ಶಿವಮೊಗ್ಗದಲ್ಲಿ ಎಸ್ಪಿ ನಿಖಿಲ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳು ಎಷ್ಟೋ ಕ್ರೈಂಗಳಿಗೆ ಕಡಿವಾಣ ಹಾಕುತ್ತಾ ಬಂದಿದೆ. ಜಿಲ್ಲಾ ಪೊಲೀಸ್ ಇಲಾಖೆ ನಡೆಸಿದ ಡ್ರೋಣ್ ಕಾರ್ಯಾಚರಣೆ ಮೂಲಕ ಅರಣ್ಯದಲ್ಲಿ ಇಸ್ಪೀಟ್ ಜೂಜು ಅಡ್ಡೆಗಳು, ನಿರ್ಜನ ಪ್ರದೇಶದ ರಸ್ತೆಯಲ್ಲಿ ಮದ್ಯ ಸೇವಿಸುವ ಕುಡುಕುರ ಹಾವಳಿ ಹೀಗೆ ಅನೇಕ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಎಸ್ಪಿ ನಿಖಿಲ್ ರವರು ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತಿದ್ದಾರೆ.

ಇನ್ನು ಅದರಂತೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ Spa ಗಳ ಅನೈತಿಕ ಚಟುವಟಿಕೆಗಳಿಗೆ ಒಂದು ಹಂತಕ್ಕೆ ಕಡಿವಾಣ ಬಿದ್ದಿದೆ ಅದಾಗ್ಯೂ ಪೋಲಿಸ್ ಇಲಾಖೆ Spa ಗಳನ್ನು ಬಂದ್ ಮಾಡಿಸುತ್ತಿದ್ದಂತೆ ಇದೀಗ ಆನ್ಲೈನ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಮೂಲಕ ಅನೈತಿಕ ಚಟುವಟಿಕೆ ಆಮಿಷ ಒಡ್ದುವ ಮುಖೇಣ ನಡೆಯುತ್ತಿದೆ ಎಂಬ ಮಾಹಿತಿಯಾಗಿದೆ.
ಇನ್ನು ಈ ಅನೈತಿಕ Spa ದಂಧೆ ನಡೆಸುವ ಒಬ್ಬ ಪೊಲೀಸಪ್ಪ ವಿರುದ್ಧ ಆರೋಪವು ಕೇಳಿ ಬಂದಿತ್ತು. ಸ್ವತಃ ಬಂಡವಾಳ ಹಾಕಿ ಅಕ್ರಮದೊಂದಿಗೆ ಸಹಕಾರ ನೀಡುತ್ತಿದ್ದಾನೆ ಎಂಬ ಆರೋಪದ ಬಗ್ಗೆ ಜಿಲ್ಲಾ ಪೊಲೀಸರು ಇಲಾಖೆ ತನಿಕೆ ನಡೆಸಬೇಕಾದ ಜರೂರತ್ತಿದೆ.
ಶಿವಮೊಗ್ಗದಲ್ಲಿ ಸ್ಪಾಗಳನ್ನು ಪೊಲೀಸ್ ಇಲಾಖೆ ಬಂದ್ ಮಾಡಿಸುತ್ತಿದ್ದಂತೆ ಇಲ್ಲಿರುವ ದಂಧೆಕೋರರು ಮಲೆನಾಡಿನ ಸಾಗರ ಮತ್ತು ತೀರ್ಥಹಳ್ಳಿಗೆ ಹೋಗಿ ಬರುವಂತೆ ನೋಡಿಕೊಳ್ಳಗುತ್ತಿತ್ತಂತೆ.
ಇನ್ನು ಈ Spa ಗಳ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಏನಂದರೆ ಇಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸಂಬಳವಿರುವುದಿಲ್ಲ ಎಂಬುದಾಗಿದೆ.

ಇನ್ನು ಮುಖ್ಯ ವಿಚಾರವೇನೆಂದರೆ ಭದ್ರಾವತಿ ಕಿಂಗ್ ಪಿನ್ ಗಳು ಶಿವಮೊಗ್ಗದಲ್ಲಿ ಸಾಮಾಜಿಕ ಸ್ವಾಸ್ತ್ಯ ಹಾಳುಮಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಇನ್ನು ವಿದ್ಯಾನಗರದ ಎವರ್ಗ್ರೀನ್ Spa ಮೇಲೆ ವ್ಯಕ್ತಿ ಒಬ್ಬನಿಂದ ಬೇರೆ ಜಿಲ್ಲೆಯಿಂದ ಯುವತಿಯರು ಹಾಗೂ ನಗರದಲ್ಲಿರುವ ಬಡ ವಿದ್ಯಾರ್ಥಿನಿಯರು ಈ ದಂಧೆಗೆ ಬಲಿ ಆಗುತ್ತಿರುವ ಆರೋಪ ಕೇಳಿಬರುತ್ತಿದೆ. ಇನ್ನು ಈ ಸಂಬಂಧ ಯುವತಿಯರನ್ನು ಮೊದಲಿಗೆ ಕುಖ್ಯಾತ ಬ್ಯೂಟಿ ಪಾರ್ಲರ್ ಗಳಲ್ಲಿ ಕಲಿಕೆ ಅಂತೆಲ್ಲ ಪುಸಲಾಯಿಸಿ ನಂತರ ದಂಧೆಗೆ ತಳ್ಳಲಾಗುತ್ತಿರುವ ಮಾಹಿತಿಯಾಗಿದೆ.
ತದ ನಂತರ ಅವರಿಗೆ ಮಾದಕ ವ್ಯಸನಿಯಾಗಿ ಮಾಡುತ್ತ ದುಶ್ಚಟಕ್ಕೆ ದಾಸರಾಗುವಂತೆ ಮಾಡುತ್ತಿರುವ ಮಾಹಿತಿಯಾಗಿದೆ ಇದೆಲ್ಲ ಭದ್ರಾವತಿಯಿಂದ ದಿನ ನಿತ್ಯ ಅಪ್ ಅಂಡ್ ಡೌನ್ ಮುಖೇಣ ಕರೆದುಕೊಂಡು ಬಂದು ವಾಪಾಸ್ ಕಳಿಸಲಾಗುತ್ತಿರುವುದಾಗಿ ಮಾಹಿತಿಯಾಗಿದೆ.
ಇನ್ನು ಬಡ ಹೆಣ್ಣುಮಕ್ಕಳು ಅಷ್ಟೋ ಇಷ್ಟು ಹಣ ಮನೆಗೆ ತಲುಪಿಸುತ್ತಾರೆ ಕುಟುಂಬದವರಿಗೆ ಇದರ ಬಗ್ಗೆ ಮಕ್ಕಳ ಪರಿಸ್ಥಿತಿ ಬಗ್ಗೆ ಮಾಹಿತಿ ಇಲ್ಲದಾಗಿದೆ ಎಂಬ ಆರೋಪವಾಗಿದೆ. ಹಾಗೂ ಇದಕ್ಕೆಲ್ಲ ಕೆಲವು ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿರುವ ಆರೋಪ ಹಾಗೂ ಪೊಲೀಸ್ ಇಲಾಖೆಗು ಇದು ದೊಡ್ಡ ಸವಾಲಾಗಿ ಪರಿಣಾಮಿಸಿದೆ.
ಈ ಕೂಡಲೇ ದಕ್ಷ ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ಸೂಕ್ತ ತನಿಖೆ ನಡೆಸುವ ಮುಖೇಣ, ಸ್ಪಾ ಗಳಲ್ಲಿ ಕೆಲಸ ಮಾಡುವ ಯುವತಿಯರ ಆಧಾರ್ ಕಾರ್ಡ್ ಸಮೇತ ಬಯೋ ಡೇಟಾ ಪಡೆದು ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡಬೇಕಿದೆ.

ಇನ್ನು ಕಾರ್ಮಿಕ ಇಲಾಖೆ ಜವಾಬ್ದಾರಿ ಏನು?
ಕಾರ್ಮಿಕ ಇಲಾಖೆ ಕೇವಲ ಬಾಲ ಕಾರ್ಮಿಕರಿದ್ದಲ್ಲಿ ಮಾತ್ರ ಅದನ್ನು ತಡೆದು ಫೋಟೋ ಕ್ಲಿಕ್ಕಿಸಿ ಕೊಳ್ಳುವುದಕ್ಕೆ ಸೀಮಿತವಾದರೆ ಈ ರೀತಿ ಪಾರ್ಲರ್ Spa ಗಳಲ್ಲಿ ಸಂಬಳ ನೀಡದೆ ಇರುವವರ ವಿರುದ್ದ ದಾಳಿ ನಡೆಸುವ ಮುಖೇಣ ಸೂಕ್ತ ತನಿಖೆ ಕ್ರಮ ಕೈಗೊಳ್ಳುವುದು ಯಾವಾಗ ಎಂಬುದು ಪ್ರಶ್ನೆಯಾಗಿದೆ..?
ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಅನೈತಿಕ ಚಟುವಟಿಕೆ ತಾಣಗಳ ಲೈಸನ್ಸ್ ರದ್ದುಗೊಳಿಸುವುದು ಯಾವಾಗ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಇನ್ನು ಆರೋಗ್ಯ ಇಲಾಖೆ ಹಾಗೂ ಡ್ರಗ್ ಕಂಟ್ರೋಲ್ ಡಿಪಾರ್ಟ್ಮೆಂಟ್ ಅಧಿಕಾರಿಗಳು ಕಾಸ್ಮೆಟಿಕ್ ಹಾಗೂ Physiotherapy ಕುರಿತಾಗಿ ಯಾವ ತರಬೇತಿಯನ್ನು ಕೆಲಸಗಾರರು ಪಡೆದಿದ್ದಾರೆ ಎಂದು ಇವರಿಗೆಲ್ಲ ಅವಕಾಶ ನೀಡಿದ್ದಾರೆ ಹಾಗೂ ಯಾವೆಲ್ಲ ಕಾಸ್ಮೆಟಿಕ್ ಬಳಸಲಾಗುತ್ತಿದೆ ಅದನ್ನೆಲ್ಲ ಬಳಸಲು ಅನುಮತಿ ಪಡೆದಿದ್ದಾರಾ? ಇದನ್ನೆಲ್ಲಾ ಡ್ರಗ್ ಕಂಟ್ರೋಲ್ ಹಾಗೂ ಆರೋಗ್ಯ ಇಲಾಖೆ ತಪಾಸಣೆ ನಡೆಸುವ ಮೂಲಕ ಕ್ರಮ ಜರುಗಿಸುವುದು ಯಾವಾಗ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದಾಗಿದೆ.
ಇನ್ನು ತುಂಬಾ ಮುಖ್ಯ ವಿಚಾರವೆಂದರೆ ನಗರದಲ್ಲಿ ಅಕ್ಕ ಪಡೆ ಪೊಲೀಸರು Spa ಹಾಗೂ ಬ್ಯೂಟಿ ಪಾರ್ಲರ್ಗಳ ಪರಿಶೀಲನೆ ಮಾಡಿದರೆ ಸಾಕು ನಗರದಲ್ಲಿ ಇದೆಲ್ಲ ಅನೈತಿಕ ಚಟುವಟಿಕೆಗೆ ಕಡಿವಾಣ ಬೀಳುವ ಮುಖೇಣ ಬಂದ್ ಆಗಲಿದೆ ಎಂಬುದು ಜನಜನಿತ ಮಾತಾಗಿದೆ.
ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿದಲ್ಲಿ ಅಮಾಯಕ ಹಾಗೂ ಬಡ ಹೆಣ್ಣುಮಕ್ಕಳು ಜೀವನಕ್ಕೆ ಒಂದು ದಾರಿ ದೀಪ ಅಗಲಿದೆ ಎಂಬುದು ನಮ್ಮ ಸಂಪೂರ್ಣ ಸುದ್ದಿಯ ಸಾರಾಂಶವಾಗಿದೆ..!

ಹಾಗೂ ನಗರದ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಹಾಗೂ ಇನ್ನಿತರೇ ರಾಜಕಾರಣಿಗಳು ಸಹ ಇಂತ ಅನೈತಿಕ ಚಟುವಟಿಕೆ ನಡೆಸದಂತೆ ಅಮಾಯಕ ಬಡ ಹೆಣ್ಣುಮಕ್ಕಳ ರಕ್ಷಣೆಗೆ ಅಧಿಕಾರಿಗಳಿಗೆ ಸಾಥ್ ನೀಡುವ ಮೂಲಕ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶವಿಲ್ಲವೆಂಬ ಸಂದೇಶ ರವಾನಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

