ಶಿವಮೊಗ್ಗ | ಉತ್ತಮ ಅಭ್ಯಾಸ-ಹವ್ಯಾಸಗಳನ್ನು ಯುವಜನತೆ ಬೆಳಿಸಿಕೊಳ್ಳಬೇಕು : ನ್ಯಾ .ಮಂಜುನಾಥ ಜಿ.ಎ ಕರೆ

ಪ್ರೌಢಾವಸ್ಥೆಯಲ್ಲಿ ಯುವಜನತೆ ಕೆಲವು ಆಕರ್ಷಣೆಗಳಿಗೆ ಒಳಗಾಗಿ ಅಥವಾ ಮತ್ಯಾವುದೋ ಒತ್ತಡಕ್ಕೆ ಮಣಿದು ದುಶ್ಚಟಗಳಿಗೆ ಬೀಳುವ ಸಾಧ್ಯತೆ ಇರುತ್ತದೆ. ಆದರೆ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಉತ್ತಮ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಈ ರೀತಿಯ ಉತ್ತಮ ಹವ್ಯಾಸಗಳನ್ನು ತಮ್ಮದಾಗಿಸಿಕೊಳ್ಳಬೇಕು. ಎಷ್ಟೋ ಜನರು ದುಶ್ಚಟಗಳಿಗೆ ಬಲಿಯಾಗಿ ತೀವ್ರವಾಗಿ ಹಾಳಾಗಿರುವುದನ್ನು ಕಂಡಿದ್ದೇವೆ. ಆದ್ದರಿಂದ ದುಶ್ಚಟಗಳಿಂದ ದೂರ ಇರಬೇಕು.