ಶಿವಮೊಗ್ಗ, ನಾಳೆಯಿಂದ ಜಿಲ್ಲೆಯ ಸಕ್ರೆಬೈಲಿನಲ್ಲಿರುವ ಆನೆ ಬಿಡಾರ ಒಂದು ತಿಂಗಳ ಕಾಲ ಕ್ಲೋಸ್ ಆಗಲಿದೆ. ಸಾಮಾನ್ಯವಾಗಿ ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮದಲ್ಲಿ ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಆದರೆ ಇದು ಹಾಲಿಡೇ ಮಂತ್ ಆಗಿರುವುದರಿಂದ ಹುಲಿ-ಸಿಂಹ ಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ, ವಿಶೇಷವಾಗಿ ದಿನಾಂಕ: 26.05.2026ರ ಮಂಗಳವಾರದಂದು ಹುಲಿ-ಸಿಂಹ ಧಾಮದಲ್ಲಿನ ಜೂ ಹಾಗೂ ಸಫಾರಿ ವೀಕ್ಷಣೆಯನ್ನು ತೆರೆದಿಡಲಾಗುತ್ತದೆ.
ಸಕ್ರೆಬೈಲು ಆನೆ ಬಿಡಾರ ಒಂದು ತಿಂಗಳ ಕಾಲ ಬಂದ್ ಆಗಿರುವುದರಿಂದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ತ್ಯಾವರೆಕೊಪ್ಪಕ್ಕೆ ಹೊಸ ಎಸ್ಒಪಿ (SOP) ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರುವವರೆಗೂ ಸಕ್ರೆಬೈಲು ಆನೆ ಬಿಡಾರವು ಮುಚ್ಚಿರಲಿದೆ.
ಸಕ್ರೆಬೈಲು ಆನೆ ಬಿಡಾರವು ಇಂದಿನಿಂದಲೇ ಮುಚ್ಚಬೇಕಿತ್ತು. ಆದರೆ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು . ಆದರೆ ಇನ್ಮುಂದೆ ಕೆಲ ದಿನಗಳ ಕಾಲ ಇದು ಬಂದ್ ಆಗಿರಲಿದೆ.

