ಶಿವಮೊಗ್ಗ | ಕುವೆಂಪು ವಿವಿಯಿಂದ ಐಪಿಎಸ್ ಅಧಿಕಾರಿ ಡಾ!!. ಹರ್ಷ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಅರಣ್ಯ ಅಂಚಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷಕ್ಕೆ ಕಾರಣಗಳು ಹಾಗೂ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ಪ್ರಬಂಧದಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪಿ.ಎಸ್ ಅವರು ಐದು ವರ್ಷಗಳ ಕಾಲ ಕ್ಷೇತ್ರ ಆಧಾರಿತ ಅಧ್ಯಯನವನ್ನು ನಡೆಸಿದ್ದಾರೆ. ಪ್ರಸ್ತುತ ಡಾ.ಪಿ.ಎಸ್.ಹರ್ಷರವರು ಬಳ್ಳಾರಿ ವಲಯದ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading

ಶಿವಮೊಗ್ಗ | Auto ದಬ್ಬಾಳಿಕೆ ; ಟ್ರಾಫಿಕ್ ಪೊಲೀಸ್ ಇಲಾಖೆಗೆ ಇಲ್ಲಿದೆ ಪರಿಹಾರ..!

ಆದರೆ ಏನಾದರು ಬದಲಾವಣೆ ಆಯಿತಾ ಎಂದರೆ ಉತ್ತರ ಮಾತ್ರ ಏನು ಬದಲಾವಣೆಯಿಲ್ಲದಾಗಿದೆ. ಇದಕ್ಕೆಲ್ಲ ಕಾರಣಗಳೇನು?ನಗರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಾದರು ಏನು? ಸಂಪೂರ್ಣ ಮಾಹಿತಿ ನಿಮ್ಮ ಮುಂದೆ, ಶಿವಮೊಗ್ಗ ನಗರದಲ್ಲಿ ನಿನ್ನೆ ದಿವಸ ನಡೆದ ಒಂದು ಘಟನೆಯ ಪ್ರಯಾಣಿಕರು ಮಾಡಿರುವ ಆರೋಪ ಗಂಭೀರವಾಗಿದೆ. ಅದೇನಂದರೆ ನಿನ್ನೆ ದಿವಸ ದಾವಣಗೆರೆ ಜಿಲ್ಲೆಯ ಯಾವದೋ ಹಳ್ಳಿಯಿಂದ ರೋಗಿ ಹಾಗೂ ಅವರೊಟ್ಟಿಗೆ ಮತ್ತೊಬ್ಬರು ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ಬರಬೇಕಿತ್ತು.ಆದರೆ ಅವರು ಹಳ್ಳಿಯವರು ಹಾಗೂ ಶಿವಮೊಗ್ಗದ ಪರಿಚಯವಿಲ್ಲದ ಕಾರಣ ನಗರದ […]

Continue Reading

ಶಿವಮೊಗ್ಗ | ಹೆಲ್ಮೆಟ್ ಹಾಕಲ್ಲ ಏನು ಮಾಡುತ್ತೀರಾ? ಪೊಲೀಸರಿಗೆ ಅವಾಜ್ ಮತ್ತು ಬೆದರಿಕೆ ಹಾಕಿದ ಪುಂಡರು ಅಂದರ್

ನಿಯಮ ಪಾಲಿಸುವಂತೆ ಹೇಳಿದ ಅಧಿಕಾರಿಗಳ ಜೊತೆ ಸಯ್ಯದ್ ಮುಜಾಮಿಲ್ ರಸ್ತೆಯ ಮಧ್ಯೆಯೇ ವಾಗ್ವಾದಕ್ಕಿಳಿದಿದ್ದಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜಬಿವುಲ್ಲಾ ಎಂಬಾತನು ಸೇರಿಕೊಂಡು, ನಾವು ಹೆಲ್ಮೆಟ್ ಹಾಕುವುದಿಲ್ಲ, ನೀವು ಏನು ಮಾಡುತ್ತೀರಾ? ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಸಮವಸ್ತ್ರದಲ್ಲಿದ್ದ ಅಧಿಕಾರಿಗಳನ್ನು ದೂಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಬಳಿಕ ಬೈಕ್ ಕೀ ಕಿತ್ತುಕೊಂಡು ಪೊಲೀಸರಿಗೆ ಬೆದರಿಕೆ ಹಾಕಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಯ್ಯದ್ ಮುಜಾಮಿಲ್ ಮತ್ತು […]

Continue Reading

ಶಿವಮೊಗ್ಗ | ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ; ನುಡಿ ಕಾಯಕಕ್ಕೆ ಗೌರವ

ಸಮಾರಂಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷರಾದ ಶ್ರೀಮತಿ ಮಹಾದೇವಿ, ಮಾಜಿ ಶಾಸಕರಾದ ಶ್ರೀ ಕೆ.ಬಿ. ಪ್ರಸನ್ನ ಕುಮಾರ್, ಎಸ್.ಪಿ. ದಿನೇಶ್ ಸೇರಿದಂತೆ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿಲ್ಲ : ಜಿಲ್ಲಾಧಿಕಾರಿ ಸ್ಪಷ್ಟನೆ

ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿಲ್ಲ. ಜಮೀನು ಗುರುತಿಸುವಿಕೆ ಅಥವಾ ಸ್ಥಾವರ ಸ್ಥಾಪನೆಯ ಕ್ರಮಗಳು ನಡೆಯುತ್ತಿವೆ ಎಂಬುದು ಕೇವಲ ವದಂತಿಯಾಗಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

Continue Reading

ಶಿವಮೊಗ್ಗ | ನೂತನ ನೀರಿನ ಶುದ್ಧೀಕರಣ ಘಟಕ ಸ್ಥಾಪನೆಗೆ ಹಾಗೂ ತಾಂತ್ರಿಕ ಅಡಚಣೆ ನಿವಾರಣೆಗೆ ಶಾಸಕರ ಪ್ರಯತ್ನ.!

ಇದೇ ವೇಳೆ ನೀರು ಸರಬರಾಜಿನ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಾದ ಶುದ್ಧೀಕರಣ ಮಾನದಂಡಗಳನ್ನು ಅನುಸರಿಸಲು ನೀರು ಸರಬರಾಜು ಮಂಡಳಿಯ ಇಂಜಿನಿಯರ್‌ಗಳಿಗೆ ಸೂಚಿಸಿದರು. ಪೈಪ್‌ಲೈನ್ ಸೋರಿಕೆ ತಡೆಗಟ್ಟುವುದು ಮತ್ತು ಎಲ್ಲಾ ವಾರ್ಡ್‌ಗಳಿಗೆ ಸಮಾನವಾಗಿ ನೀರು ಹಂಚಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಭೇಟಿಯ ಸಂದರ್ಭದಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕೈಬಿಡಿ : APCR ಆಗ್ರಹ

ಈ ಯೋಜನೆಯಡಿ ಸುಮಾರು ೧,೨೦೦ ಎಕರೆ ಪ್ರದೇಶವನ್ನು ಗುರುತಿಸಲಾಗಿದ್ದು ಅದರಲ್ಲಿ ೪೮೫ ಎಕರೆ ಗೋಮಾಳ ಮತ್ತು ೯೦೦ ಎಕರೆಗೂ ಅಧಿಕ ದಟ್ಟ ಅರಣ್ಯ ಹಾಗೂ ಕಂದಾಯ ಭೂಮಿ ಒಳಗೊಂಡಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸರ್ವೆ ನಂಬರ್ ೧೦೪, ೯೪, ೮೦, ೮೨ ಸೇರಿದಂತೆ ಹತ್ತಾರು ಜಮೀನುಗಳ ವಿವರಗಳನ್ನು ತಾಲೂಕು ಆಡಳಿತವು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿರುವುದು ಯೋಜನೆ ಬಗೆಗೆ ಇನ್ನಷ್ಟು ಗುಮಾನಿಯನ್ನು ಎತ್ತಿ ತೋರಿಸುತ್ತಿದೆ. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ವಲಯ ಹಾಗೂ ಶರಾವತಿ ಹಿನ್ನೀರಿನ ವ್ಯಾಪ್ತಿಯಲ್ಲಿ ಅಣು […]

Continue Reading

ಶಿವಮೊಗ್ಗ | ಕುಂಸಿಯ ಯುವಕನಿಗೆ 20 ವರ್ಷ ಶಿಕ್ಷೆ

ನ್ಯಾಯಾಧೀಶ ನಿಂಗನಗೌಡ ಭ ಪಾಟೀಲ್ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು. ಪ್ರಕರಣದ ಹಿನ್ನೆಲೆ : 2022 ನೇ ಸಾಲಿನಲ್ಲಿ 17 ವರ್ಷದ ಯುವತಿಗೆ, ಅಪರಾಧಿಯು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ತಿಪ್ಪೇಸ್ವಾಮಿ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Continue Reading

ಶಿವಮೊಗ್ಗ | ನಾಪತ್ತೆಯಾಗಿದ್ದ ಅಡಿಕೆ ತುಂಬಿದ್ದ ಲಾರಿ ಮಾಲು ಸಹಿತ ಪತ್ತೆ

ಮುಹಿಬುಲ್ಲಾ ಮಾ. ೨೬ ರಂದು ರಾತ್ರಿ ೧೧ ಗಂಟೆಗೆ ಅಡಿಕೆ ತುಂಬಿದ ಲಾರಿಯನ್ನು ಬೆಂಗಳೂರು ಕಡೆಗೆ ಹೋಗಲು ಶಿವಮೊಗ್ಗದಿಂದ ಹೊರಟಿದ್ದನು. ನಂತರ ಈ ಲಾರಿ ಯಶವಂತಪುರಕ್ಕೆ ಹೋಗಿರಲಿಲ್ಲ. ಹುಡುಕಾಡಿದಾಗ ಚಾಲಕ ಮುಹಿಬುಲ್ಲಾ ಮಾರನೆಯ ದಿನ ಶಿವಮೊಗ್ಗದಲ್ಲಿ ಸಿಕ್ಕಿದ್ದು ವಿಚಾರಿಸಲಾಗಿ ಶಿವಮೊಗ್ಗ ವಾಸಿ ಮೊಹಮದ್ ಗೌಸ್ ಮತ್ತು ನೌಶದ್ ತನ್ನ ಜೊತೆ ಲಾರಿಯಲ್ಲಿ ಬಂದು ಹೊಳೆಹೊನ್ನೂರು ಕೈಮರ ಬಳಿ ಪೆಟ್ರೋಲ್ ಬಂಕ್ ಹತ್ತಿರ ರಾತ್ರಿ ೧೨.೨೦ ಗಂಟೆ ವೇಳೆ ಲಾರಿಯಲ್ಲಿದ್ದ ಅಡಿಕೆಯನ್ನು ಮೂವರೂ ಸೇರಿ ಮಾರಾಟ ಮಾಡೋಣ. ಇದರಿಂದ […]

Continue Reading

ಶಿವಮೊಗ್ಗ | ನಾಳೆ ನೀಟ್ ಪರೀಕ್ಷೆ ; ಜಿಲ್ಲಾಡಳಿತದಿಂದ ಬಿಗಿ ಕ್ರಮ : ಹೇಮಂತ್. ಎನ್

ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ರ ಕಲಂ 163 ರನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಭದ್ರತೆ: ಪ್ರತಿ ಕೇಂದ್ರಕ್ಕೂ ಒಬ್ಬರು ಮ್ಯಾಜಿಸ್ಟ್ರೇಟ್ ದರ್ಜೆಯ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದ್ದು, ಸೂಕ್ತ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡಿದ್ದಾರೆ. ವೀಕ್ಷಕರು ಬೆಳಗ್ಗೆ 11 ಗಂಟೆಗೆ ಕೇಂದ್ರದಲ್ಲಿ ಹಾಜರಿರಲಿದ್ದಾರೆ. ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಡಚಣೆಯಿಲ್ಲದೆ […]

Continue Reading