ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ.

ಪತ್ರಕರ್ತರ ಶ್ರಮಕ್ಕೆ ಗೌರವಕೊಟ್ಟು ಮಾತನಾಡಿಸಿಕೊಂಡು ಹೋಗುವುದನ್ನು ಸಹ ನಾನು ನೋಡಿದ್ದೇನೆ ಎಂದು ಹೇಳಿದರು. ಹಾಗೂ ಇಂದು ನಡೆದ ಪತ್ರಿಕಾ ದಿನಾಚರಣೆ, ರಕ್ತದಾನ ಶಿಬಿರ, ಹಿರಿಯ ಪತ್ರಕರ್ತರು ಹಾಗೂ ಪತ್ರಕರ್ತರ ಮಕ್ಕಳ ಸಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಶಿವಾನಂದ ತಗಡೂರು ರವರು ಮಾತನಾಡಿ,
ಪತ್ರಿಕಾ ದಿನಾಚರಣೆ ಎಂದರೆ ನಮ್ಮದೇ ಹಬ್ಬ ನಮ್ಮದೇ ದಿನ. ಇನ್ನಷ್ಟು ಅರ್ಥ ಪೂರ್ಣವಾಗಲು ರಕ್ತದಾನ ಶಿಬಿರ ಪ್ರಮುಖ ಕಾರಣವಾಗಿದೆ. ನಮ್ಮ ವೃತ್ತಿ ಬಾಂಧವರು ಅವರವರ ಪ್ರತಿಭೆಗೆ ತಕ್ಕ ಹಾಗೆ ಸಾಧನೆ ಮಾಡಿದ್ದಾರೆ. ಅವರೆಲ್ಲರಿಗೂ ಗೌರವಾರ್ಪಣೆಗಳು ಎಂದರು.
ಗುಮಾಸ್ತರು ಮಾಡುವ ಕೆಲವನ್ನು ಒಬ್ಬ ಎಂಪಿ ಆಗಿ ಮಾನ್ಯ ಸಂಸದ ರಾಘವೇಂದ್ರ ಅವರು ಮಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮಗ ಎಂಬುದನ್ನು ಸಹ ಪಕ್ಕಕ್ಕಿಟ್ಟು ಅತ್ಯಂತ ಸರಳತನದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಸಂಘಕ್ಕೆ ಒಂದು ಸೈದ್ಧಾಂತಿಕ ನೆಲೆಯನ್ನು ಕಟ್ಟಿದ್ದಾರೆ. ನಮ್ಮ ಆಸಕ್ತಿಗೆ ಬೇಕೋ ಬೇಡವೋ ಈ ವೃತ್ತಿಗೆ ಬಂದಿದ್ದೇವೆ. ಹಾಗಾಗಿ ಈ ವೃತ್ತಿಗೆ ಬಂದ ಮೇಲೆ ಆ ಘನತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ. ಇದನ್ನೂ ಉಳಿಸಿಕೊಂಡು ಹೋಗುವ ಕೆಲಸವನ್ನು ನಾವು ನೀವು ಎಲ್ಲರೂ ಮುಂದಿನ ಪೀಳಿಗೆಗೂ ಆ ಆದೇಶವನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ ಎಂದರು.
ಪರಾಕಾಷ್ಠೆ ಇದೆ ನೈಜ ಪತ್ರಕರ್ತರು ಅದನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲು ಇದೆ. ಇವತ್ತಿಗೂ ಕೂಡ ಹಿಂದಿನ ಅನೇಕರು ಕಟ್ಟಿಕೊಂಡು ಬಂದಿರುವ ಪರಂಪರೆಯನ್ನು ನಾವು ಕಟ್ಟಿ ಅದಕ್ಕೆ ಲೋಪ ಆಗದ ರೀತಿಯಲ್ಲಿ ಮುಂದುವರೆಸುವ ಅಗತ್ಯವಿದೆ. ನಮ್ಮ ಹೃದಯಕ್ಕೆ ಸರಿಯಾದ ರೀತಿಯಲ್ಲಿ ಸತ್ಯಕ್ಕೆ ಹತ್ತಿರವಾದ ರೀತಿಯಲ್ಲಿ ಸುದ್ದಿ ಮಾಡಿದರೆ ನಿಜಕ್ಕೂ ಈ ವೃತ್ತಿಯಲ್ಲಿ ಇದ್ದು ಸಾರ್ಥಕವಾಗುತ್ತದೆ.

ನೊಂದವರ ಕಣ್ಣೀರು ಹೊರೆಸುವಲ್ಲಿ, ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಆ ವೃತ್ತಿಯಲ್ಲಿ ಇದ್ದೂ ಸಹ ವ್ಯರ್ಥವಾಗುತ್ತದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಇದ್ದ ಪತ್ರಿಕೋದ್ಯಮವೇ ಬೇರೆ, ನಂತರದ ಪತ್ರಿಕೋದ್ಯಮವೇ ಬೇರೆ. 80ರ ದಶಕದಲ್ಲಿ ಬಂದ ಪತ್ರಕರ್ತರ ಸಿದ್ಧಾಂತಿಕತೆ ಬೇರೆ. ಅದನ್ನು ಹಾಗೆಯೇ ಮುಂದುವರೆಸಿಕೊಂಡು ಒಳ್ಳೆಯ ರೀತಿಯಲ್ಲಿ ಸತ್ಯದ ದಾರಿಯಲ್ಲಿ ಮುಂದುವರೆಸಬೇಕು ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲ ಮಾಡಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಅವರ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಹೇಳಿದರೂ ಸಹ ಪತ್ರಕರ್ತರು ಅವರ ಕೆಲಸವನ್ನು ಬಿಡದೇ ವರದಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅನೇಕ ಕ್ಯಾಮೆರಾ ಮ್ಯಾನ್ ಗಳು ಸಾವನ್ನಪ್ಪಿದರು. ವಾರ್ತಾ ಇಲಾಖೆಗಳಿಗೆ ಮುಖ್ಯಮಂತ್ರಿಗಳೇ ನಿದರ್ಶನಕೊಟ್ಟರೂ ಸಹ ಅನುದಾನ ಇಲ್ಲದ ಕಾರಣ ಪರಿಹಾರ ನೀಡಲು ಸಾಧ್ಯವಾಗಲಿಲ್ಲ. ಆ ಕ್ಷಣದಲ್ಲಿ ಯಡಿಯೂರಪ್ಪ ನವರು ಸಹ ಸ್ವಲ್ಪ ಹಿಂದೇಟು ಹಾಕಿದರೂ ನಂತರ ಅವರೇ ತುರ್ತಾಗಿ ಪರಿಹಾರ ನೀಡುವಂತೆ ಆದೇಶ ನೀಡಿದರು. ಅನೇಕ ಬಾರಿ ಕೈಹಿಡಿದಿದ್ದಾರೆ. ಇದ್ದ ಕಾಲಾವಧಿಯಲ್ಲಿ ನಾವು ಎಷ್ಟು ಜನರ ಮನಸ್ಸು ಮುಟ್ಟಲು ಕಾರಣರಾಗುತ್ತೇವೆ ಎಂಬುದು ಮುಖ್ಯ.
ಉದ್ಘಾಟಕರಾದ ಸಂಸದ ಬಿ.ವೈ .ರಾಘವೇಂದ್ರ ನುಡಿ :
ಸಮಾಜದ ವ್ಯವಸ್ಥೆಗೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವ ವ್ಯವಸ್ಥೆ. ಪತ್ರಿಕೆಯ ಲೇಖನಿಗಳನ್ನು ಓದಿದ ತೃಪ್ತಿ ಆನ್ ಲೈನ್ ನಲ್ಲಿ ಸಿಗುವುದಿಲ್ಲ. ಹಾಗಾಗಿ ಮಕ್ಕಳು ಪುಸ್ತಕವನ್ನು ಓದಬೇಕು. ಪತ್ರಿಕೋದ್ಯಮ ಕೇವಲ ಒಂದು ವೃತ್ತಿಯಲ್ಲ. ಅತ್ಯಂತಾಹತ್ವದ ಪ್ರಜಾಪ್ರಭುತ್ವದ ಜವಾಬ್ದಾರಿ. ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಹೋಗುವುದು ಪತ್ರಿಕಾರಂಗಕ್ಕೆ ನೀಡುವ ಗೌರವ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಪತ್ರಕರ್ತರ ಶ್ರಮಕ್ಕೆ ಗೌರವಕೊಟ್ಟು ಮಾತನಾಡಿಸಿಕೊಂಡು ಹೋಗುವುದನ್ನು ಸಹ ನಾನು ನೋಡಿದ್ದೇನೆ ಎಂದು ಹೇಳಿದರು.
ಮದನ್ ಅವರು ಮಾತನಾಡಿ, ಕೆ ಯು ಡಬ್ಲ್ಯೂ ಜೆ ಇತಿಹಾಸ ಬಹಳ ದೊಡ್ಡದು. ಶಿವಮೊಗ್ಗ ಜಿಲ್ಲಾ ಘಟಕ ಅತ್ಯಂತ ಕಾರ್ಯಕ್ಷಣೆಯಾಗಿ ಕಾರ್ಯ ನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಿದೆ. ಕೆ.ವಿ.ಶಿವಕುಮಾರ್,ಈ ಸಂದರ್ಭದಲ್ಲಿ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ತಾಲೂಕುವಾರು ಮಾಡಿದ್ದೇವೆ. ಆತ್ಮಾವಲೋಕನ ಬಹಳ ಮುಖ್ಯ. ವೃತ್ತಿ ಧರ್ಮವನ್ನು ಮರೆಯಬಾರದು.
ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದ ಮೇಲಿನವರೆಗೆ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆವರೆಗೂ ಮುಂದುವರೆಸಿಕೊಂಡು ಹೋಗಲು ವೃತ್ತಿ ಬದ್ಧತೆಯನ್ನು ಕಾಪಾಡಬೇಕು. ಆ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಂಡು ಮುಂದೆ ಹೋಗಣ.ಚೇತನ್ ಕುಮಾರ್,ರಾಜ್ಯಕ್ಕೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದೆ. ಇದಕ್ಕೆ ಕಾರಣ ಇದರ ಹಿಂದಿರುವ ಹಿಂದಿನ ಪತ್ರಕರ್ತರು. ಪತ್ರಕರ್ತರ ಸಹಕಾರ ಖಂಡಿತ ನಮ್ಮ ಯುವಕರಿಗಿದೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳು ಹೆಚ್ಚು ಆಕ್ಟಿವ್ ಆಗಿವೆ. ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು. ಎಲ್ಲ ಅಭಿವೃದ್ಧಿ ಹಿಂದೆ ಪತ್ರಕರ್ತರ ಸಹಕಾರ ಇದೆ.

ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯನಾಥ್ ಮಾತನಾಡಿ, ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಆ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದಿನ ದಿನಗಳಲ್ಲಿಯೂ ಹೀಗೆ ಸಹಕರಿಸಿ ಎಂದರು


