ಭದ್ರಾವತಿ | ಕುಡಿಯಲು ಕಲುಷಿತ ನೀರು ಸರಬರಾಜು ; ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ

ಶಿವಮೊಗ್ಗ

ಶಿವಮೊಗ್ಗ,ಭದ್ರಾವತಿ ತಾಲೂಕಿನ ವಾರ್ಡ್ ನಂಬರ್ 1ರ ಶಿವರಾಮನಗರದಲ್ಲಿ ಕುಡಿಯಲು ಬಳಸಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿದ್ದೂ, ಈ ಸಂಬಂಧ ಸ್ಥಳೀಯರು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿ ನೀರಿನ ಪೈಪ್ ಗೆ ಫಿಲ್ಟರ್ ಅಳವಡಿಸಿ ಸಮಸ್ಯೆ ಬಗೆಹರಿಸಿಕೊಡಬೇಕಾಗಿ ವಿನಂತಿಸಿದ್ದಾರೆ.

ಆದರೂ ಸಹ ಇದೆ ರೀತಿಯ ನೀರು ನಲ್ಲಿಯಲ್ಲಿ ಬರುತ್ತಿರುವ ಕಾರಣ ನಿವಾಸಿಗಳು ಬೇಸತ್ತು ನಮ್ಮ ಇ-ಕನ್ನಡ ಮಾಧ್ಯಮಕ್ಕೆ ಮಾಹಿತಿ ತಿಳಿಸಿದ್ದು, ಕುಡಿಯಲು ಯೋಗ್ಯ ನೀರು ಸರಬರಾಜು ಆಗುವಂತೆ ಮಾಧ್ಯಮ ಮುಖೇಣ ಅಗ್ರಹಿಸಿದ್ದಾರೆ.

ಇನ್ನು ಘಟನೆ ಸಂಬಂಧ ಭದ್ರಾವತಿ ನಗರಸಭೆ ಆಯುಕ್ತರಾದ ಹೇಮಂತ್ ಅವರು ನಮ್ಮ ಮಾಧ್ಯಮ ಮುಖೇಣ ಮಾಹಿತಿ ತಿಳಿಸಿದ್ದು ಏನಂದರೆ ಹೈ-ವೇ ರಸ್ತೆ ಕಾಮಗಾರಿ ಆಗುತ್ತಿರುವ ಕಾರಣ ಆಗಾಗ ಈ ಸಮಸ್ಯೆ ಆಗುತ್ತಿದೆ ಹಾಗಾಗಿ ನಮ್ಮ ಗಮನಕ್ಕೆ ಮಾಹಿತಿ ಬರುತ್ತಿದ್ದಂತೆ ಸರಿಪಡಿಸಿಕೊಡುತ್ತಿದ್ದೇವೆ ಹಾಗೂ ಇಂದು ಸಂಜೆಯೊಳಗೆ ಕುಡಿಯುವ ನೀರಿನಲ್ಲಿ ಮಣ್ಣು ತುಂಬಿ ಬಂದಿದೆ ಹಾಗಾಗಿ ಸರಿಪಡಿಸಿಕೊಡುತ್ತೇವೆ ಎಂದರು.

ಒಟ್ಟಾರೆಯಾಗಿ ಹೈ-ವೇ ರಸ್ತೆಯ ಕಾಮಗಾರಿ ಮುಗಿಯೋವರೆಗೂ ಜನಸಾಮಾನ್ಯರಿಗೆ, ಸ್ಥಳೀಯರಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವಂತೆ ಆಗಿದೆ.

ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಈ ರೀತಿ ಕಲುಷಿತ ಬಂದಲ್ಲಿ ಅದನ್ನೇ ಸೇವಿಸಿದ್ದಲ್ಲಿ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮುಖೇಣ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಗಳಿವೆ.

ನಾಗರೀಕರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಇನ್ನಾದರೂ ರಸ್ತೆ ಕಾಮಗಾರಿ ಬೇಗ ಬೇಗ ಮುಗಿಸಿ ಇಲ್ಲಿಯ ನಿವಾಸಿಗಳಿಗೆ ನೆಮ್ಮದಿ ಆಗುವಂತೆ ಆಗತ್ತಾ ಅಥವಾ ಇನ್ನೆಷ್ಟು ದಿನ ಜನಸಾಮಾನ್ಯರು ಒದ್ದಾಡಬೇಕಿದಿಯೋ ಕಾಲವೇ ಉತ್ತರಿಸಬೇಕಿದೆ.

ಹಾಗೂ ಭದ್ರಾವತಿ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಸಹ ಕುಡಿಯುವ ನೀರಿನ ಬಗ್ಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ.

Author