ಶಿವಮೊಗ್ಗ | ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಎಂಬ ತಪ್ಪು ಕಲ್ಪನೆ ಬಿತ್ತಿ ಮಸೂದೆಗೆ ವಿರೋಧ : ಸಂಸದ ಬಿ. ವೈ. ಆರ್ ಆರೋಪ

ಶಿವಮೊಗ್ಗ

ಶಿವಮೊಗ್ಗ, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ತಪ್ಪು ಕಲ್ಪನೆ ಬಿತ್ತುವ ಮೂಲಕ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸುಳ್ಳು ಹೇಳುವ ಮೂಲಕ ಅದನ್ನು ತಡೆಯುವ ಯತ್ನ ಮಾಡಿದವೆಂದು ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರಸ್ತುತ ಕ್ಷೇತ್ರಗಳ ಸಂಖ್ಯೆಯನ್ನು ಶೇ.50 ರಷ್ಟು ಹೆಚ್ಚಿಸುವ ಭರವಸೆ ನೀಡಿದ್ದರೂ, ಸಾಮಾಜಿಕ ನ್ಯಾಯದ ಈ ಮಸೂದೆಯನ್ನು ಕಾಂಗ್ರೆಸ್ ದುರುದ್ದೇಶದಿಂದ ವಿರೋಧಿಸಿದೆ.

ಮಸೂದೆ ಬಿದ್ದಾಗ ಕಾಂಗ್ರೆಸ್ ನಾಯಕರು ವಿಜಯೋತ್ಸವ ಆಚರಿಸಿದ್ದು ಮಹಿಳೆಯರಿಗೆ ಮಾಡಿದ ದೊಡ್ಡ ಅವಮಾನ. ಯುಪಿಐ, ಜನ ಧನ್, ಮತ್ತು ಜಿಎಸ್ಟಿ ಅಂತಹ ಪ್ರತಿಯೊಂದು ಜನಪರ ಯೋಜನೆಗಳನ್ನು ವಿರೋಧಿಸುವುದೇ ಕಾಂಗ್ರೆಸ್‌ನ ಕೆಲಸವಾಗಿದೆ ಎಂದು ಟೀಕಿಸಿದರು.

ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ಅನ್ನು ದೇಶದ ಪಾಲಿನ ಕರಾಳ ದಿನ ಎಂದ ಬಿವೈ ರಾಘವೇಂದ್ರ ಅವರು, ಕಾಂಗ್ರೆಸ್‌ನ ಈ ವಿರೋಧದ ವಿರುದ್ಧ ಪ್ರತಿ ಮನೆಮನೆಗೂ ಜಾಗೃತಿ ತಲುಪಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌ಗೆ ಛೀಮಾರಿ ಹಾಕುವ ಅಭಿಯಾನ ನಡೆಸಲಾಗುವುದು. ಪ್ರಧಾನಿ ಮೋದಿಯವರು ಮಹಿಳಾ ಸಬಲೀಕರಣದ ವಿಷಯದಲ್ಲಿ ಎಂದೂ ಹಿಂದೇಟು ಹಾಕುವುದಿಲ್ಲ, ಈ ಪ್ರಯತ್ನ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Author