ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ BLA ತರಬೇತಿ ಕಾರ್ಯಾಗಾರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಆರಂಭಿಸಲಾಯಿತು.

ಈ ಒಂದು ವಿಶೇಷ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಜೆಡಿಎಸ್ ರಾಜ್ಯ ವಕ್ತಾರರಾದ ರಾಜು ಗೌಡ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರ ನಡೆಸುತ್ತಿರುವ SIR ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ತುಂಬಾ ಅವಶ್ಯಕತೆ ಇರುವಂತದ್ದು ಯಾಕಂದ್ರೆ ಪ್ರತಿ 15 ವರ್ಷಕೊಮ್ಮೆ ಮತ್ತು ಅಸೆಂಬ್ಲಿ Constituency 10 ವರ್ಷಕೊಮ್ಮೆ ಮತದಾರರ ಪರಿಷ್ಕರಣೆ ಆಗಬೇಕು.
ನಿಮ್ಮ ಮತದಾನ ನಿಮ್ಮ ಹಕ್ಕು ಹಾಗೂ ಪರಿಷ್ಕರಣೆ ಯಾಕೆ ಆಗಬೇಕು ಅಂದರೆ ಜನಸಂಖ್ಯೆ ಆಧಾರ ಮತ್ತು ವಿಸ್ತೀರ್ಣ ಆಧಾರ ಎರಡು ಬಹು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಹಾಗಾಗಿ ಮತದಾರ ಪರಿಷ್ಕರಣೆ ಅವಶ್ಯವಾಗಿದೆ ಡಬಲ್ ವೋಟಿಂಗ್ ತಡೆಯಲು ಕೂಡ ಇದು ಸಹಕಾರವಾಗಲಿದೆ ಎಂದರು.
ಹಾಗೂ ಬೇರೆ ದೇಶಗಳಗಿಂದ ಬಂದು ನಮ್ಮ ಹಕ್ಕು ಕಸಿದುಕೊಳ್ಳುವಂತೆ ಆಗಬಾರದು ಎಂದರು. ನಕಲಿ ಮತದಾನ ತಡೆಗಟ್ಟುವಲ್ಲಿಯೂ SIR ಮುಖ್ಯವಾಗಿದೆ ಎಂದು ತಿಳಿಸಿದರು.
ಪ್ರತಿ BLO ಅಧಿಕಾರಿಗಳು ಅಂದರೆ ಶಿಕ್ಷಕರು ಅಥವಾ ಅಂಗನವಾಡಿ ಸಹಾಯಕರು ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಮತದಾರ ಪಟ್ಟಿ ಪರಿಷ್ಕರಣೆ ಮಾಡುತ್ತಾರೆ ಹಾಗಾಗಿ ಈ ಸಂದರ್ಭದಲ್ಲಿ BLA ಗಳಾದ ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ತಮ್ಮ ಬೂತ್ ಮಟ್ಟದಲ್ಲಿ ತಮ್ಮ ಸ್ಥಳೀಯರು ಯಾರದಾದ್ರೂ ಹೆಸರು ಸೇರ್ಪಡೆ ಅಥವಾ ಬಿಟ್ಟು ಹೋಗಿದಲ್ಲಿ ಅವರಿಗೆ ನೆರವಾಗಿ ಹಾಗೂ BLO ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಿ ಎಂದರು.

ಇನ್ನು ಸ್ಥಳೀಯ ಮಟ್ಟದಲ್ಲಿ ಜನರ ಪ್ರೀತಿ ವಿಶ್ವಾಸ ಗೆಲ್ಲಿ ಮುಂದಿನ ದಿನಗಳಲ್ಲಿ ಬಲವಾಗಿ ಪಕ್ಷ ಸಂಘಟನೆ ಮಾಡಿ ವಿಶ್ವಾಸಗಳಿಸಿ ಜೆಡಿಎಸ್ ಬಲವರ್ಧನೆಗೆ ಸಹಕಾರ ನೀಡಿ ಎಂದು ತಿಳಿಸಿದ್ದಾರೆ.
ಮತ್ತು ಜೆಡಿಎಸ್ ಬೂತ್ ಮಟ್ಟದ ಕಾರ್ಯಕರ್ತರಿಗೆ ID ಕಾರ್ಡ್ ಅನ್ನು ಸಹ ನೀಡುತ್ತೇವೆ ತಾವುಗಳು ಅಧಿಕಾರಿಗಳನ್ನು ಭೇಟಿಯಾಗಿ ಸ್ಥಳೀಯ ಸಮಸ್ಯೆಗಳನ್ನ ಬಗೆಹರಿಸಿಕೊಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಬೂತ್ ನಲ್ಲಿ ಕನಿಷ್ಠ 50 ಜನರ ಗುಂಪು ರಚನೆಯಾದಲ್ಲಿ ಕನಿಷ್ಠ 50 ಮತ ಬಂದರು ನಾವು ಚುನಾವಣೆಯಲ್ಲಿ ಗೆಲ್ಲಲು ಸಹಕಾರವಾಗಲಿದೆ. ಹಾಗಾಗಿ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಮಹಿಳೆಯರು ಪ್ರತಿ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ ಸ್ಥಳೀಯರ ವಿಶ್ವಾಸಿ ಗೆಲ್ಲಿ ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಗೆಲ್ಲುವುದು ಹಾಗೂ ರಾಜ್ಯಕ್ಕೆ ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡುವ ಸಂಕಲ್ಪದೊಂದಿಗೆ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡುವ ಎಂದು ತಿಳಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಕೆ. ಬಿ. ಪ್ರಸನ್ನ ಕುಮಾರ್, ನಗರ ಅಧ್ಯಕ್ಷರಾದ ದೀಪಕ್ ಸಿಂಗ್, ನರಸಿಂಹ ಗಂಧದಮನೆ, ಕಡಿದಾಳ್ ಗೋಪಾಲ್, ತ್ಯಾಗರಾಜ್, ಸಂಜಯ್ ಕಶ್ಯಪ್ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


