ಶಿವಮೊಗ್ಗ | ಡಿ.ಕೆ.ಶಿವಕುಮಾರ್ ಪ್ರಮಾಣವಚನ ; ಶಿವಪ್ಪ ನಾಯಕ ವೃತ್ತದಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆಗೆ ಬೃಹತ್ ಎಲ್ಇಡಿ ವ್ಯವಸ್ಥೆ : ಎಚ್. ಸಿ. ಯೋಗೇಶ್

ಈ ಕಾರ್ಯಕ್ರಮದ ನೇತೃತ್ವವನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್. ಸಿ. ಯೋಗೇಶ್ ರವರು ವಹಿಸಿದ್ದು ಹಾಗೂ ಶಿವಮೊಗ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷರವರು ಕಾರ್ಯಕರ್ತರು ವಾರ್ಡ್ ಅಧ್ಯಕ್ಷರುಗಳ ಜೊತೆಯಾಗಿ ಸಿದ್ಧತೆ ನಡೆಸಿದ್ದು. ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಾರ್ವಜನಿಕರು ಸನ್ಮಾನ್ಯ ಡಿಕೆ ಶಿವಕುಮಾರ್ ರವರು ಕರ್ನಾಟಕ ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿ […]

Continue Reading

ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದ ಭದ್ರಾವತಿ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಪ್ರಭುಗೌಡ

ಜೈರಾಜ್, ಲೋಕೇಶ್, ಮಂಜುನಾಥ್, ಇಮ್ರಾನ್, ಆರ‍್ಮುಗ, ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎ ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲಾ ನಗರ, ಯುವ ಅಧ್ಯಕ್ಷ ಪ್ರವೀಣ್ ಕುಮಾರ್ ಕರವೇ ಮುಖಂಡರಾದರ ಆನ್ಸರ್ ಅಹ್ಮದ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮ ನಗರ ಪ್ರಧಾನ ಕಾರ್ಯದರ್ಶಿಯಾದ ಅನುಪಮ ಜಿಲ್ಲಾ ಪದಾಧಿಕಾರಿಗಳು ಹಾಗೂ ಭದ್ರಾವತಿ ತಾಲೂಕಿನ ಕಾರ್ಯಕರ್ತರು ಭಾಗವಹಿಸಿದ್ದರು.

Continue Reading

ಶಿವಮೊಗ್ಗ | ಜೂನ್ 05 ರಂದು ಉದ್ಯೋಗ ನೇರ ಸಂದರ್ಶನ

ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವುದು.

Continue Reading

ಶಿವಮೊಗ್ಗ | ಮುಂಗಾರು ಪ್ರಾರಂಭ ; ಕೃಷಿ ಇಲಾಖೆಯಿಂದ ರೈತರಿಗೆ ಬೆಳೆ ಸಲಹೆ

ಬೀಜಗಳನ್ನು ಬಿತ್ತುವ ಮುನ್ನ ಬೆಳೆಗನುಣವಾಗಿ ಸಾಕಷ್ಟು ತೇವಾಂಶವಿರುವುದನ್ನು ಖಾತರಿ ಪಡಿಸಿಕೊಂಡು ಬಿತ್ತನೆ ಮಾಡುವುದು. ತೇವಾಂಶ ಕಡಿಮೆ ಇದ್ದಲ್ಲಿ ಬೀಜವು ಮೊಳಕೆ ಬಂದು ಮಣ್ಣಿನಿಂದ ಹೊರಗೆ ಬರಲಾಗದೇ ಭೂಮಿಯಲ್ಲಿಯೇ ಮುರುಟಿ ಹೋಗುವ ಸಾಧ್ಯತೆಯಿರುತ್ತದೆ. ಜಿಲ್ಲೆಯಲ್ಲಿ ರೈತರು ಬೆಳೆಗಳಿಗೆ ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದು, ಸಾಮಾನ್ಯವಾಗಿ ಸಾರಜನಕ (ಯೂರಿಯಾ) ಹಾಗೂ ರಂಜಕಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರ ಬಳಕೆ ಹೆಚ್ಚಾಗಿ ಮಾಡುತ್ತಿದ್ದು ಈ ರಸಗೊಬ್ಬರದಲ್ಲಿ ಪೊಟ್ಯಾಷ್ ಅಂಶವಿರುವುದಿಲ್ಲ. ಪೊಟ್ಯಾಷ್ ಪೋಷಕಾಂಶವು ಬೆಳೆಗಳಿಗೆ ರೋಗ ಹಾಗೂ ಕೀಟ ಬಾಧೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ […]

Continue Reading

ಶಿವಮೊಗ್ಗ | ಅಕ್ರಮ ಮರಳು ಗಣಿಗಾರಿಕೆ ; ಲೋಕಾಯುಕ್ತದಿಂದ ಪತ್ರಕರ್ತರಿಗೂ ನೋಟೀಸ್..?

ಶಿವಮೊಗ್ಗ ತಾಲ್ಲೂಕಿನ ಹೊಳಲೂರು, ಹಾಡೋನಹಳ್ಳಿ, ಭದ್ರಾವತಿ ತಾಲ್ಲೂಕಿನ ಮಂಗೋಟೆ, ಸನ್ಯಾಸಿಕೋಡಮಗ್ಗಿ, ನಿಂಬೆಗೊಂದಿ, ನಾಗಸಮುದ್ರ, ಡಣಾಯಕಪುರ, ಕೂಡ್ಲಿಯ ಭದ್ರಾ ಹಾಗೂ ತುಂಗಾ ನದಿ ದಂಡೆ, ಭದ್ರಾಪುರ, ತೀರ್ಥಹಳ್ಳಿ ತಾಲ್ಲೂಕಿನ ದಬ್ಬಣಗದ್ದೆ, ಮಹಿಷಿ, ತೂದೂರು, ಹೊಸಹಳ್ಳಿ, ಆಚೆಪೇಟೆ, ಕೆದಲಗುಡ್ಡೆ, ಸುತ್ತಾ, ಕಲ್ಲುಹಳ್ಳ, ಹರಿದ್ರಾವತಿ, ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ, ಗೀಜಗ, ಬಿಲ್ಲುಸಾಗರ, ಎಡಚಿಟ್ಟಿ, ಮಂಣಸೆಟ್ಟೆ, ಮುಡುಗೊಪ್ಪದ ತುಂಗಾ-ಭದ್ರಾ ಹಾಗೂ ಶರಾವತಿ ನದಿಗಳಲ್ಲಿನ ಅಕ್ರಮ ಕ್ವಾರಿಗಳ ಮೇಲೆ 15 ತಂಡಗಳಾಗಿ ದಾಳಿ ನಡೆಸಲಾಗಿದೆ. ಕ್ವಾರಿಗಳ ಎಲ್ಲ ಮಾಹಿತಿ ಮೊದಲೇ ಹೊಂದಿದ್ದ ಎಸ್ಪಿ ಎಂ.ಎಸ್.ಕೌಲಾಪುರೆ […]

Continue Reading

ಶಿವಮೊಗ್ಗ | 17,000 ಮೆಟ್ರಿಕ್ ಟನ್ ಅಕ್ರಮ ಮರಳು ಸಂಗ್ರಹಣೆ ಮತ್ತು ಮರಳು ಗಣಿಗಾರಿಕೆ ಸಂಬಂಧ ಉಪಯೋಗಿಸಿದ ಜೆ.ಸಿ.ಬಿ/ಹಿಟಾಚಿ, ಟಿಪ್ಪರ್ ಲಾರಿ, ಟ್ರ್ಯಾಕ್ಟರ್, ಒಳಗೊಂಡಂತೆ 52 ವಾಹನಗಳನ್ನು ವಶಪಡಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಆರ್.ಟಿ.ಓ, ಅರಣ್ಯ ಇಲಾಖೆ, ಸಹಾಯಕ ಭೂ ದಾಖಲಾತಿ ಇಲಾಖೆ, ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಇಲಾಖೆ ಮತ್ತು ಪಿ.ಡಬ್ಲ್ಯೂಡಿ ಇಲಾಖೆಯವರಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಿವಮೊಗ್ಗ ಕಛೇರಿಗೆ ಶೋಧನಾ ವಾರೆಂಟ್‌ನಂತೆ ಶೋಧನೆ ಕೈಗೊಂಡು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಘಟಕಗಳಾದ ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿಕ್ಕಗಳುರು, ಚಿತ್ರದುರ್ಗ […]

Continue Reading

ಶಿವಮೊಗ್ಗ | ಜಿಲ್ಲೆಯ ಇತಿಹಾಸದಲ್ಲೇ ಅಕ್ರಮ ಮರಳು ಅಡ್ಡೆಗಳ ಮೇಲೆ ಅತಿ ದೊಡ್ಡ ಲೋಕಾಯುಕ್ತ ಕಾರ್ಯಾಚರಣೆ..!

ಈ ನೆಲೆಯಲ್ಲಿ ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡ ಮಗ್ಗಿ ನಿಂಬೆಗೊಂದಿ ಮಂಗೋಟೆ ಮೊದಲಾದ ಕಡೆ ಶಿವಮೊಗ್ಗ ತಾಲೂಕಿನ ಕೂಡಲಿ ಹಾಡೋನಹಳ್ಳಿ, ತೀರ್ಥಹಳ್ಳಿ ತಾಲೂಕಿನ ಮುಂಡಳ್ಳಿ ತೂದೂರು ದಬ್ಬಣಗದ್ದೆ ಮೊದಲಾದ ಕಡೆ ಹೊಸನಗರ ತಾಲೂಕಿನ ಸುತ್ತಾ ,ಹರಿದ್ರಾವತಿ, ಸಂಪೆಕಟ್ಟೆ ಮೊದಲಾದ ಕಡೆ, ಸಾಗರ ತಾಲೂಕಿನ ಆವಿನ ಹಳ್ಳಿ ಮೊದಲಾದ ಕಡೆ ಅಕ್ರಮ ಮರಳು ಸಂಗ್ರಹ ಮತ್ತು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಜೆಸಿಬಿ ಟ್ಯಾಕ್ಟರ್ ಲಾರಿ ಸೇರಿದಂತೆ 50 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು […]

Continue Reading

ದಶಕಗಳ ಕನಸಾಗಿದ್ದ ‘ಶಿವಮೊಗ್ಗ – ಶೃಂಗೇರಿ – ಮಂಗಳೂರು’ ನೂತನ ರೈಲು ಮಾರ್ಗ ಕುರಿತು ಸಂಸದರಿಂದ ಮತ್ತಷ್ಟು ಅಪ್ಡೇಟ್

ಒಟ್ಟು ಉದ್ದ: 332 ಕಿ.ಮೀ. ಅಂದಾಜು ವೆಚ್ಚ: ₹3,300 ಕೋಟಿ ನೇರ ಲಾಭ ಪಡೆಯುವ ಜಿಲ್ಲೆಗಳು: ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ. ಪ್ರಮುಖ ಸಂಪರ್ಕ ತಾಲೂಕುಗಳು: ಹೊಸನಗರ, ತೀರ್ಥಹಳ್ಳಿ, ಶೃಂಗೇರಿ ಹಾಗೂ ಕಾರ್ಕಳ.ಈ ರೈಲ್ವೆ ಮಾರ್ಗವು ಮಲೆನಾಡು ಮತ್ತು ಕರಾವಳಿಯ ನಡುವೆ ವಾಣಿಜ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ನಮ್ಮ ಮಲೆನಾಡಿನ ಭಾಗದ ಜನರ ದೀರ್ಘಕಾಲದ […]

Continue Reading