ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ರಾಹುಲ್ ಗಾಂಧಿಯವರ ಅಸಂಬದ್ಧ ಬೇಜವಾಬ್ದಾರಿ ಹೇಳಿಕೆ ಖಂಡನೀಯ : ಸಂಸದ ಬಿ.ವೈ.ರಾಘವೇಂದ್ರ

ರಾಜಕೀಯ

ಶಿವಮೊಗ್ಗ ರಾಹುಲ್ ಗಾಂಧಿಯವರ ಅಸಂಬದ್ಧ ಬೇಜವಾಬ್ದಾರಿ ಹೇಳಿಕೆ ಖಂಡನೀಯ; ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರವನ್ನು ದುರ್ಬಲಗೊಳಿಸುವ ಅವರ ಕೀಳು ಪ್ರಯತ್ನವನ್ನು ದೇಶದ ಜನತೆ ಕ್ಷಮಿಸುವುದಿಲ್ಲ” ವೆಂದು ಸಂಸತ್ ಸದಸ್ಯರಾದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“140 ಕೋಟಿ ಭಾರತೀಯರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಹೆಮ್ಮೆಯ ನಾಯಕತ್ವವನ್ನು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ‘ದೇಶದ್ರೋಹಿಗಳು’ ಎಂದು ಆರೋಪಿಸುವುದು ರಾಜಕೀಯ ಬೇಜವಾಬ್ದಾರಿತನದ ಪರಮಾವಧಿ.

ಮೇಲಿಂದ ಮೇಲೆ ಚುನಾವಣಾ ಸೋಲುಗಳನ್ನು ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮೇಲಿನ ಜನರ ಅಚಲ ನಂಬಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಲೋಕಸಭಾ ವಿಪಕ್ಷ ನಾಯಕ ಮತ್ತೆ ತಮ್ಮ ಅದೇ ನಿಂದನೀಯ ಮತ್ತು ಬೇಜವಾಬ್ದಾರಿಯುತ ನಾಲಿಗೆಯನ್ನು ಹರಿ ಬಿಟ್ಟಿದ್ದಾರೆ ಎಂದರು.”

“ವಿದೇಶಿ ನೆಲದಲ್ಲಿ ಭಾರತವನ್ನು ಪದೇ ಪದೇ ಅವಮಾನಿಸುವ ರಾಹುಲ್ ಗಾಂಧಿಯವರಿಗೆ, ದೇಶಭಕ್ತಿ ಅಥವಾ ಪ್ರಜಾಪ್ರಭುತ್ವದ ಬಗ್ಗೆ ಯಾರಿಗೂ ಉಪನ್ಯಾಸ ನೀಡುವ ನೈತಿಕ ಅಧಿಕಾರವೇ ಉಳಿದಿಲ್ಲ. ದಶಕಗಳಿಂದ ಸಂವಿಧಾನವನ್ನು ಯಾರು ದುರ್ಬಲಗೊಳಿಸಿದ್ದಾರೆಂದು ದೇಶದ ಜನರಿಗೆ ಚೆನ್ನಾಗಿ ತಿಳಿದಿದೆ.

ಕಳೆದ ಹತ್ತು ವರ್ಷಗಳಿಂದ ಅದರ ಪಾವಿತ್ರ್ಯವನ್ನು ಪುನಃಸ್ಥಾಪಿಸಲು, ಬಡವರನ್ನು ಸಬಲೀಕರಣಗೊಳಿಸಲು ಮತ್ತು ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಕನಸನ್ನು ನನಸು ಮಾಡಲು ಅವಿಶ್ರಾಂತವಾಗಿ ಶ್ರಮಿಸಿದ ನಾಯಕತ್ವವನ್ನು ಅವರು ಗುರುತಿಸಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಮಾನ್ಯ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಎನ್.ಡಿ.ಎ ಸರ್ಕಾರವನ್ನು ಸತತ ಮೂರನೇ ಬಾರಿಗೆ ಜನಾದೇಶ ನೀಡಿ ಆಶೀರ್ವದಿಸಿದ್ದಾರೆ.”

“ಇಡೀ ಜಗತ್ತೆ ಗಂಭೀರ ಜಾಗತಿಕ ಅಸ್ಥಿರತೆ ಮತ್ತು ಸಂಘರ್ಷವನ್ನು ಎದುರಿಸುತ್ತಿರುವ ಸೂಕ್ಷ್ಮ ಸಮಯದಲ್ಲಿ, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ರವರು ಭಾರತದ ರಾಷ್ಟ್ರೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮುಂದೆ ನಿಂತು ದೇಶವನ್ನು ಮುನ್ನಡೆಸುತ್ತಿದ್ದಾರೆ.

ಇಡೀ ದೇಶ ಮೋದಿ ಜೀ ರವರ ನಿರ್ಣಾಯಕ ನಾಯಕತ್ವದ ಹಿಂದೆ ಒಗ್ಗಟ್ಟಾಗಿ ನಿಂತಿದ್ದರೂ, ಕೆಲವು ಸಂಕುಚಿತ ಮನಸ್ಸಿನ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ, ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಲೇ ಇರುವುದು ಸರಿಯಲ್ಲ.

ಭಾರತದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತು ಅಂತಹ ಕೀಳು ರಾಜಕೀಯಕ್ಕೆ ಅವರೇ ಸೂಕ್ತ ಪ್ರತ್ಯುತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.”

Author