಯುವಂತಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ನಮ್ಮ ಹೆಮ್ಮೆಯ ಕರುನಾಡು ಕೃಷಿ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿಮ್ಮ ನಾಯಕತ್ವ ಯಶಸ್ವಿಯಾಗಲಿ, ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಆಡಳಿತ ಸಹಕಾರ, ಸಮನ್ವಯ ಹಾಗೂ ಸಾರ್ಥಕತೆಯಿಂದ ಮುನ್ನಡೆಯಲಿ ಎಂದು ಆಶಿಸುತ್ತಾ,

ನಮ್ಮ ಶಿವಮೊಗ್ಗ ಕ್ಷೇತ್ರವೂ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ನಿಮ್ಮ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎನ್ನುವ ಸದಾಶಯದೊಂದಿಗೆ ಮತ್ತೊಮ್ಮೆ ತಮಗೆ ನನ್ನ ಆದರಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು ಎಂದು ಸಂಸದ ಬಿ. ವೈ. ಆರ್ ತಿಳಿಸಿದ್ದಾರೆ.

