ಶಿವಮೊಗ್ಗ | ಪಿಎಸ್ಐ ನಾರಾಯಣ ಮಧುಗಿರಿ ತಂಡದಿಂದ ಭರ್ಜರಿ ಕಾರ್ಯಾಚರಣೆ ನಕಲಿ ಬಂಗಾರ ಅಡವಿಟ್ಟವರು ಅರೆಸ್ಟ್

ಕ್ರೈಂ

ಶಿವಮೊಗ್ಗ,ದಿನಾಂಕ 03/07/2026 ರಂದು ಸಂಜೆ 07.30 ಗಂಟೆಗೆ ಪಿರ್ಯಾದಿ ದಾರವತೋ ಕ್ರಾಂತಿಕುಮಾರ್ ಶಾಖಾ ವ್ಯವಸ್ಥಾಪಕರು, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾವರ್ ಲೇನ್ ಶಾಖೆ, ಶಿವಮೊಗ್ಗ ರವರು ಆರೋಪಿತರು ಬಂಗಾರ ಲೇಪಿತ ನಕಲಿ ಬಂಗಾರಗಳನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದಿರುವ ಬಗ್ಗೆ ದೂರು ನೀಡಿದ ಮೇರೆಗೆ ದೊಡ್ಡಪೇಟೆ ಠಾಣಾ ಗುನ್ನೆ ನಂ. 239/2026 ಕಲಂ: 61(1), 318(4) ಸಹಿತ 3(5) ಬಿಎನ್ಎಸ್ 2023 ರೀತ್ಯಾ ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ ,

ಎ1 ಆರೋಪಿ ಲೋಕೇಶ ಬಿನ್ ಜಯಚಂದ್ರ 39 ವರ್ಷ ವಾಸ ಬಿಳ್ಮನೆ ಅರೆಕಲ್ಲು ಗ್ರಾಮ ಮೇಗರವಳ್ಳಿ ತಿರ್ಥಹಳ್ಳಿ ತಾ; ದಸ್ತಗಿರಿ ಮಾಡಿ ಆತನ ಸ್ವ ಇಚ್ಛಾ ಹೇಳಿಕೆ ಮೇರೆಗೆ ಆರೋಪಿತನು

ಈ ಕೆಳಕಂಡ ವಿವಿಧ ಬ್ಯಾಂಕುಗಳಲ್ಲಿ ಮತ್ತು ಜ್ಯೂವೆಲರಿ ಶಾಪ್ ನಲ್ಲಿ ಬಂಗಾರ ಲೇಪಿತ ನಕಲಿ ಆಭರಣಗಳನ್ನು ಇಟ್ಟು ಗೋಲ್ಡ್ ಲೋನ್ ಪಡೆದಿರುತ್ತಾನೆ.

ವಿವರ ಕೆಳಕಂಡಂತಿರುತ್ತದೆ :

ಪಂಜಾಬ್ ನ್ಯಾಶನಲ್ ಬ್ಯಾಂಕ್ ಸವಾರ್ ಲೈನ್ ರಸ್ತೆ ಶಿವಮೊಗ್ಗ ದಲ್ಲಿ 163.300 ಗ್ರಾಂ ಅಡ ಇಟ್ಟು 7,62,557/- ರೂ ಸಾಲ ವರ್ತಕರ ಸೌಹಾರ್ಧ ಸಂಘ ನಿಯಮಿತ ತೀರ್ಥಹಳ್ಳಿ ದಲ್ಲಿ 75.844 ಗ್ರಾಂ ಅಡ ಇಟ್ಟು 9,33,000/- ರೂ ಸಾಲಪಡೆದಿರುತ್ತಾನೆ.

ಸಿರಿ ಸೌಹಾರ್ಧ ಕ್ರೆಡಿಟ್ ಆಪರೇಟಿವ್ ಸಂಘ, ಆಲ್ಕೋಳ ಶಿವಮೊಗ್ಗ ದಲ್ಲಿ 75.01 ಗ್ರಾಂ ಅಡ ಇಟ್ಟು 7,43,000/- ರೂ ಸಾಲಡಿ.ಸಿ.ಸಿ ಬ್ಯಾಂಕ್ ಗೋಪಾಳ ಶಿವಮೊಗ್ಗ ದಲ್ಲಿ 48.28 ಗ್ರಾಂ ಅಡ ಇಟ್ಟು 1,79,000/- ರೂ ಸಾಲಪಡೆದಿರುತ್ತಾನೆ.

ಇಂಡಿಯನ್ ಓವರ್ಸಿಸ್ ಬ್ಯಾಂಕ್ ಸವಾರ್ ಲೈನ್ ರಸ್ತೆ ಶಿವಮೊಗ್ಗ ದಲ್ಲಿ 26.490 ಗ್ರಾಂ ಅಡ ಇಟ್ಟು 1,10,000/- ರೂ ಸಾಲಗುಲಾಬಿ ಜ್ಯೂವೆಲರಿ ವರ್ಕ್ಸ ನೇತಾಜಿ ಸರ್ಕಲ್ ಶಿವಮೊಗ್ಗ ದಲ್ಲಿ 30.90 ಗ್ರಾಂ ಅಡ ಇಟ್ಟು 1,90,000/- ರೂ ಸಾಲಪಡೆದಿರುತ್ತಾನೆ.

ಒಟ್ಟು 419.824 ಗ್ರಾಂ ಅಡ ಇಟ್ಟು 28,87,237/- ರೂ ಸಾಲ ಪಡೆದಿರುತ್ತಾನೆ.

ಆರೋಪಿಗಳ ವಿವರ:

ಲೋಕೇಶ ಬಿ.ಜೆ ತಂದೆ ಜಯಚಂದ್ರ, 39 ವರ್ಷ, ವಾಸ: ಬಿಳ್ಮನೆ ಅರೆಕಲ್ಲು ಗ್ರಾಮ, ತೀರ್ಥಹಳ್ಳಿ ತಾಲ್ಲೂಕು,

ಶ್ರೀಮತಿ ಸುಧಾ ಹೆಚ್ ಕೋಂ ಪ್ರತಾಪ ನಾಯಕ್ ಮಲವಗೊಪ್ಪ ಶಿವಮೊಗ್ಗ.

ಎಸ್.ವೈ ರವಿಶಂಕರ್ ಬಿನ್ ಯಲ್ಲಪ್ಪ ಗೋಲ್ಡ್ ಅಪ್ರೈಸರ್ ಪಂಜಾಬ್ ನ್ಯಾಶನಲ್ ಬ್ಯಾಂಕ್ ಶಿವಮೊಗ್ಗ

ರಾಹುಲ್ ಬಿನ್ ಬಾಸ್ಕರ್, 26 ವರ್ಷ, ಬಗ್ಗೋಡಿಗೆ ಗ್ರಾಮ, ಶಿರೂರು ಪೊಸ್ಟ್, ತೀರ್ಥಹಳ್ಳಿ ತಾಲ್ಲೂಕು.

ಶರತ್ ಬಿನ್ ನಾಗರಾಜ್ ವೈಟ್ ಗೋಲ್ಡ್ & ಬ್ರೈಟ್ ಗೋಲ್ಡ್ ಬಿವರ್ಸ್ ನಲ್ಲಿ ಮ್ಯಾನೇಜರ್ ಕೆಲಸ, ವಾಸ ಮೃಗವಧೆ, ತೀರ್ಥಹಳ್ಳಿ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ •

1ನೇ ಆರೋಪಿಯು ಗಿರವಿ ಇಟ್ಟಿದ್ದ 419.824 ಗ್ರಾಂ ನಕಲಿ ಬಂಗಾರ, ಒಟ್ಟು 28,87,237/-ರೂ. ಬೆಲೆಯ ಆಭರಣಗಳನ್ನು

ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಆರೋಪಿ ಸಂಖ್ಯೆ 2, 4 ಮತ್ತು 5 ರವರು ಇದೇ ರೀತಿ ನಕಲಿ ಬಂಗಾರವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಗಿರವಿ ಇಟ್ಟು ಸಾಲ ಪಡೆದಿರುವ ಶಂಕೆ ಇದ್ದು, ಅವರುಗಳನ್ನು ದಸ್ತಗಿರಿ ಮಾಡಿ ಅಡವಿಟ್ಟಿರುವ ಆಭರಣಗಳನ್ನು ವಶಪಡಿಸಿಕೊಳ್ಳಲು ಬಾಕಿ ಇರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸತ್ಯನಾರಾಯಣ ಪಿಐ, ಪಿಎಸ್ಐ ನಾರಾಯಣ ಮಧುಗಿರಿ, ಸಿಬ್ಬಂದಿಯವರಾದ ಚೂಡಾಮಣಿ ಎಎಸ್ಐ, ಪುನೀತ್ , ಸಂದೀಪ್, ಗುರುನಾಯ್ಕ, ರಾಜೇಶ್ ಗೌಡ ಪಾಟೀಲ್, ಪುಟ್ಟಮ್ಮ ಎನ್.ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ.

Author