ಶಿವಮೊಗ್ಗ,ಶಿವಪ್ಪ ನಾಯಕ ಅರಮನೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸರ್ಕಾರಿ ವಸ್ತು ಸಂಗ್ರಹಾಲಯ ಶಿವಮೊಗ್ಗ, ಇತಿಹಾಸ ಪರಂಪರೆ ಕೂಟ ಹಾಗೂ ಎನ್.ಎಸ್.ಎಸ್.ಘಟಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಸಹಯೋಗದೊಂದಿಗೆ ದಿನಾಂಕ 18-04-2026 ಶನಿವಾರದಂದು ವಿಶ್ವ ಪರಂಪರೆ ದಿನಾಚರಣೆ-2026 ಪ್ರಯುಕ್ತ ಶಿವಮೊಗ್ಗ ನಗರದ ಶಿವಪ್ಪ ನಾಯಕ ಅರಮನೆಯ ಆವರಣದಲ್ಲಿ ಮತ್ತು ವಸ್ತು ಸಂಗ್ರಹಾಲಯದ ಒಳಭಾಗದ ಸ್ಮಾರಕಗಳ ಸ್ವಚ್ಚತಾ ಕಾರ್ಯಕ್ರಮ ಹಾಗೂ ಪರಂಪರೆಯ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಸ್ಮಾರಕಗಳ ಮೇಲೆ ಬೆಳೆದಿರುವ ಗಿಡ ಗಂಟೆಗಳನ್ನು ತೆಗೆದು ಸ್ವಚ್ಚಗೊಳಿಸುವುದರಿಂದ ಸ್ಮಾರಕಗಳು ಹಾಳಾಗುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಸಾವಿರಾರು ಅರಕ್ಷಿತ ಸ್ಮಾರಕಗಳಿವೆ. ಐತಿಹಾಸಿಕ ಮಹತ್ವವಿರುವ ವಿಶೇಷ ವಾಸ್ತು ವಿನ್ಯಾಸವಿರುವ ಪುರಾತನ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಿತ ಸ್ಮಾರಕಗಳನ್ನಾಗಿ ಘೋಷಿಸುವ ಮೂಲಕ ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ವಿನೋದ್ ಪ್ರಕಾಶ್ ಮಾತನಾಡಿ ರಾಷ್ಟ್ರೀಯ ಮಹತ್ವವುಳ್ಳ ಬಹು ಪ್ರಾಮುಖ್ಯವಿರುವ ಸ್ಮಾರಕಗಳು ಜಿಲ್ಲೆಯಲ್ಲಿವೆ. ಇವುಗಳನ್ನು ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳನ್ನಾಗಿ ಘೋಷಿಸಿ ವಿಶ್ವವಿದ್ಯಾನಿಲಯ ಪರಂಪರೆ ಪಟ್ಟಿಗೆ ಸೇರಿಸಿ ಸ್ಮಾರಕಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ.

ಸಾರ್ವಜನಿಕರು ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯೊಡನೆ ಕೈಜೋಡಿಸುವಂತೆ ಹೇಳಿದರು.ಎನ್.ಎಸ್.ಎಸ್. ಅಧಿಕಾರಿ ಉಮಾಶಂಕರ್ ಹಾಗೂ ಡಾ. ವರದರಾಜ ಮಾತನಾಡಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಸ್ಮಾರಕಗಳನ್ನು ಸ್ವಚ್ಚಗೊಳಿಸಲಾಗಿದೆ.
ಇನ್ನು ಹೆಚ್ಚಿನ ಸ್ಮಾರಕಗಳನ್ನು ಗುರುತಿಸಿ ಸ್ವಚ್ಚಗೊಳಿಸುವ ಮೂಲಕ ಸಂರಕ್ಷಿಸಿ ಹಾಳಾಗದಂತೆ ವಿದ್ಯಾರ್ಥಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರವಾಸಿ ಮಿತ್ರರು, ಇಲಾಖೆ ಸಿಬ್ಬಂದಿಯವರು ಶಿಬಿರದಲ್ಲಿ ಭಾಗವಹಿಸಿದ್ದರು.


