ಶಿವಮೊಗ್ಗ | ದೇಶದಲ್ಲೆಡೆ ಎಸ್‌ಐಆರ್ ಜಾಗೃತಿ ಮೂಡಿಸಲು ಕಾರ್ಯಾಗಾರ : ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ

ರಾಜಕೀಯ

ಶಿವಮೊಗ್ಗ,ಎಸ್.ಐ.ಆರ್. ದೇಶದಲ್ಲಿ ಬಂದ ಮೇಲೆ ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಬಿಡುಗಡೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಇದನ್ನು ಕಾಂಗ್ರೆಸ್ ವರಿಷ್ಟರು ಗಂಭೀರವಾಗಿ ಪರಿಗಣಿಸಿದ್ದು, ದೇಶದಲ್ಲೆಡೆ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಎಂಎಲ್ಸಿ ಮಂಜುನಾಥ್ ಭಂಡಾರಿ ಹೇಳದಿರು.

ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಎ.ಐ.ಸಿ.ಸಿ. ಕಾರ್ಯದರ್ಶಿಗಳಾದ ರಣಜಿತ್ ಸಿಂಗ್ ಸುರ್ಜೆವಾಲ ಮತ್ತು ವೇಣುಗೋಪಾಲ್ ಈಗಾಗಲೇ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಯಾರಿಗೆ ಪಕ್ಷದ ಸಂಘಟನೆಯ ಬಗ್ಗೆ ಆಸಕ್ತಿ ಇದೆಯೋ ನಿಜವಾದ ಪ್ರೀತಿ ಇದೆಯೋ ಅವರು ಈ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲ್ಲಿ ಕೊಟ್ಟ ಸಲಹೆ ಸೂಚನೆಗಳನ್ನು ತಮ್ಮ ಬೂತ್ ಮಟ್ಟದಲ್ಲಿ ಮತದಾರರ ಗಮನಕ್ಕೆ ತರಬೇಕು. ಒಂದೇ ಒಂದು ಮತ ವಂಚನೆಯಾಗಬಾರದು. ಮತದಾರರ ಪಟ್ಟಿಯ ಪರಿಶೀಲನ ಕೈಬಿಟ್ಟ ಹೆಸರುಗಳು, ಮರು ಸೇರ್ಪಡೆ ಎಲ್ಲದರ ಬಗ್ಗೆ ಜಾಗೃತಿ ಮೂಡಿಸಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸ ಅಧ್ಯಕ್ಷರಾದ ಹಲಿಪ್ರಸಾದ್ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಎಲ್ಲರೂ ಅದರ ಪಾಲನೆ ಮಾಡಬೇಕು ಎಂದರು.

ಮಾಜಿ ಸಚಿವ ಮಧುಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ ಮುಖಂಡರು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಈ ಎಸ್‌ಐಆರ್‌ನಿಂದ ಬಿಜೆಪಿಗೆ ಹಲವು ರಾಜ್ಯಗಳಲ್ಲಿ ಲಾಭವಾಗಿದೆ. ಬರೀ ಕಾಂಗ್ರೆಸ್ ಮತಗಳು ಮಾತ್ರ ಡಿಲಿಟ್ ಆಗಿವೆ. ಆದ್ದರಿಂದ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.ವಿಶೇಷ ತರಬೇತುದಾರರಾದ ಡಾ.ಹೆಚ್.ವಿ. ವಾಸು ಮಾತನಾಡಿ, 18ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಸತ್ತವರ ಹೆಸರನ್ನು ಪಟ್ಟಿಯಿಂದ ತೆಗೆಯಬೇಕು. ಬೇರೆ ದೇಶದ ನಾಗರಿಕರನ್ನು ಪಟ್ಟಿಯಿಂದ ಹೊರಗಿಡಬೇಕು. ಈ ಕೆಲಸಕ್ಕೆ ಕಾಂಗ್ರೆಸ್‌ನವರ ವಿರೋಧವಿಲ್ಲ. ಹೀಗಿದ್ದ ಮೇಲೆ ಎಫ್‌ಐಆರ್‌ಗೆ ಯಾಕೆ ಕಾಂಗ್ರೆಸ್ ವಿರೋಧಿಸುತ್ತದೆ ಎಂಬುದು ಬಿಜೆಪಿಯವರ ಪ್ರಶ್ನೆಯಾಗಿದೆ?

ಆದರೆ ಎಸ್‌ಐಆರ್ ಎನ್ನುವುದು ಮತದಾರರ ಪಟ್ಟಿ ಪರಿಷ್ಕರಣೆ ಮಾತ್ರವಲ್ಲ. ಇದು ಇಡೀ ಮತದಾರರ ಪಟ್ಟಿಯ ನವೀಕರಣ. ಹೊಸಪಟ್ಟಿಯ ರಚನೆಯಾಗಿದೆ. ಇದು ಈವರೆಗೆ ದೇಶದಲ್ಲಿ ನಡೆದಿಲ್ಲ. ಇದೇ ಮೊದಲ ಬಾರಿ ಇಂತಹ ಪುನರ್ನವೀಕರಣ ನಡೆಯುತ್ತಿದೆ ಎಂದರು.

Author