ಭದ್ರಾವತಿ | ವೇಶ್ಯಾವಾಟಿಕೆ ನಡಸುತ್ತಿದ್ದ ಮನೆಯ ಮೇಲೆ ದಾಳಿ..!

ಕ್ರೈಂ

ಭದ್ರಾವತಿ,ನಗರದ ಸಿದ್ದಾಪುರ ಬೈಪಾಸ್‌ನಲ್ಲಿರುವ ಪಿ.ಎಸ್ ಬಾರ್ ಹಿಂಭಾಗದ ಹಳೇ ಬಂಡಾರಹಳ್ಳಿಗೆ ಸೇರಿದ ದಿವಂಗತ ಪುಟ್ಟಮಾಯಮ್ಮ ಎಂಬುವರ ತಗಡಿನ ಮನೆ ಬಾಡಿಗೆ ಪಡೆದಿದ್ದ ರಾಬರ್ಟ್ @ ರವಿ ಎಂಬುವನು ಹಣದ ಆಮಿಷವೊಡ್ಡಿ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾನೆಂಬ ಖಚಿತ ವರ್ತಮಾನದ ಮೇರೆಗೆ ನ್ಯೂಟೌನ್ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದಾಳಿಯ ವೇಳೆ ಮನೆಯಲ್ಲಿ ನಾಲ್ವರು ಮಹಿಳೆಯರಿದ್ದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಪತ್ತೆಯಾಗಿದೆ. ಘಟನೆ ಸಂಬಂಧ ರಾಬರ್ಟ್ @ ರವಿ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯು ತಲೆ ಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂಬ ಮಾಹಿತಿಯಾಗಿದೆ .

Author