ಶಿವಮೊಗ್ಗ | ಯಾರ ಭಯವಿಲ್ಲದೆ ಎಗ್ಗಿಲದೇ ಇಲ್ಲಿ ನಡೆಯುತ್ತಿದೆ ಅಕ್ರಮ ಮರಳು ದಂಧೆ..!?

ಶಿವಮೊಗ್ಗ

ಶಿವಮೊಗ್ಗ, ಹೊರವಲಯ ಪ್ರದೇಶಗಳಾದ ಹೋತಿಗಟ್ಟ. ಸರ್ವೆ ನಂಬರ್ 120 ಕೆರೆ ಜಾಗ. ನಾಲ್ಕು ಎಕರೆ 20 ಗುಂಟೆ ಜಾಗ. ಸಿದ್ದರಗುಡಿ, ದುಮ್ಮಳ್ಳಿ,ವಿಮಾನ ನಿಲ್ದಾಣ ಸುತ್ತಮುತ್ತ ನಡೆಯುತ್ತಿದೆ ಅಕ್ರಮ ಮಣ್ಣು ದಂಧೆ ನಡೆಯುತ್ತಿರುವ ಮಾಹಿತಿಯಾಗಿದೆ.

ಮೈನ್ಸ್ ಇಲಾಖೆಗಳ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಹಾಗೂ ಈ ಅಕ್ರಮ ಮರಳುಗಾರಿಕೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೌನ ಹಾಗೂ ಜಾಣ್ಮೆಯ ನಡೆ ಚರ್ಚೆಗೆ ಗ್ರಾಸಾವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ರಾತ್ರಿ ಹಗಲು ಎನ್ನದೆ ರಾಜ ರೋಷವಾಗಿ ಅಕ್ರಮ ಮಣ್ಣು ದಂದಧೆ ನಡೆಯುತ್ತಿದೆ ಎಂಬ ಆರೋಪವಾಗಿದೆ. ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಜನಸಾಮಾನ್ಯರ ಆರೋಪ ಕೇಳಿಬರುತ್ತಿದೆ.

ಕೆರೆಯ ಒಡಲನ್ನು ಬಗೆದು ಬರಿದಾಗಿಸುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಸಂಬಂಧ ಸೋಗನೆ ಗ್ರಾಮ ಪಂಚಾಯಿತಿ ಪಿಡಿಒ ಮೌನದ ಬಗ್ಗೆ ಸ್ಥಳೀಯರು ಆರೋಪಿಸುತ್ತಿದ್ದಾರೆ . ಒಂದಿಷ್ಟು ರಾಜಕಾರಣಿಗಳು ಸಹ ಈ ಅಕ್ರಮ ದಂಧೆಗೆ ಕೈಜೋಡಿಸಿರುವ ಬಗ್ಗೆ ಮಾಹಿತಿಯಾಗಿದೆ.

ಅಧಿಕಾರಿಗಳಿಗೆ ಕರೆ ಮಾಡಿದರು ಕರೆ ಸ್ವೀಕರಿಸದೆ ಯಾವುದೇ ರೈಡ್ ಮಾಡದೆ ಮಣ್ಣು ಕೋರರ ಬಗ್ಗೆ ಕ್ರಮ ವಹಿಸದೆ. ನೇರವಾಗಿ ಅಕ್ರಮ ದಂಧೆಕೊರರಿಗೆ ಸಹಕಾರ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ?

ಈ ಸಂಬಂಧ ಹಿರಿಯ ಭೂ ವಿಜ್ಞಾನಿ ಅಧಿಕಾರಿಗಳು ಜಿಲ್ಲೆಯಲ್ಲಿ ನಿಷ್ಕ್ರಿಯರಾದರ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಅಕ್ರಮ ಮರಳು ದಂಧೆ ಕೋರರಿಗೆ ಬ್ರೇಕ್ ಹಾಕುತ್ತಿರುವ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್ ರವರು ಇನ್ನಾದರೂ ಈ ಭಾಗದ ಕಡೆ ಗಮನ ಹರಿಸುತ್ತಾರ?

ಅಕ್ರಮ ಮರಳು ಮಾಫಿಯಗೆ ಇನ್ನಾದರೂ ಬ್ರೇಕ್ ಹಾಕುತ್ತಾರ ಜಿಲ್ಲಾ ಅಧಿಕಾರಿಗಳು? ಎಂಬ ಪ್ರಶ್ನೆ ನಾಗರಿಕರಲ್ಲಿ ಕೇಳಿಬರುತ್ತಿದೆ.

Author