ಶಿವಮೊಗ್ಗ | ಸಂಭ್ರಮದಿಂದ ಕೆ.ಎಸ್.ಈಶ್ವರಪ್ಪ ಜನ್ಮದಿನಾಚರಣೆ

ಶಿವಮೊಗ್ಗ

ಶಿವಮೊಗ್ಗ,ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ೭೮ ನೇ ಹುಟ್ಟುಹಬ್ಬವನ್ನು ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ಅವರ ಜಯಲಕ್ಷ್ಮಿ ಸದನದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿದರು.ಸಹಸ್ರಾರು ಜನರ ಸಮ್ಮುಖದಲ್ಲಿ ನಡೆದ ಜನ್ಮದಿನ ಕಾರ್ಯಕ್ರಮಕ್ಕೆ ಈಶ್ವರಪ್ಪ ಅಭಿಮಾನಿ ಬಳಗ, ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಮಾರಿಕಾಂಬ ಫೈನಾನ್ಸ್ ಸಂಸ್ಥೆಗಳು ಸಹಕಾರ ನೀಡಿದ್ದವು.

ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಮಹಿಳೆಯರು, ಅಭಿಮಾನಿಗಳು, ವಿವಿಧ ಸಂಘಟನೆಯವರು, ಬೆಂಬಲಿಗರು ಈಶ್ವರಪ್ಪರಿಗೆ ಶುಭ ಹಾರೈಸಿದರು.

ಈಶ್ವರಪ್ಪ ಕುಟುಂಬದವರು ಬೆಳಗ್ಗೆ ೯ ಗಂಟೆಗೆ ಕೋಟೆ ಮಾರಿಕಾಂಬಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ನೂರಾರು ವೈದಿಕರಿಂದ ಸಾಮೂಹಿಕ ರುದ್ರಪಠಣ, ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಈಶ್ವರಪ್ಪ ಹೃದಯವಂತ ನಾಯಕ. ೭೮ ವರ್ಷದವರು ಅವರು ಎಂದರೆ ನಂಬಲಾಗುವುದಿಲ್ಲ. ಹರಯದ ಹುಡುಗರನ್ನು ನಾಚಿಸುವವಂತೆ ಕ್ರಿಯಾಶೀಲರಾಗಿದ್ದಾರೆ. ಧರ್ಮದ, ಹಿಂದುತ್ವದ ಪ್ರಶ್ನೆ ಬಂದಾಗ ಎದ್ದು ನಿಲ್ಲುತ್ತಾರೆ. ಸಮಾಜಕ್ಕಾಗಿ ಬದುಕುವುದೇ ನಿಜವಾದ ಬದುಕು ಎಂದು ತಿಳಿಸಿದರು. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಡೆಬಿಡದೆ ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿದ್ದಾರೆ ಎಂದರು.

ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಆರೋಗ್ಯ ಇನ್ನಷ್ಟು ಉತ್ತಮವಾಗಿರಲಿ. ಭಗವಂತನ ಅನುಗ್ರಹ ಅವರ ಮೇಲಿರುವುದರಿಂದ ಸುಖ-ಸಂತೋಷದಲ್ಲಿ ನೆಲೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಅವರಿದಮ ಇನ್ನಷ್ಟು ಹೆಚ್ಚಿನ ಸೇವೆ ದೊರಕುವಂತಾಗಲಿ ಎಂದರು.

ಚಿತ್ರದುರ್ಗದ ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ಮಾತನಾಡಿ, ೭೮ರ ವಯಸ್ಸಿನಲ್ಲಿಯೂ ಅವರ ವ್ಯಕ್ತಿತ್ವ ಕ್ರಿಯಾಶೀಲತೆ, ಮಾನಸಿಕ ಸದೃಢತೆ, ೨೮ರ ಯುವಕರದ್ದಾಗಿದೆ. ಅವರ ಜೀವನದ ಏರು-ಪೇರು ಏನೇ ಇರಲಿ, ಧರ್ಮ ಬಿಟ್ಟುಕೊಡಲಿಲ್ಲ. ರಾಜೀ ಮಾಡಿಕೊಂಡಿಲ್ಲ. ತಮ್ಮ ಸ್ಥಾನಮಾನ ಬಿಟ್ಟಿದ್ದಾರೆಯೇ ಹೊರತು, ತತ್ವವನ್ನು ಬಿಟ್ಟಿಲ್ಲ. ಸಮಾಜಕ್ಕೋಸ್ಕರ ಹೋರಾಡುತ್ತಿದ್ದಾರೆ. ರಾಜಕೀಯ ಅಸ್ತಿತ್ವ, ಧರ್ಮಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡವರು. ಅವರು ಶತಾಯುಷಿಗಳಾಗಿ ಬದುಕಿ-ಬಾಳಲಿ, ಇನ್ನೂ ಹೆಚ್ಚಿನ ದೇಶ ಸೇವೆ ಮಾಡಲಿ ಎಂದು ಹಾರೈಸಿದರು.

ಆದಿಚುಂಚನಗಿರಿ ಮಠದ ನಾದಮಯಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ನೂರಾರು ವರ್ಷ ಯಾತಕ್ಕಾಗಿ ಬದುಕಬೇಕು , ಹೇಗೆ ಬದುಕಬೇಕು ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಆತ್ಮಕ್ಕೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ಪರಾರ್ಥವಾಗಿ. ಸಕಲ ಜೀವಿಗಳಿಗಳು, ಜಾತಿ, ಮತ, ಪಂಥದ ನಿರ್ಬಂಧವಿಲ್ಲದೆ, ಸರ್ವರಿಗೂ ಆತ್ಮೀಯರಾಗಿ ಈಶ್ವರಪ್ಪನವರು ಬೆಳೆದಿದ್ದಾರೆ. ಎಲ್ಲಾ ಮಠ-ಮಂದಿರಗಳ ಕಲ್ಯಾಣ ಕಾರ್ಯಗಳಲ್ಲಿ ಅವರು ಕೈಜೋಡಿಸಿದ್ದಾರೆ. ಗೋ ಶಾಲೆಗಳ ಸಂಘ ಸ್ಥಾಪಿಸಿ ಜನಾನುರಾಗಿಯಾಗಿದ್ದಾರೆ ಎಂದರು.

ಈಶ್ವರಪ್ಪ ಅವರಸಾಧನೆ ಅವರಿಗೆ ಕೀರ್ತಿ, ಯಶಸ್ಸು ತಂದಿದೆ. ಗಳು, ಯತಿವರೇಣ್ಯರು, ಸಾವಿರಾರು ಸಂಖ್ಯೆ ಅದಕ್ಕಾಗಿಯೇ ಅವರನ್ನು ಹರಸಲು ಜಗದ್ಗರು ಯಲ್ಲಿ ಮಾತೆಯರು ಬಂದಿದ್ದಾರೆ. ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಬುಕ್ ವಿತರಣೆ, ಸಾಮೂ ಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ದ ಪಠಣ, ೫೦೦ಕ್ಕೂ ಹೆಚ್ಚು ಮಾತೆಯರಿಂದ ದೇಶಭಕ್ತಿ ಗೀತೆ ಗಾಯನ ಹಮ್ಮಿಕೊಂಡು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜೀವನವನ್ನೇ ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದಾರೆ : ನಾದಮಯಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ, ಶಿವಮೊಗ್ಗ.

Author