ಶಿರಸಿ | ವೈದ್ಯರ ಹತ್ಯೆ ಪ್ರಕರಣ ; ತೀರ್ಥಹಳ್ಳಿಯ ವ್ಯಕ್ತಿ ಬಂಧನ

ಡಿಎಸ್ಪಿ ಗೀತಾ ಪಾಟೀಲ ಹಾಗೂ ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪಿಎಸ್‌ಐ ಬಸವರಾಜ ಕನಶೆಟ್ಟಿ ಮತ್ತು ತಂಡವು ಕಾರ್ಯಾಚರಣೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ನೆರವಿನೊಂದಿಗೆ ಕೇವಲ 6 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಚಿನ್ನಾಭರಣವನ್ನು ವಶಕ್ಕೆ ಪಡೆದ ತಂಡದ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ. ಬಂಧಿತನನ್ನು ಕೋಟ್‌ರ್ಗೆ ಹಾಜರುಪಡಿಸಿ ಜೈಲಿಗೆ ಕಳಿಸಲಾಗಿದೆ.

Continue Reading

ಶಿವಮೊಗ್ಗ | ಕುಂಟುನೆಪ ಹೇಳುವುದನ್ನು ಬಿಟ್ಟು ಕೂಡಲೇ ಕಾಮಗಾರಿಗಳನ್ನು ಚುರುಕುಗೊಳಿಸಿ : ಶಾಸಕ ಚನ್ನಬಸಪ್ಪ ಎಚ್ಚರಿಕೆ..!

ಸಭೆಯಲ್ಲಿ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಯೋಜನೆಯ ಗುತ್ತಿಗೆದಾರರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಶಿಕಾರಿಗೆ ಬಳಸುತ್ತಿದ್ದ 45 ನಾಡ ಬಾಂಬ್ ವಶಕ್ಕೆ ; ಓರ್ವ ಸೆರೆ, ಇಬ್ಬರು ಪರಾರಿ

ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಭಾಸ್ಕರ್ ಹಾಗೂ ನಾಗರಾಜ್ ಪರಾರಿಯಾಗಿದ್ದು, ಡಾಕಪ್ಪನನ್ನು ಬಂಧಿಸಲಾಗಿದೆ. ಈ ವೇಳೆ 45 ನಾಡ ಬಾಂಬ್​​​ಗಳ ಜೊತೆಗೆ ಒಂದು ಬೈಕ್​​ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಾಕಪ್ಪನನ್ನು ಹೊಸನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಾದ ಭಾಸ್ಕರ್ ಹಾಗೂ ನಾಗರಾಜ್ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಬೆಳ್ಳೆನವರ್, ಭರತ್ ಕುಮಾರ್, ಗಸ್ತು ಅರಣ್ಯ ಪಾಲಕ ಮಂಜುನಾಥ […]

Continue Reading

ಶಿವಮೊಗ್ಗ | ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಎಂಬ ತಪ್ಪು ಕಲ್ಪನೆ ಬಿತ್ತಿ ಮಸೂದೆಗೆ ವಿರೋಧ : ಸಂಸದ ಬಿ. ವೈ. ಆರ್ ಆರೋಪ

ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ಅನ್ನು ದೇಶದ ಪಾಲಿನ ಕರಾಳ ದಿನ ಎಂದ ಬಿವೈ ರಾಘವೇಂದ್ರ ಅವರು, ಕಾಂಗ್ರೆಸ್‌ನ ಈ ವಿರೋಧದ ವಿರುದ್ಧ ಪ್ರತಿ ಮನೆಮನೆಗೂ ಜಾಗೃತಿ ತಲುಪಿಸಲಾಗುವುದು ಎಂದರು. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಕಾಂಗ್ರೆಸ್‌ಗೆ ಛೀಮಾರಿ ಹಾಕುವ ಅಭಿಯಾನ ನಡೆಸಲಾಗುವುದು. ಪ್ರಧಾನಿ ಮೋದಿಯವರು ಮಹಿಳಾ ಸಬಲೀಕರಣದ ವಿಷಯದಲ್ಲಿ ಎಂದೂ ಹಿಂದೇಟು ಹಾಕುವುದಿಲ್ಲ, ಈ ಪ್ರಯತ್ನ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Continue Reading

ಶಿವಮೊಗ್ಗ | ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ ನಿರಾಶ್ರಿತರ ಕೇಂದ್ರದಲ್ಲಿ ಸಾಂತ್ವನ ಹಾಗೂ ಮನೋರಂಜನಾ ಕಾರ್ಯಕ್ರಮ

ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರು ಗಾಯನ ಮಾಡುವ ಮೂಲಕ ನಿರಾಶ್ರಿತರಿಗೆ ಮನೋರಂಜನೆ ನೀಡಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಗೌರವಧ್ಯಕ್ಷರು ಭದ್ರಾವತಿ ವಾಸುದೇವನ್, ಉಪಾಧ್ಯಕ್ಷರು ಶಿವಾನಂದ,ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್,ಖಜಾಂಚಿ ಪ್ರಕಾಶ ಎ,ಸಂಘಟನಾ ಕಾರ್ಯದರ್ಶಿ ಕನಕರಾಜು, ಸಹ ಕಾರ್ಯದರ್ಶಿ ಕುಮಾರ್, ಸುಬ್ರಮಣ್ಯ,ನಿರ್ದೇಶಕರುಗಳಾದ ತಂಗಪ್ಪನ್,ಅನಿಲ್, ಮುರುಳಿಧರನ್,ಕೆ. ರಾಘವೇಂದ್ರ ಪರಿಸರ ರಮೇಶ್ ಸೇರಿದಂತೆ ಎಲ್ಲಾ ಸದಸ್ಯರ ಸಹಕಾರ ಪ್ರಮುಖವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Continue Reading

ಶಿವಮೊಗ್ಗ | ಬಸವ ಜಯಂತಿ ಅಂಗವಾಗಿ ಬಸವ ಕೇಂದ್ರದಲ್ಲಿ ರಕ್ತದಾನ ಶಿಬಿರ : ಶ್ರೀಗಳಿಂದ ರಕ್ತದಾನಕ್ಕೆ ಚಾಲನೆ

ಇದೇ ಸಂದರ್ಭದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಲಿಂಗಾಯಿತ ಸೇವಾ ಸಂಘದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್. ಬಳ್ಳಕೆರೆ ಸಂತೋಷ್. ಎಸ್ ಪಿ ದಿನೇಶ್. ಎಚ್ ಸಿ ಯೋಗೇಶ್. ರಾಜ್ಯಾಧ್ಯಕ್ಷರಾದ ಷಡಕ್ಷರಿ, ಡಾಕ್ಟರ್ ಧನಂಜಯ ಸರ್ಜಿ. ಜಿ ವಿಜಯಕುಮಾರ್.ಮಹಾಸಭಾ ಅಧ್ಯಕ್ಷರು ರುದ್ರಮುನಿ ಸಜ್ಜನ್. ರಾಜಶೇಖರ್. ಮಲ್ಲಿಕಾರ್ಜುನ್ ಕಾನೂರ್. ಕೆ ಆರ್ ಸೋಮನಾಥ್ ಬಸವ ಕೇಂದ್ರದ ಅಧ್ಯಕ್ಷರಾದ ಜಿ ಬೆನಕಪ್ಪ. ಚಂದ್ರಶೇಖರ್ ಹಾಲಸ್ವಾಮಿ. ಎಸ್ ಪಿ ದಿನೇಶ್ ಧರಣೇಂದ್ರ ದಿನಕರ್ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ […]

Continue Reading

ಶಿವಮೊಗ್ಗ | ಪುರಾತನ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಡಾ. ರಂಗನಾಥ್ ರಾವ್ ಹೆಚ್ ಕರಾಡ್ ಮನವಿ

ಸಾರ್ವಜನಿಕರು ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯೊಡನೆ ಕೈಜೋಡಿಸುವಂತೆ ಹೇಳಿದರು.ಎನ್.ಎಸ್.ಎಸ್. ಅಧಿಕಾರಿ ಉಮಾಶಂಕರ್ ಹಾಗೂ ಡಾ. ವರದರಾಜ ಮಾತನಾಡಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಸ್ಮಾರಕಗಳನ್ನು ಸ್ವಚ್ಚಗೊಳಿಸಲಾಗಿದೆ. ಇನ್ನು ಹೆಚ್ಚಿನ ಸ್ಮಾರಕಗಳನ್ನು ಗುರುತಿಸಿ ಸ್ವಚ್ಚಗೊಳಿಸುವ ಮೂಲಕ ಸಂರಕ್ಷಿಸಿ ಹಾಳಾಗದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು. ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರವಾಸಿ ಮಿತ್ರರು, ಇಲಾಖೆ ಸಿಬ್ಬಂದಿಯವರು ಶಿಬಿರದಲ್ಲಿ ಭಾಗವಹಿಸಿದ್ದರು.

Continue Reading

ತೀರ್ಥಹಳ್ಳಿ | ಕುಡಿಯುವ ನೀರಿನ ಬಾವಿಗೆ ವಿಷ ; ದೂರು ದಾಖಲು

ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಅವರು ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ, ಬಾವಿಯ ಸಮೀಪ ಹೋದಾಗ ನೀರಿನಲ್ಲಿ ವಿಷದ ವಾಸನೆ ಬರುತ್ತಿರುವುದು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Continue Reading

ಏ.23 ಮತ್ತು 24 ರಂದು ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ – ಸಕಲ ಸಿದ್ದತೆ : ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಗಳನ್ನು ನಡೆಸುತ್ತಿದ್ದು, ಈ ಬಾರಿ ಜಿಲ್ಲೆಯಾದ್ಯಂತ ಒಟ್ಟು 29 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಶಿವಮೊಗ್ಗ ನಗರದಲ್ಲಿ 21, ಭದ್ರಾವತಿಯಲ್ಲಿ 05 ಹಾಗೂ ಸಾಗರದಲ್ಲಿ 03 ಕೇಂದ್ರಗಳಿವೆ. ಒಟ್ಟು 9,864 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಶಿವಮೊಗ್ಗದಿಂದ 7,456, ಭದ್ರಾವತಿಯಿಂದ 1,120 ಮತ್ತು ಸಾಗರ ತಾಲೂಕಿನಿಂದ 1,288 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ನಿಷೇಧಿತ ಆಜ್ಞೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರಡಿ ನಿಷೇಧಿತ ಆಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಈ ಭಾಗದಲ್ಲಿ ಜೆರಾಕ್ಸ್ […]

Continue Reading