ಇಂದಿನಿಂದ ಪ್ರತಿಮನೆಗೆ ತೆರಳಿ ಮನೆಗಣತಿ

ಜನಗಣತಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಸ್ವಯಂ-ಗಣತಿ (SE) ಸೌಲಭ್ಯವು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಭಾರತೀಯ ರಿಜಿಸ್ಟ್ರಾರ್ ಜನರಲ್ (RGI) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “2027 ರ ಜನಗಣತಿಗೆ ಅಳವಡಿಸಿಕೊಂಡ ಡಿಜಿಟಲ್ ವಿಧಾನದ ಭಾಗವಾಗಿ, ಇಲ್ಲಿಯವರೆಗೆ ಸುಮಾರು 12 ಲಕ್ಷ ಕುಟುಂಬಗಳು ಅಧಿಕೃತ ಪೋರ್ಟಲ್ ಮೂಲಕ ಸ್ವಯಂ-ಗಣತಿ ಸೌಲಭ್ಯವನ್ನು ಯಶಸ್ವಿಯಾಗಿ ಪಡೆದುಕೊಂಡಿವೆ” ಎಂದು ಅಧಿಕಾರಿ ಹೇಳಿದರು. ಕ್ಷೇತ್ರ ಗಣತಿ ಅವಧಿಗೆ ಮುಂಚಿತವಾಗಿ ಈ ಸೌಲಭ್ಯವನ್ನು ಲಭ್ಯವಾಗುವಂತೆ ಮಾಡಲಾಗಿದ್ದು, ನಿವಾಸಿಗಳು ಸುರಕ್ಷಿತ ಮತ್ತು ಬಳಕೆದಾರ ಸ್ನೇಹಿ ಡಿಜಿಟಲ್ ವೇದಿಕೆಯ […]

Continue Reading

ಮಂತ್ರಾಲಯಕ್ಕೆ ತೆರಳುತ್ತಿದ್ದ ಕರ್ನಾಟಕದ 8 ಜನ ಭಕ್ತರು ಭೀಕರ ಅಪಘಾತದಲ್ಲಿ ದುರ್ಮರಣ

ಘಟನೆಯಲ್ಲಿ ಕುಮಾರ್ (50), ದೀಪಿಕಾ (42), ಸುನಿಲ್ (40), ಯಶೋಧಮ್ಮ (60), ಪುಟ್ಟಮ್ಮ (55), ಬೆಳ್ಳಿ (3), ಲೋಲಾಕ್ಷಿ ಹಾಗೂ ಮೀನಾಕ್ಷಿ ಎಂಬವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಮೂರು ವರ್ಷದ ಮಗು ಸೇರಿದೆ. 7 ಮಂದಿ ತೀವ್ರ ಗಾಯಗೊಂಡಿದ್ದು, ಅವರನ್ನು ಕರ್ನೂಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ವರು ಎಮ್ಮಿಗನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಸನ ಹಾಗೂ ಚಿಕ್ಕಮಗಳೂರು ಮೂಲದ ಒಟ್ಟು 18 ಮಂದಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ […]

Continue Reading

ಯೋಗೇಶ್ ಗೌಡ ಹತ್ಯೆ ಪ್ರಕರಣ ; ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ ನ್ಯಾಯಾಲಯ ಮಹತ್ವದ ತೀರ್ಪು

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನಾಳೆ ಪ್ರಕಟಿಸಲಿದೆ. 21 ಆರೋಪಿಗಳ ಪೈಕಿ 17 ಮಂದಿ ದೋಷಿಗಳಾಗಿದ್ದಾರೆ. 20ನೇ ಆರೋಪಿ ವಾಸುದೇವ ನಿಲಕೇಣಿ, 21ನೇ ಆರೋಪಿ ಸೋಮಶೇಕರ್ ನ್ಯಾಮಗೌಡ ಅವರನ್ನು ಕೋರ್ಟ್‌ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ. ಎಲ್ಲಾ ದೋಷಿಗಳನ್ನು ಕಸ್ಟಡಿಗೆ ಪಡೆಯುವಂತೆ ಕೋರ್ಟ್‌ ಸಿಬಿಐಗೆ ಸೂಚಿಸಿದೆ. ಎ-1 ಬಸವರಾಜ್ ಮುತ್ತಗಿ ಮತ್ತು ಎ17 – ಶಿವಾನಂದ ಬಿರಾದರ್ ಸರ್ಕಾರಿ ಸಾಕ್ಷಿಗಳಾಗಿರುವ ಕಾರಣ ಅವರನ್ನು ಕೋರ್ಟ್‌ ನಿರ್ದೋಷಿ ಎಂದು ಹೇಳಿದೆ. ಸಿಆರ್‌ಪಿಸಿ ಸೆಕ್ಷನ್ 302 (ಕೊಲೆ), 120B (ಕ್ರಿಮಿನಲ್ ಪಿತೂರಿ), ಸೆಕ್ಷನ್ […]

Continue Reading

ಕಾಲಭೈರವನ ದರ್ಶನ ಪಡೆದಿದ್ದು ನನ್ನ ಸೌಭಾಗ್ಯ– ಸಕ್ಕರೆ ನಾಡು ಮಧುರ ಮಂಡ್ಯ ಎಂದು ಕೊಂಡಾಡಿದ ‘ನಮೋ’

ಆದಿಚುಂಚನಗಿರಿ ಮಠ ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಮಠವು ನೈತಿಕ ಮೌಲ್ಯಗಳಿಂದ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ ಕನ್ನಡದಲ್ಲೇ ಮಾತನ್ನು ಆರಂಭಿಸಿದರು. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನಾಡಿದರು. ಕಾಲಭೈರನ ದರ್ಶನ ಪಡೆದುಕೊಂಡಿದ್ದೇನೆ. ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದ್ದೇನೆ. ನಿಮ್ಮೆಲ್ಲರ ದರ್ಶನ ಪಡೆದುಕೊಂಡಿದ್ದೇನೆ. ಶಬ್ದದಲ್ಲಿ ಈ ಭಾವವನ್ನು ಹೇಳಲು ಸಾಧ್ಯವಿಲ್ಲ. ಪ್ರತಿ ಸಲ ಕರ್ನಾಟಕಕ್ಕೆ ಬಂದಾಗ ಪ್ರೇರಣೆ ಸಿಗುತ್ತದೆ ಎಂದು ಸಂತಸ […]

Continue Reading

ಸಾಗರ | ಹಿರಿಯ ಪತ್ರಕರ್ತ ಓಂಕಾರ ಎಸ್.ವಿ ತಾಳಗುಪ್ಪ ವಿಧಿವಶ

ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಸದ್ಗತಿಯನ್ನು ನೀಡಲಿ ಕುಟುಂಬ ವರ್ಗದವರಿಗೆ ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ನಮ್ಮ ಇ-ಕನ್ನಡ ಮಾಧ್ಯಮದಿಂದ ಹಿರಿಯ ಪತ್ರಕರ್ತ ಓಂಕಾರ್. ಎಸ್. ತಾಳಗುಪ್ಪ ಅವರ ನಿಧನಕ್ಕೆ ಸಂತಾಪ ಸುಚಿಸುತ್ತಿದ್ದೇವೆ.

Continue Reading

ಶಿವಮೊಗ್ಗ | ಹುಲಿ ಸಿಂಹಧಾಮದ ನೀರಾನೆ ‘ಹಂಸಿಣಿ’ ಸಾವು

ಈ ವೇಳೆ ಅದರ ಗರ್ಭಾಶಯದಲ್ಲಿ (Infection)ಇರುವುದು ಪತ್ತೆಯಾಗಿತ್ತು. ಗರ್ಭಾಶಯದ ಒಳಗಿನ ಭ್ರೂಣದ ಸಾವಿನಿಂದ ಈ ಸೋಂಕು ಉಂಟಾಗಿದ್ದು, ಇದು ಬಹು ಅಂಗಾಂಗಗಳ ವೈಫಲ್ಯಕ್ಕೆ ಕಾರಣವಾಗಿ ನೀರಾನೆ ಮೃತಪಟ್ಟಿದೆ ಎಂದು ಹುಲಿ ಸಿಂಹಧಾಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ ತಿಳಿಸಿದ್ದಾರೆ.

Continue Reading

ಬೇಸಿಗೆ ರಜೆ : Play Station ಜಾಲದಲ್ಲಿ ಮಕ್ಕಳು ಸುರಕ್ಷಿತರೇ?

ಅತಿಯಾದ ಗೇಮಿಂಗ್ನ ದುಷ್ಪರಿಣಾಮಗಳು (The Dark Side)ವರ್ಗ ಪರಿಣಾಮ : ದೈಹಿಕ ಆರೋಗ್ಯ ಕಣ್ಣು ನೋವು, ತಲೆನೋವು, ಬೊಜ್ಜು, ಬೆನ್ನುಮೂಳೆಯ ಸಮಸ್ಯೆ, ನಿದ್ರಾಹೀನತೆ,ಮಾನಸಿಕ ಆತಂಕ, ಖಿನ್ನತೆ, ಸಿಟ್ಟಿನ ಸ್ವಭಾವ, ಸಾಮಾಜಿಕ ಪ್ರತ್ಯೇಕತೆ,ಶೈಕ್ಷಣಿಕ ಅಧ್ಯಯನದಲ್ಲಿ ಏಕಾಗ್ರತೆ ಕಡಿಮೆಯಾಗುವುದು, ಓದುವ ಅಭ್ಯಾಸದ ನಾಶ,ಆರ್ಥಿಕ ಆಟದೊಳಗಿನ ಖರೀದಿಗಳಿಗೆ (in-game purchases) ಸಾವಿರಾರು ರೂಪಾಯಿಗಳ ಅನಧಿಕೃತ ಖರ್ಚು. ಸುರಕ್ಷತೆ : ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೆ, ಸೈಬರ್ ಬೆದರಿಕೆ ಇತ್ಯಾದಿ..! Play Station ನಲ್ಲಿ ಪೋಷಕರಿಗೆ 10 ಕಡ್ಡಾಯ ಸೂಚನೆಗಳು : ಸಂಪೂರ್ಣ […]

Continue Reading

ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ : ​ಭಾರತದ ಭಾಗ್ಯವಿಧಾತನಿಗೆ ನಮನ

ಅಂಬೇಡ್ಕರ್ ಜಯಂತಿಯು ಕೇವಲ ಒಂದು ದಿನದ ಸಂಭ್ರಮವಲ್ಲ; ಅದು ಅವರು ಹಾಕಿಕೊಟ್ಟ ಸಮಾನತೆ ಮತ್ತು ಭ್ರಾತೃತ್ವದ ಹಾದಿಯಲ್ಲಿ ನಡೆಯುವ ಸಂಕಲ್ಪದ ದಿನವಾಗಿದೆ. ದೇಶದ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಅವರ ವಿಚಾರಧಾರೆಗಳು ಇಂದಿಗೂ ದಾರಿದೀಪವಾಗಿವೆ ಎಂದು ಸುರೇಶ್ ಅವರು ಕಾರ್ಯಕ್ರಮದಲ್ಲಿ ತಿಳಿಸಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಮತ್ತು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ಅನನ್ಯ. ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕುಗಳನ್ನು […]

Continue Reading

ಶಿವಮೊಗ್ಗ | ರೈಲಿನಲ್ಲಿ ಕಳ್ಳತನ ; ಆರೋಪಿ ಪೊಲೀಸ್ ವಶಕ್ಕೆ

ಬೆಂಗಳೂರಿನ ನಿವಾಸಿ ಅಂಬಿಕಾ ಎಂಬವರು 12.03.2026 ರಂದು ತಮ್ಮ ಮಕ್ಕಳೊಂದಿಗೆ ತಾಳಗುಪ್ಪ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ (ರೈಲು ಸಂಖ್ಯೆ 20651) ಕೆಎಸ್‌ಆರ್ ಬೆಂಗಳೂರು ಸಿಟಿ ನಿಲ್ದಾಣದಿಂದ ಆನಂದಪುರಂಗೆ ಪ್ರಯಾಣಿಸುತ್ತಿದ್ದರು. ಸಂಜೆ 8:15 ರ ಸಮಯ, ತಾಳಗುಪ್ಪ ಟ್ರೈನ್​ ಕುಂಸಿ ನಿಲ್ದಾಣದಿಂದ ಮುಂದಕ್ಕೆ ಚಲಿಸಿದಾಗ, ಸುಮಾರು 35 ಗ್ರಾಂ ಚಿನ್ನಾಭರಣ ಹಾಗೂ 10,000 ರೂಪಾಯಿ ನಗದು ಇದ್ದ ಹ್ಯಾಂಡ್‌ಬ್ಯಾಗ್ ಕಳುವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಕುರಿತು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಸಂಬಂಧ ಆರ್‌ಪಿಎಫ್ […]

Continue Reading

ಶಿವಮೊಗ್ಗ | ಗಾಂಜಾ ಸೇವಿಸಿದ್ದ ಕಾಲೇಜು ವಿದ್ಯಾರ್ಥಿ ಬಂಧನ

ಆಸ್ಪತ್ರೆಯಿಂದ ಬಂದ ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿನೋಬಾನಗರ ಪೊಲೀಸರು ಆತನ ವಿರುದ್ಧ ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading