ತೀರ್ಥಹಳ್ಳಿ | ಕುಡಿಯುವ ನೀರಿನ ಬಾವಿಗೆ ವಿಷ ; ದೂರು ದಾಖಲು

ಶಿವಮೊಗ್ಗ

ತೀರ್ಥಹಳ್ಳಿ,ದ್ವೇಷದ ಕಾರಣಕ್ಕಾಗಿ ಕುಡಿಯುವ ನೀರಿನ ಬಾವಿಗೆ ವಿಷ ಹಾಕಿದ ಘಟನೆಯೊಂದು ತಾಲೂಕಿನಲ್ಲಿ ವರದಿಯಾಗಿದೆ. ತಾಲೂಕಿನ ಕುಪ್ಪಳ್ಳಿ ಸಮೀಪದ ಗಿಣಿಯ ಗ್ರಾಮದ ನಿವಾಸಿಯಾದ ರಾಘವೇಂದ್ರ ಎನ್ನುವವರ ಜಮೀನಿನಲ್ಲಿರುವ ಬಾವಿಗೆ ವಿಷ ಹಾಕಿದ್ದಾರೆ ಎನ್ನಲಾಗಿದೆ.

ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮತ್ತು ಕೆಲವರ ನಡುವೆ ವಿವಾದವಿರುವ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಈ ಹಿಂದೆ ಕೂಡ ರಾಘವೇಂದ್ರ ಅವರ ಮನೆಗೆ ಬೆಂಕಿ ಹಚ್ಚಿದ್ದು, ಈ ಬಗ್ಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಂತಹದ್ದೇ ಅಮಾನವೀಯ ಘಟನೆ ನಡೆದಿದೆ.

ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಅವರು ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ, ಬಾವಿಯ ಸಮೀಪ ಹೋದಾಗ ನೀರಿನಲ್ಲಿ ವಿಷದ ವಾಸನೆ ಬರುತ್ತಿರುವುದು ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Author