ಶಿವಮೊಗ್ಗ | ಕರವೇ ಸ್ವಾಭಿಮಾನಿ ಬಣದಿಂದ ನಿರಂತರ ಕನ್ನಡ ಸೇವೆ ನೂತನ ಧ್ವಜಸ್ಥಂಬ ಉದ್ಘಾಟನೆ ಮತ್ತು ಅನ್ನದಾಸೋಹ

ದೊಡ್ಡಪೇಟೆ ಮಂಜುನಾಥ್ ರವರು ಮಾತನಾಡಿ, ಕನ್ನಡ ಸಂಘಟನೆಗಳ ಏಳಿಗೆಗಾಗಿ ನಿರಂತರ ಪರಿಶ್ರಮದ ಫಲವಾಗಿ ಕನ್ನಡವು ರಾಷ್ಟಾçದ್ಯಂತ ಗಮನ ಸೆಳೆಯುತ್ತಿದೆ. ಇಂದಿನ ಧ್ವಜಾರೋಹಣ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ರಸ್ತೆಗಳಲ್ಲಿ ಕನ್ನಡ ಧ್ವಜಸ್ಥಂಬ ಸ್ಥಾಪನೆ ಇಂದಿನ ಅವಶ್ಯಕತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಸಾಹಿತಿಗಳಾದ ಗಾ.ರಾ.ಶ್ರೀನಿವಾಸ್, ರಘುರಾಜ್ ಮಲ್ನಾಡ್, ಕಾನೂನು ಸಲಹೆಗಾರರಾದ ಅನಿಲ್ ಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಚೀಲೂರು, ರೋಟರಿ ವಲಯ ಸೇನಾನಿ ಕಿರಣ್ […]

Continue Reading

ಶಿವಮೊಗ್ಗ | ಸಂಸದ ಬಿ. ವೈ. ರಾಘವೇಂದ್ರರವರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ

ನಮ್ಮ ಹೆಮ್ಮೆಯ ಕರುನಾಡು ಕೃಷಿ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿಮ್ಮ ನಾಯಕತ್ವ ಯಶಸ್ವಿಯಾಗಲಿ, ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಆಡಳಿತ ಸಹಕಾರ, ಸಮನ್ವಯ ಹಾಗೂ ಸಾರ್ಥಕತೆಯಿಂದ ಮುನ್ನಡೆಯಲಿ ಎಂದು ಆಶಿಸುತ್ತಾ, ನಮ್ಮ ಶಿವಮೊಗ್ಗ ಕ್ಷೇತ್ರವೂ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ನಿಮ್ಮ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎನ್ನುವ ಸದಾಶಯದೊಂದಿಗೆ ಮತ್ತೊಮ್ಮೆ ತಮಗೆ ನನ್ನ ಆದರಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು ಎಂದು […]

Continue Reading

ಶಿವಮೊಗ್ಗ | ಆಕಾಶವಾಣಿಗೆ 90 ವರ್ಷದ ಸಂಭ್ರಮಾಚರಣೆ

ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸತೀಶ್ ಕುಮಾರ್ ಅಂಡಿಂಜಿ ಅವರು ಪತ್ರಿಕೆ ಮತ್ತು ಆಕಾಶವಾಣಿ ಬರಹದ ವ್ಯತ್ಯಾಸ ತಿಳಿಸುಸುವುದರೊಂದಿಗೆ ಆಕಾಶವಾಣಿ ನಿಖರ ಹಾಗೂ ಸತ್ಯನಿಷ್ಟೆಗೆ ಹೆಸರಾಗಿದೆ ಮತ್ತು ತನ್ನ ಬಾಲ್ಯದ ಗೆಳೆಯ ಆಕಾಶವಾಣಿ ಆಗಿತ್ತು ಎಂದರು. ಆಕಾಶವಾಣಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಕೃಷ್ಣಪ್ಪ ಮಾತನಾಡಿ, ಇಂದು ರೇಡಿಯೋ ಕೇವಲ ರೇಡಿಯೋದಲ್ಲಿ ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಹಾಗು ಡಿಜಿಟಲ್ ಮಿಡಿಯಾದಲ್ಲಿ ಜಗತ್ತಿನಾದ್ಯಂತ ಕೇಳಬಹುದು ಎಂದರು.ನಾಟಕ ರಚನೆ, ಉದ್ಘೋಷಕರ ಬರವಣಿಗೆ, ಕೃಷಿ ಬರವಣಿಗೆ, ಜಾನಪದ ಬರವಣಿಗೆ ಬಗ್ಗೆ […]

Continue Reading

ಶಿವಮೊಗ್ಗ | ಡಿ.ಕೆ. ಶಿವಕುಮಾರ್ ಪ್ರಮಾಣವಚನ ; ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪನವರ ನೇತೃತ್ವದಲ್ಲಿ, ಹೈಯಗ್ರಿವ ಪ್ರಸಾದ ವಿನಿಯೋಗ, ಸಂಭ್ರಮಾಚಾರಣೆ

ಪ್ರತಿಯೊಂದು ಸಮಾಜಕ್ಕೂ, ಧರ್ಮಕ್ಕೂ, ಸಮನಂತರವಾಗಿ.. ಕೆಲಸ ಮಾಡುವ ಮೂಲಕ ರಾಜ್ಯದ ಆದರ್ಶ ಮುಖ್ಯಮಂತ್ರಿಯಾಗಿ ಇನ್ನು 12 ವರ್ಷಗಳ ಕಾಲ ರಾಜ್ಯ ಸರ್ಕಾರ ಸೇವೆ ಮಾಡಲಿ ಮುಖ್ಯಮಂತ್ರಿ ಆಗಿದ್ದು ಭಗವಂತನಲ್ಲಿ ಪ್ರಾರ್ಥಿಸುತ್ತಾ. ಈಗಿರುವ ಪಂಚ ಗ್ಯಾರಂಟಿಗಳ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಇವರ ಅವಧಿಯಲ್ಲಿ ಮಳೆ ಬೆಳೆ ಪ್ರಕೃತಿಯಲ್ಲಿ ಉತ್ತಮ ವಾತಾವರಣ ನಿರ್ಮಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಹೆಚ್ಚಿಸಿ ಯೋಗೇಶ್. ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಬಿಎಮ್ […]

Continue Reading

ಶಿವಮೊಗ್ಗ | ಬೀದಿ ದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ : ಶಾಸಕ ಎಸ್.ಎನ್. ಚನ್ನಬಸಪ್ಪ

ಮುಂದುವರಿದು, ನಗರದ ಬೀದಿ ದೀಪಗಳ ದೈನಂದಿನ ನಿರ್ವಹಣೆಯ ಗುತ್ತಿಗೆ ಪಡೆದು, ನಿಯಮಾವಳಿಗಳ ಪ್ರಕಾರ ಸರಿಯಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕ ಆಸ್ತಿಗೆ ಹಾಗೂ ಜನಸಾಮಾನ್ಯರ ಸುಗಮ ಜೀವನಕ್ಕೆ ಅಡ್ಡಿಪಡಿಸುತ್ತಿರುವ ಗುತ್ತಿಗೆದಾರರ (Contractors) ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು. ಅಂತಹ ವಿಫಲ ಮತ್ತು ಬೇಜವಾಬ್ದಾರಿ ಗುತ್ತಿಗೆದಾರರಿಗೆ ಇಲಾಖೆಯ ವತಿಯಿಂದ ಅಧಿಕೃತ ನೋಟಿಸ್ ನೀಡಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಪಾಲಿಕೆಯ ವಿದ್ಯುತ್ ವಿಭಾಗದ […]

Continue Reading

ಶಿವಮೊಗ್ಗ | ಉತ್ತಮ ಅಭ್ಯಾಸ-ಹವ್ಯಾಸಗಳನ್ನು ಯುವಜನತೆ ಬೆಳಿಸಿಕೊಳ್ಳಬೇಕು : ನ್ಯಾ .ಮಂಜುನಾಥ ಜಿ.ಎ ಕರೆ

ಸಿನೆಮಾ ಮೊದಲಿಗೆ ಬರುವ ಜಾಹಿರಾತನ್ನು ನೋಡಬೇಕು. ಚಟದಿಂದಾಗುವ ಪರಿಣಾಮವನ್ನು ಪ್ರತಿ ಚಲನಚಿತ್ರದ ಮೊದಲಿಗೆ ತೋರಿಸಲಾಗುತ್ತದೆ ಎಂದ ಅವರು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಯುವ ಪೀಳಿಗೆಗೆ ಪರಿಣಾಮಕಾರಿಯಾಗಿ ಅರಿವನ್ನು ಮೂಡಿಸಬೇಕಿದೆ ಎಂದರು. ಡಿಹೆಚ್‌ಓ ಡಾ.ನಟರಾಜ್ ಕೆ ಎಸ್ ಮಾತನಾಡಿ, ತಂಬಾಕು ಸೇವನೆ ಅತ್ಯಂತ ಮಾರಕವಾಗಿದ್ದು, ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಧೂಮಸಹಿತ ತಂಬಾಕು ವಸ್ತುಗಳಲ್ಲಿ 7000 ರಾಸಾಯನಿಕ ವಸ್ತುಗಳಿದ್ದು ಇದರಲ್ಲಿ 69 ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಾಗಿವೆ. ಪ್ರತಿ ವರ್ಷ ವಿಶ್ವವಿದ್ಯಾದಂತ 60 […]

Continue Reading

ಶಿವಮೊಗ್ಗದಲ್ಲಿ SIR ಪ್ರಾರಂಭ ; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ

ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಳ್ಳಲು ಈಗಾಗಲೇ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದ ಅವರು 01.10.2026ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಪರಿಷ್ಕರಣೆ ನಡೆಸಲಾಗುವುದು. ಅದಕ್ಕಾಗಿ ಜೂನ್‌ 20ರಿಂದ 29ರವರೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದಲ್ಲದೇ ಪರಿಷ್ಕರಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳಿಗೆ ತರಬೇತಿಗಳನ್ನು ಆಯೋಜಿಸಲಾಗುವುದು. ಜೂನ್‌ 30ರಿಂದ ಜುಲೈ 29ರವರೆಗಿನ ಒಂದು ತಿಂಗಳ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2002ರ ಮತದಾರರ ವಿಶೇಷ […]

Continue Reading

ಶಿವಮೊಗ್ಗ | ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಪಡೆಯಲು ಆನ್‌ಲೈನ್ ಅರ್ಜಿ ಆಹ್ವಾನ

ದೂ.ಸಂ: 08182-200266 ಸಂಪರ್ಕಿಸಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading