ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ ಜಿಲ್ಲಾ ಎಸ್ಪಿ ನಿಖಿಲ್‌ ಗೆ ಕರವೇ ಸ್ವಾಭಿಮಾನಿ ಬಣದಿಂದ ಅಭಿನಂದನೆ

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಮಹಮದ್ ಶಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆ.ಬಿ., ಜಿಲ್ಲಾ ಕಾರ್ಯದರ್ಶಿ ಕರವೇ ಸಾಧಿಕ್, ಗ್ರಾಮಾಂತರ ನಗರಾಧ್ಯಕ್ಷ ಪ್ರವೀಣ್ ಕುಮಾರ್, ಗ್ರಾಮಾಂತರ ಉಪಾಧ್ಯಕ್ಷ ಕೇಶವ ವಿ., ಜಿಲ್ಲಾ ಮುಖಂಡರಾದ ಗೀರೀಶ್, ಮಂಜುನಾಥ್ ಟಿ.ಎಂ. ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್ ಲೋಕಾಯುಕ್ತ ಬಲೆಗೆ

ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Continue Reading

ಮಲೆನಾಡಿನ ಕುಗ್ರಾಮಗಳಿಗೂ 4G ನೆಟ್ವರ್ಕ್ : BSNL ಟವರ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸಂಸದ ಬಿ.ವೈ. ರಾಘವೇಂದ್ರ ಕಟ್ಟುನಿಟ್ಟಿನ ಸೂಚನೆ

ಕೇವಲ ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳಿಂದ ಗ್ರಾಮಗಳು ನೆಟ್‌ವರ್ಕ್ ಸೌಲಭ್ಯದಿಂದ ವಂಚಿತವಾಗಬಾರದು. ಪ್ರತಿಯೊಂದು ಗ್ರಾಮದಲ್ಲಿನ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.ಮಲೆನಾಡಿನ ಕುಗ್ರಾಮಗಳಿಗೂ ಸಮರ್ಪಕ ಸಂಪರ್ಕವಿಶೇಷವಾಗಿ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶಗಳು ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕುಗ್ರಾಮಗಳಲ್ಲಿ ಭೌಗೋಳಿಕ ಹಾಗೂ ಗುಡ್ಡಗಾಡು ಪ್ರದೇಶಗಳ ಕಾರಣದಿಂದ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವಂತೆ ಸಂಸದರು ಸೂಚಿಸಿದರು. “ನಗರ ಪ್ರದೇಶಗಳಿಗೆ […]

Continue Reading

ಶಿವಮೊಗ್ಗ | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ನಗರದಲ್ಲಿ ಮನಸೆಳೆವ ಹೋರಾಟಗಾರರ, ದೇವತೆಗಳ ಕಟೌಟ್ ಗಳು

ಅಮೀರ್ ಅಹಮದ್ ಸರ್ಕಲ್‌ನಲ್ಲಿ ಬೃಹತ್ ಗಾತ್ರದ ವೇದಿಕೆಯನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಸಿಂಹದ ಮೇಲೆ ತುಳಜಾ ಭವಾನಿ ದೇವಿಯು ಶಿವಾಜಿಗೆ ಖಡ್ಗ ನೀಡುತ್ತಿರುವಂತೆ ಹಾಗೂ ಶಿವಾಜಿಯು ಅತ್ಯಂತ ಭಕ್ತಿಯಿಂದ ಕುಳಿತು ಅದನ್ನು ಸ್ವೀಕರಿಸುತ್ತಿರುವಂತೆ ಅತ್ಯಂತ ನೈಜವಾಗಿ ಮೂರ್ತಿಯನ್ನು ವಿನ್ಯಾಸಗೊಳಿಸಲಾಗಿದೆ. ವಿಗ್ರಹ ಪ್ರತಿಷ್ಠಾಪನೆಯ ಅಂತಿಮ ಹಂತದ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಗಾಂಧಿ ಬಜಾರ್‌ನಲ್ಲಿ ಪಂಚಮುಖಿ ಆಂಜನೇಯನ ವಿಗ್ರಹ ಪ್ರತಿಷ್ಠಾಪನೆಕಳೆದ ಬಾರಿ ಶಿಲ್ಪಿ ಜೀವನ್ ಅವರು ಗಾಂಧಿ ಬಜಾರ್‌ನ ಮುಖ್ಯ ದ್ವಾರದಲ್ಲಿ ಸಮುದ್ರಮಂಥನದ ವಿನ್ಯಾಸವನ್ನು ರೂಪಿಸಿದ್ದರು. ಈ ಬಾರಿ ಅದೇ ಸ್ಥಳದಲ್ಲಿ […]

Continue Reading

ಶಿವಮೊಗ್ಗ | ಜಿಲ್ಲಾ ಪಂಚಾಯಿತಿಯ ನೂತನ ಸಿಇಒ ಆಗಿ ರಿಷಿ ಆನಂದ್ ನೇಮಕ

ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಆಡಳಿತದ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವರನ್ನು ಇದೀಗ ತಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ.

Continue Reading