ಶಿವಮೊಗ್ಗ | ಅನೈತಿಕ ಅಡ್ಡೆಯಾದ ಸ್ಪಾಗಳು : ಓರ್ವನ ಬಂಧನ, ಮತ್ತಿಬ್ಬರು ಬಂಧನದಿಂದ ಪಾರಾದರೆ?

ಶಿವಮೊಗ್ಗ

ಶಿವಮೊಗ್ಗ, ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾನಗರದಲ್ಲಿರುವ ಎವರ್‌ಗ್ರೀನ್ ಯುನಿಸೆಕ್ಸ್ ಪಾರ್ಲರ್ ಆ್ಯಂಡ್ ಸಲೂನ್ ಮೇಲೆ ಪೊಲೀಸರು ದಾಳಿ ನಡೆಸಿ, ಅಲ್ಲಿ ನಡೆಯುತ್ತಿದ್ದ ಆರೋಪಿತ ಅನೈತಿಕ ಚಟುವಟಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂರು ಮಂದಿ ಸಂತ್ರಸ್ತೆಯರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.

ಎಸ್ಪಿ ನಿಖಿಲ್ ಅವರ ಖಡಕ್ ಸೂಚನೆ ಮೇರೆಗೆ ಕೋಟೆ ಪಿಐ ಹರೀಶ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಸಲೂನ್‌ನ ಮಾಲೀಕ ಆನಂದ್ ಕುಮಾರ್ ಅವರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಮುಂದುವರೆದು ತಿಳಿಸುವುದಾದರೆ ಈ ಪ್ರಕರಣ ಸಂಬಂಧ ಆನಂದ್ ಕುಮಾರ್ ರೊಂದಿಗೆ ಮಿಂಚು ಅಲಿಯಾಸ್ ವಿಜಯಲಕ್ಷ್ಮಿ ಇಬ್ಬರು ಸೇರಿ Partnership ನಲ್ಲಿ Evergreen Spa ನಡೆಸುತ್ತಿದ್ದರು ಎಂಬುದು ಮಾಹಿತಿ.

ಈ ಹಿಂದೆ ಕೂಡ ಓರ್ವ ಸಂತ್ರಸ್ತ ಹೆಣ್ಣುಮಗಳು ಮಾನ್ಯ ಎಸ್ಪಿ ಕಚೇರಿಗೆ ಬಂದು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನ್ಯಾಯ ಒದಗಿಸಿ ಎಂದು ದೂರು ನೀಡಿದ್ದರು. ಆ ದೂರಿನಲ್ಲಿ ಸಹ ಈ ವಿಜಯಲಕ್ಷ್ಮಿ ಹೆಸರು ಉಲ್ಲೇಖಿಸಿದ್ದರು. ಅಲ್ಲದೆ ಬಡ ಹಾಗೂ ವಿದ್ಯಾರ್ಥಿ ಹೆಣ್ಣುಮಕ್ಕಳನ್ನು ಈ ಜಾಲಕ್ಕೆ ಬಳಸುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದರು.ಆದರೆ ಅಂದು ಸಹ ಈ ವಿಜಯಲಕ್ಷ್ಮಿ ಬಚಾವ್ ಆಗಿದ್ದರು.

ಈಗ ಪ್ರಸ್ತುತ ಇಂದು ನಡೆದ ಕಾರ್ಯಾಚರಣೆಯಲ್ಲಿ ಸಹ ವಿಜಯಲಕ್ಷ್ಮಿ ಬಂಧನ ಯಾಕೆ ಆಗಿಲ್ಲ? ಎಂಬುದು ನಾಗರಿಕರ ಮಾತಾಡಿ ಕೊಳ್ಳುತ್ತಿದ್ದಾರೆ..!

ಇನ್ನು ಈ ವಿಜಯಲಕ್ಷ್ಮಿ ಮತ್ತು ಬಂಧಿತ ಆರೋಪಿ ನಂದಕುಮಾರ ಇಬ್ಬರು ಭದ್ರಾವತಿಯವರು. ಉಜ್ಜನಿ ಪುರದಲ್ಲಿ ನಂದು ಕುಮಾರ ವೈಶ್ಯವಾಟಿಕೆಗೆ ಬಳಸುವ ಹಲವು ಹುಡುಗಿಯರನ್ನು ಮನೆಮಾಡಿ ಇಟ್ಟಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ.

ಇನ್ನು ಆನಂದ್ ಕುಮಾರಣ್ಣ ಪಾರ್ಟ್ನರ್ ವಿಜಯಲಕ್ಷ್ಮಿ, ಶಿವಮೊಗ್ಗದಲ್ಲಿಯೇ ಸತೀಶ್ ಗೌಡ ಎಂಬಾತನೊಂದಿಗೆ ಸೇರಿಕೊಂಡು White Moon Spa ಎಂಬ ಹೆಸರಿನ Spa ನಡೆಸುತ್ತಿದ್ದು ಇಲ್ಲಿಯೂ ಕೂಡ ಯುವತಿಯರನ್ನು ಕರಾಳ ಕೂಪಕ್ಕೆ ತಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

ಇನ್ನು ಈ ಭದ್ರಾವತಿ ನಂದಿ ಕುಮಾರ್ ಅವರ ಇತಿಹಾಸ ಹೇಳುವುದು ಆಗಲ್ಲ ಬಿಡಿ.

ಇಷ್ಟೆಲ್ಲಾ ಅವ್ಯಾಹತವಾಗಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಸಹ ಯಾಕೆ ಇಲ್ಲಿವರೆಗೆ ಇವರಿಬ್ಬರ ಬಂಧನವಾಗಿಲ್ಲ ಎಂಬುದು ಈಗ ಪ್ರಸ್ತುತ ನಗರದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಹಾಗೂ ಬಡ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣರಾದವರಿಗೆ ಶಿಕ್ಷೆ ಆಗಲಿದೆಯೇ? ಎಸ್ ಪಿ ನಿಖಿಲ್ ಅವರ ಖಡಕ್ ಸೂಚನೆ ಮೇಲೆ ಕೆಲಕಾಲ ಬಂದಾಗಿದ್ದ ಅನೈತಿಕ ಅಡ್ಡೆಗಳು ಮತ್ತೆ ಬಾಲ ಬಿಚ್ಚಿರುವುದನ್ನು ಕಂಡು ಶಿವಮೊಗ್ಗ ನಾಗರಿಕರು ಆಕ್ರೋಶ ಹೊರ ಹಾಕುವಂತಾಗಿದೆ..!

Author