ಶಿವಮೊಗ್ಗ | ಸಚಿವ ಮಧು ಬಂಗಾರಪ್ಪಗೆ ಏಕ ವಚನದಲ್ಲಿ ತೇಜೋವಧೆ, ಕ್ಷಮಾಪಣೆ ಕೇಳದಿದ್ದರೆ ಸಂಸದರ ಮನೆಗೆ ಮುತ್ತಿಗೆ : ನಾಗರಾಜ ಗೌಡ ಎಚ್ಚರಿಕೆ

ರಾಜಕೀಯ

ಶಿವಮೊಗ್ಗ,ಕಳೆದ 18ನೇ ತಾರೀಖು ಶಿಕಾರಿಪುರದಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ಸಂಸದ ಬಿ. ವೈ. ರಾಘವೇಂದ್ರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರಿಗೆ ಏಕ ವಚನದಲ್ಲಿ ಸಾರ್ವಜನಿಕವಾಗಿ ತೇಜೋವಧೆಮಾಡಿರುವ ಬಗ್ಗೆ ಕ್ಷಮಾಪಣೆ ಕೇಳದಿದ್ದರೆ ಶಿಕಾರಿಪುರ ತಾಲ್ಲೂಕಿನ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡಿ ಸಂಸದರ ಮನೆಗೆ ಮುತ್ತಿಗೆ ಹಾಕುವುದಾಗಿ ಕೆಪಿಸಿಸಿ ಪ್ರ. ಕಾರ್ಯದರ್ಶಿ ನಾಗರಾಜ ಗೌಡ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಇಂದಿಲ್ಲಿ ಮಾತನಾದಿದ ಅವರು, ಜ ಮಧು ಬಂಗಾರಪ್ಪ ಕಸ್ತೂರಿರಂಗನ್ ಪಾದಯಾತ್ರೆಗೆ ಬಂದ ಸಂದರ್ಭದಲ್ಲಿ ತಾಲ್ಲೂಕಿನ 12 ಗ್ರಾಮಗಳ ಕಸ್ತೂರಿರಂಗನ್ ವರದಿಗೆ ಒಳಪಟ್ಟವರ ಪರವಾಗಿ ಪಾದಯಾತ್ರೆ ಮಾಡಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಇದರಿಂದ ಸಂಸದರು ಹತಾಶೆಗೊಂಡು ಸಭೆಯಲ್ಲಿ ಜಿಲ್ಲಾ ಏಕವಚನದಲ್ಲಿ ಸಾರ್ವಜನಿಕವಾಗಿ ತೇಜೋವಧೆ ಮಾಡಿದ್ದಾರೆ. ಇದರಿಂದ ಗೊತ್ತಾಯಿತು ನಾಲಿಗೆ ನಿಮ್ಮ ಸಂಸ್ಕೃತಿಯನ್ನು ಹೇಳುತ್ತದೆ ಎಂದು. ಇದಕ್ಕಾಗಿ ಬಹಿರಂಗವಾಗಿ ಮಧು ಬಂಗಾರಪ್ಪರವರಿಗೆ ಕ್ಷಮೆ ಯಾಚಿಸಬೇಕು ಎಂದರು.

ಸಂಸದರು ಎಲ್ಲಾ ಸಂದರ್ಭದಲ್ಲೂ ‘ನಿಮ್ಮ ರಾಘಣ್ಣ’ ಅಂತ ತಾವೇ ಹೇಳಿಕೊಳ್ಳುತ್ತಾರೆ. ಕೇಂದ್ರದ ಅರಣ್ಯ ಸಚಿವ ಭೋಪೇಂದ್ರಸಿಂಗ್‌ ಮತ್ತು ಮಾಜಿ ಸಚಿವ ಪ್ರಕಾಶ ಜಾವಡೇಕರ್ರನ್ನು ಬೇಟಿ ಮಾಡಿ ಕಸ್ತೂರಿರಂಗನ್ ವರದಿ ಜಾರಿ ಮಾಡಬಾರದು ಎಂದು ಮನವಿ ಮಾಡಿದರೂ ಸಹ ಪದೇ ಪದೇ ಇವರ ಮನವಿಯನ್ನು ತಿರಸ್ಕರಿಸಿ ಇವರದೇ ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ಅಧಿಸೂಚನೆ ಹೊರಡಿಸಲು ಪ್ರಕಟಣೆ ಹೊರಡಿಸಿದ್ದಾರೆ.

ಇಲ್ಲಿ ಗೊತ್ತಾಗುತ್ತದೆ ನಿಮ್ಮ ಮಾತಿಗೆ ಸಂಸದರ ಮನವಿಗೆ ಕೇಂದ್ರ ಸರ್ಕಾರದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಎಂದರು.ಶಾಸಕ ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ ತಾಲ್ಲೂಕಿನಲ್ಲಿ ಕೆರೆಗಳಿಗೆ ಏತ ನೀರಾವರಿಗೆ ಸಾವಿರಾರು ಕೋಟಿ ಜನರ ತೆರಿಗೆ ಹಣವನ್ನು ಬಳಸಿಕೊಂಡು ಏತ ನೀರಾವರಿ ಯೋಜನೆಯನ್ನು ಮಾಡಿ ತಾವು ಸ್ವಂತ ತಮ್ಮ ಜೇಬಿನಿಂದ ಹಣ ಕೊಟ್ಟಿರುವ ರೀತಿಯಲ್ಲಿ ‘ಪೂಜ್ಯ ತಂದೆಯವರು’ ನಿಮ್ಮ ರಾಘಣ್ಣ’ ಅಂತ ಸಾರ್ವಜನಿಕ ಸಭೆಗಳಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನ ಜನರು ನೀವು ಖಾಲಿ ಕೈಯಲ್ಲಿ ಶಿಕಾರಿಪುರಕ್ಕೆ ಬಂದಂತಹ ಸಂದರ್ಭದಲ್ಲಿ ಸುಮಾರು 1983 ರಿಂದ ಇಲ್ಲಿಯವರೆಗೂ ಸುಮಾರು 40-45 ವರ್ಷ ತಂದೆ – ಮಕ್ಕಳಿಗೆ ಅಧಿಕಾರವನ್ನು ಕೊಟ್ಟು ತಾಲ್ಲೂಕಿನಲ್ಲಿ ಬೆಳೆಸಿದ್ದಾರೆ. ಆದರೆ ನೀವು ತಾಲ್ಲೂಕಿನ ಜನತೆಗೆ ಶಾಶ್ವತವಾದ ಪರಿಹಾರ ಕಲ್ಪಿಸಿಕೊಟ್ಟಿದ್ದೀರಿ ಎಂಬುದನ್ನು ನೀವು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದರು.

Author