ಇದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಗಮನಿಸಲೇಬೇಕಾದ ತಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಪ ಬಿಸಿ ಮುಟ್ಟಿಸಬೇಕಾದ ಕಥೆ ಇದು.
ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಅದನ್ನೇ ಮಾರಾಟ ಮಾಡಲು ಹೊರಟ ಮಾಫಿಯಾ ಕಥೆ ಇದು. ಅರಣ್ಯ ಇಲಾಖೆಯವರ ಬೇಜವಾಬ್ದಾರಿತನದಿಂದ ಅರಣ್ಯ ಭೂಮಿಯ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಲಕ್ಷಗಟ್ಟಲೆ ಬೆಲೆಗೆ ಮಾರಾಟ ಮಾಡಲು ಹೊರಟಿದ್ದಾನೆ.
ಇಷ್ಟಕ್ಕೂ ವಿಷಯ ಏನೆಂದರೆ…?
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿರುವ ಸರ್ವೇ ನಂಬರ್ 27 ಅರಣ್ಯ ಭೂಮಿಯಾಗಿದೆ. ಇದೆ ಗ್ರಾಮಕ್ಕೆ ಮೂರ್ನಾಲ್ಕು ವರ್ಷಗಳ ಹಿಂದೆ ಭದ್ರಾವತಿ ನಗರದ ವ್ಯಕ್ತಿ ಪ್ರವೀಣ್ ಶೆಟ್ಟಿ ಬಿನ್ ಭೋಜ ಶೆಟ್ಟಿ ಎಂಬುವವರು ಹಿರಿಯೋಗಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಖರೀದಿ ಮಾಡಿಕೊಂಡಿದ್ದಾನೆ.
ಒಂದೆಡೆ ಈ ಜಮೀನಿನ ಕೌಟುಂಬಿಕ ವಿವಾದ ಹಿನ್ನೆಲೆ ಕೋರ್ಟು ಮೆಟ್ಟಿಲೇರಿದೆ. ಹೀಗಿರುವಾಗ ಪ್ರವೀಣ್ ಶೆಟ್ಟಿ ಈ ಅರಣ್ಯ ಭೂಮಿ ಪಕ್ಕದಲ್ಲಿ ಜಮೀನು ಖರೀದಿಸಿ ವಾಸಿಸುತ್ತ ಪಕ್ಕದಲ್ಲಿರುವ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬಗ್ಗೆ ಹೊಸನಗರ ತಹಸಿಲ್ದಾರ್ ಗೆ ಸ್ಥಳ ನೀಡಿದ್ದರು. ಅಂದಿನ ತಹಸೀಲ್ದಾರ್ ರಶ್ಮಿ ಹಾಲೇಶ್ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ದೂರಿನ ಪರಿಶೀಲನೆ ನಡೆಸಿದ ತಹಸೀಲ್ದಾರ್ ಇದು ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿದ ಭೂಮಿಯಲ್ಲ ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದ್ದು ಪಹಣಿಯಲ್ಲಿ ಅರಣ್ಯ ಎಂದು ಇರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಅರಣ್ಯ ಇಲಾಖೆಗೆ ಪತ್ರವನ್ನು ಕೂಡ ಬರೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ತದ ನಂತರ ಕಳೆದ ಎರಡು ವರ್ಷಗಳಿಂದ ಅರಣ್ಯ ಇಲಾಖೆ ಪ್ರವೀಣ್ ಶೆಟ್ಟಿ ಗೆ ಅಕ್ರಮ ಒತ್ತುವರಿಯ ಕುರಿತು ನೋಟಿಸ್ ಮೇಲೆ ನೋಟಿಸ್ ನೀಡಿದೆ. ಆರ್ ಎಫ್ ನೋಟಿಸ್ ಬಳಿಕ ಎಸಿಎಫ್ ಕೋರ್ಟ್ ನಲ್ಲಿ ಕೂಡ ನೋಟಿಸ್ ಜಾರಿಯಾಗಿದೆ. ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಲ್ಲಿದ್ದ ಕೆಲ ಮರಗಳನ್ನು ಪ್ರವೀಣ್ ಶೆಟ್ಟಿ ಕಡಿತಲೆ ಮಾಡಿದ್ದು ಈ ಬಗ್ಗೆ ಕೂಡ ಸ್ಥಳೀಯರು ಅರಣ್ಯ ಇಲಾಖೆಗೆ ಗಮನಕ್ಕೆ ತಂದಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಒತ್ತುವರಿ ತೆರವು ಮಾಡಲು ಅಲ್ಲಿರುವಂತಹ ಮರಗಳ ಕಡಿತಲೇ ವಿಷಯವಾಗಿ ಅರಣ್ಯ ಇಲಾಖೆಯ ಕ್ರಮ ಕುಂಟುತ್ತಾ ಸಾಗಿದೆ.
ಇದೆಲ್ಲದರ ನಡುವೆ ಸಾಗರ ಹೊಸನಗರ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಹ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಸಹ ಅರಣ್ಯ ಇಲಾಖೆ ಕ್ರಮ ಕೈಗೊಂಡಿರುವುದಿಲ್ಲವೆಂಬ ಆರೋಪವಾಗಿದೆ.

ಪ್ರಸ್ತುತ ಅರಣ್ಯ ಭೂಮಿಯನ್ನೇ ಮಾರಾಟ ಮಾಡಲು ಹೊರಟಿರುವ ವಿಚಾರ ಆಚೆ ಬರುತ್ತಿದೆ ಅದರಂತೆ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಈ ಪ್ರವೀಣ್ ಶೆಟ್ಟಿ ಬಿನ್ ಭೋಜ್ ಶೆಟ್ಟಿ ತಮ್ಮ ಜಾಗ ಹಾಗೂ ಅರಣ್ಯ ಭೂಮಿ ಎರಡು ಜಾಗ ನಮ್ಮದೇ ಎಂದು ತಿಳಿಸಿ ಮಾರಾಟಕ್ಕೆ ಸಜ್ಜಾಗಿದ್ದಾರೆ ಎಂಬ ಮಾಹಿತಿಯಾಗಿದೆ. ಇನ್ನು ಅರಣ್ಯ ಭೂಮಿಯನ್ನು 26 ಲಕ್ಷ ವೆಚ್ಚ ನಿಗದಿ ಪಡಿಸಿರುವ ವಿಚಾರ ಕೇಳಿ ಬಂದಿದೆ.
ಅರಣ್ಯ ಭೂಮಿಯನ್ನೇ ವ್ಯಕ್ತಿ ಒಬ್ಬ ಮಾರಾಟ ಮಾಡಲು ಮುಂದಾದರು ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಸಂಶಯಕ್ಕೆ ಎಡೆಮಾಡಿದೆ. ಇನ್ನು ಈ ಪ್ರವೀಣ್ ಶೆಟ್ಟಿ ಅದೆಷ್ಟು ಪ್ರಭಾವಿ ಎಂದರೆ ತಮ್ಮ ಮೇಲೆ ಯಾವದೇ ದೂರು ಬಂದರು ಸಹ ಅರಣ್ಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಇವರ ಬಗ್ಗೆ ಬಂದಿರುವ ದೂರು ವಿಚಾರದಲ್ಲಿ ಮುಂದುವರೆಯದಂತೆ ಅಧಿಕಾರಿಗಳನ್ನು Maintainance ಮಾಡುವುದರಲ್ಲಿ ಎತ್ತಿದ ಕೈ ಎಂಬ ಮಾಹಿತಿಗಳು ಕೇಳಿಬರುತ್ತಿದೆ.
ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಇಲಾಖೆಯ ಜಾಗವನ್ನೇ ಮಾರಾಟ ಮಾಡಲು ಹೊರಟಿರುವ ವ್ಯಕ್ತಿ ಮೇಲೆ ಕ್ರಮಕ್ಕೆ ಮುಂದಾಗುತ್ತಾರಾ?ಹಾಗೂ ಮಾನ್ಯ ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರೇ ತಾವುಗಳು ಕೂಡ ಈ ಸೂಕ್ಷ್ಮ ವಿಚಾರದ ಬಗ್ಗೆ ಗಮನವಹಿಸಬೇಕಾಗಿದೆ.ಹಾಗೂ ಮಾನ್ಯ ಲೋಕಾಯುಕ್ತ ಅವರು ಈ ಕುರಿತು ಸ್ವಯಂ ಪ್ರೇರಿತ ಸುಮೊಟೊ ಪ್ರಕರಣ ದಾಖಲಿಸಿ ತಪ್ಪು ಎಸಗುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಎಂದು ಜನಸಾಮಾನ್ಯರ ಆಗ್ರಹವಾಗಿದೆ.
ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಬಗ್ಗೆಯೂ ದೂರು..!
ಇದೆ ಪ್ರವೀಣ್ ಶೆಟ್ಟಿ ಪಕ್ಕದಲ್ಲಿ ಹರಿಯುವ ಹಳ್ಳದಿಂದ ನೀರು ತೆಗೆಯಲು ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ತಿಳಿದು ಅಂದಿನ ಮೆಸ್ಕಾಂ AEE ಚಂದ್ರಶೇಖರ್ ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಮೋಟಾರ್ ಗೆ ಅಳವಡಿಸಿದ್ದ ಸಂಪರ್ಕ ಕಟ್ ಮಾಡಲಾಗಿತ್ತು. ಇಷ್ಟಾದರೂ ಪದೇಪದೇ ಕದ್ದು ಮುಚ್ಚಿ ಕರೆಂಟ್ ಸಂಪರ್ಕ ಪಡೆಯುತ್ತಿದ್ದು ಮೆಸ್ಕಾಂ ಇಲಾಖೆಯವರು ಕೂಡ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಈತನ ಅಕ್ರಮ ವಿದ್ಯುತ್ ಸಂಪರ್ಕದಿಂದ ಜನಜಾನುವಾರುಗಳಿಗೆನಾದರೂ ತೊಂದರೆಯಾಗಿ ಸಾವನ್ನಪ್ಪಿದ್ದರೆ ಇದರ ಜವಾಬ್ದಾರಿಯನ್ನು ಮೆಸ್ಕಾಂ ಅಧಿಕಾರಿಗಳು ಹೊರುವವರೇ..??

ಸಂಬಂಧಪಟ್ಟವರಿಗೆ ಆಗುವ ನಷ್ಟವನ್ನು ಮೆಸ್ಕಾಂ ಅಧಿಕಾರಿಗಳೇ ಭರಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮಲೆನಾಡಿನ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ರೈತರು ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಪ್ರವೀಣ್ ಶೆಟ್ಟಿ ಅಂತಹ ವ್ಯವಸ್ಥೆ ಎಲ್ಲಿಂದಲೋ ಬಂದು ಆಕ್ರಮಗಳ ಮೇಲೆ ಅಕ್ರಮ ಮಾಡುತ್ತಿದ್ದರು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಗಳು ಕಣ್ಮುಚ್ಚಿ ಕುಳಿತುಕೊಂಡಿವೆ.
ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂಬುದಾದರೆ ಅಲ್ಲಿ ಅಡಗಿರುವ ಅಸಲಿ ಎತ್ತು ಏನು ಎಂಬ ಸಂಶಯಗಳು ಅನುಮಾನದ ಪ್ರಶ್ನೆಗಳು ಹುಟ್ಟುಕೊಂಡಿವೆ.
ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ತಮ್ಮ ಅರಣ್ಯ ಇಲಾಖೆ ಭೂಮಿಯನ್ನು ಒತ್ತುವರಿಂದ ತೆರವುಗೊಳಿಸಿ ತಮ್ಮ ದಕ್ಷತೆ ಮೆರೆಯಬೇಕಿದೆ . ಅರಣ್ಯ ಇಲಾಖೆಗೆ ಬಂದಿರುವ ಆರ್ ಎಫ್ಒ ಆಸಿಫ್ ಮತ್ತು ಎಸಿಎಫ್ ಮಹೇಶ್ ರವರು ಈ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಲಿ ಎಂಬುವುದು ಸಾರ್ವಜನಿಕರ ಅಪೇಕ್ಷೆಯಾಗಿದೆಇನ್ನೊಂದೆಡೆ ಮೆಸ್ಕಾಂ ಅಧಿಕಾರಿಗಳು ಕೂಡ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಬೇಕಿದೆ





