ಶಿವಮೊಗ್ಗ | ಆಕಾಶವಾಣಿಗೆ 90 ವರ್ಷದ ಸಂಭ್ರಮಾಚರಣೆ

ಶಿವಮೊಗ್ಗ

ಶಿವಮೊಗ್ಗ,ಆಕಾಶವಾಣಿಗೆ 90 ವರ್ಷ ತುಂಬುತ್ತಿದ್ದು, ದೇಶದ ಪ್ರಥಮ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ಆರಂಭವಾದ ಆಕಾಶವಾಣಿ ಹತ್ತು ಹಲವು ಪ್ರತಿಭೆಗಳನ್ನು ಹೊರತಂದಿದೆ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್ ಹೇಳಿದರು.

ಆಕಾಶವಾಣಿಗೆ 90ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಕಾಶವಾಣಿ ಭದ್ರಾವತಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ “ಬಾನುಲಿ ಬರಹ” ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರತಿ ದಿನ ವಿವಿಧ ರೀತಿಯ ಕಾರ್ಯಕ್ರಮ ನೀಡುತ್ತಿದೆ.

ಪ್ರತಿಕೋದ್ಯಮದ ವಿದ್ಯಾರ್ಥಿಗಳು ಸಂಶೋಧಕರಾಗಿ ವಸ್ತುನಿಷ್ಟ ವರದಿ ಮಾಡಿದರೆ ಜನಮನಗೆಲ್ಲಲು ಸಾಧ್ಯ ಎಂದು ತಿಳಿಸಿದರು.

ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸತೀಶ್ ಕುಮಾರ್ ಅಂಡಿಂಜಿ ಅವರು ಪತ್ರಿಕೆ ಮತ್ತು ಆಕಾಶವಾಣಿ ಬರಹದ ವ್ಯತ್ಯಾಸ ತಿಳಿಸುಸುವುದರೊಂದಿಗೆ ಆಕಾಶವಾಣಿ ನಿಖರ ಹಾಗೂ ಸತ್ಯನಿಷ್ಟೆಗೆ ಹೆಸರಾಗಿದೆ ಮತ್ತು ತನ್ನ ಬಾಲ್ಯದ ಗೆಳೆಯ ಆಕಾಶವಾಣಿ ಆಗಿತ್ತು ಎಂದರು.

ಆಕಾಶವಾಣಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಕೃಷ್ಣಪ್ಪ ಮಾತನಾಡಿ, ಇಂದು ರೇಡಿಯೋ ಕೇವಲ ರೇಡಿಯೋದಲ್ಲಿ ಅಷ್ಟೇ ಅಲ್ಲದೆ ಮೊಬೈಲ್ ಆ್ಯಪ್ ಹಾಗು ಡಿಜಿಟಲ್ ಮಿಡಿಯಾದಲ್ಲಿ ಜಗತ್ತಿನಾದ್ಯಂತ ಕೇಳಬಹುದು ಎಂದರು.ನಾಟಕ ರಚನೆ, ಉದ್ಘೋಷಕರ ಬರವಣಿಗೆ, ಕೃಷಿ ಬರವಣಿಗೆ, ಜಾನಪದ ಬರವಣಿಗೆ ಬಗ್ಗೆ ಎಂ.ಕೆ.ಶಿವಕುಮಾರ್, ಎಸ್.ಎಂ.ಸುಧಾಕರ್ ಹಾಗೂ ಜಾನಪದ ತಜ್ಞ ಬಸವರಾಜ ನೆಲ್ಲಿಸರ ಅವರು ಚರ್ಚಿಸಿದರು.

ಜಿ ವಿಜಯಕುಮಾರ್ ಕೇಳುಗರ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.ಡಾ. ಬಸವರಾಜ ಗುಬ್ಬಿ ಅವರ ನಿರೂಪಣೆ ಹಾಗು ವಿದ್ಯಾದೇವಿ ಕಾರಂತ್ ಅವರು ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಭದ್ರಾವತಿ ಹಾಗೂ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್, ಬಾನುಲಿ ನಾಟಕದದಲ್ಲಿ ಪಿ.ಹೆಚ್.ಡಿ ಪಡೆದ ಡಾ. ಎನ್.ಸುಧೀಂದ್ರ, ಹಿರಿಯ ಉದ್ಘೋಷಕ ಎಂ.ಕೆ.ಶಿವಕುಮಾರ್, ರೋಟರಿಯ ಜಿ.ವಿಜಯಕುಮಾರ್, ಡಾ. ಎಸ್.ಎಂ.ಸುಧಾಕರ್ ಅವರು ಬಾನುಲಿಯ ವಿವಿಧ ಪ್ರಕಾರದ ಬರವಣಿಗೆ ಬಗ್ಗೆ ಮಾಹಿತಿ ನೀಡಿದರು.

Author