ಶಿವಮೊಗ್ಗ,ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಶಿವಮೊಗ್ಗದ ನೈಟ್ ಲ್ಯಾಂಡಿಂಗ್ ಸಮಸ್ಯೆ ಇದೆ. ಈ ಕುರಿತು ಅರಣ್ಯ ಪ್ರದೇಶಕ್ಕೆ ಬೇರೆ ಭೂಮಿ ನೀಡಿದ್ದೆವು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ನೈಟ್ ಲ್ಯಾಂಡಿಂಗ್ಗೆ ಬೇಕಾಗಿದ್ದು ಕೇವಲ 7 ಕೋಟಿ ರೂ. ಇದನ್ನು ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಸ್ಪೈಸ್ ಜೆಟ್ ಲ್ಯಾಂಡಿಂಗ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ಮೂರು ತಿಂಗಳು ತಮ್ಮ ಹಾರಾಟವನ್ನು ಸ್ಥಗಿತವಾಗಿದೆ ಎಂದರು.
ಸತತ 4,399 ದಿನ ಸಾರ್ಥಕ ಚುನಾಯಿತ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಪ್ರಪಂಚದ ನಾಯಕರಾಗಿದ್ದಾರೆ. ಇದರಿಂದ ಪ್ರಧಾನ ಮಂತ್ರಿಗಳಿಗೆ ಇನ್ನಷ್ಟು ಕಾಲ ಆಡಳಿತ ನಡೆಸಲಿ ಎಂದು ಹಾರೈಸಿ ಗಣಪತಿ ದೇವಾಲಯದಲ್ಲಿ ಪೂಜೆ ನಡೆಸಿದ್ದೇವೆ.
ದೇಶಕ್ಕೆ ಚೇತನ ನೀಡುವ ನಿಟ್ಟಿನಲ್ಲಿ ಆಡಳಿತ ನಡೆಸಲಿ, ಅವರು ದೇಶದ ಜೊತೆಗೆ ನಮ್ಮ ಮಲೆನಾಡನ್ನು ಸಹ ಅಭಿವೃದ್ದಿ ಮಾಡಿದ್ದಾರೆ. ಅವರು ಕಸನು 2047ಕ್ಕೆ ಭಾರತ ವಿಕಿಸತ ಭಾರತದ ಕನಸು ಕಂಡಿದ್ದಾರೆ. ಅದು ಈಡೇರಲಿ. ಅವರಿಗೆ ಹೆಚ್ಚು ಆರೋಗ್ಯ ನೀಡಲಿ ಎಂದು ಹಾರೈಸಿದ್ದೇವೆ ಎಂದು ಸಂಸದರು ಶುಭ ಹಾರೈಸಿದರು.ಈ ವೇಳೆ ಬಿಜೆಪಿಯ ಮುಖಂಡರು ಹಾಜರಿದ್ದರು.


