ಶಿವಮೊಗ್ಗ | ಕಾಲೇಜಿಗೆ ತೆರಳಿದ್ದ 16 ವರ್ಷದ ಬಾಲಕ ಕಾಣೆಯಾಗಿದ್ದಾನೆ..!

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರುಡಿಕೆ ಭೀಮನಕೋಣೆ ಗ್ರಾಮದ ನಾಗೇಂದ್ರ ಎಂಬುವವರ ಮಗ ನಿರಂಜನ 16 ವರ್ಷ, ಈತನು ಜು.12 ರಂದು ಮನೆಯಿಂದ ಕಾಲೇಜಿಗೆ ಹೋದವನು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಕಾಣೆಯಾದ ನಿರಂಜನ 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಲಗಾಲಿನ ಮಣಿಕಟ್ಟಿನಲ್ಲಿ ಗಾಯದ ಗುರುತಿದೆ. ಮನೆಯಿಂದ ಹೋಗುವಾಗ ನೀಲಿ ಬಿಳಿ ಬಣ್ಣದ ಟೀಶರ್ಟ್ ಕಪ್ಪು ಪ್ಯಾಂಟ್ ಧರಿಸಿದ್ದು, ಸ್ಕೂಲ್ ಬ್ಯಾಗ್ ಇರುತ್ತದೆ.

ಈ ಬಾಲಕನ ಬಗ್ಗೆ ಸುಳಿವು ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ 9480803361/, ಸಾಗರ ಉಪ ವಿಭಾಗ ಎಸ್‌ಐ -9480803322, ಶಿವಮೊಗ್ಗ ಎಸ್.ಪಿ ಕಚೇರಿ 08182-261400 / 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Author