ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಪುರುಷರಿಗೂ ಸಹ ಶೀಘ್ರದಲ್ಲಿಯೇ ಸ್ಮಾರ್ಟ್ ಕಾರ್ಡ್ ಸೌಲಭ್ಯ : ಸಚಿವ ಬೈರತಿ ಸುರೇಶ್

3 ಕೋಟಿ ಸಾರ್ವಜನಿಕರಿಗೆ ಸ್ಮಾರ್ಟ್ ಕಾರ್ಡ್‌ ವಿತರಣೆಗೆ ಪ್ಲಾನ್ ಈ ನೂತನ ವ್ಯವಸ್ಥೆಯ ಮೂಲಕ ರಾಜ್ಯದ ಒಟ್ಟು 3 ಕೋಟಿ ಸಾರ್ವಜನಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಮಹಿಳೆಯರಿಗೆ ನೀಡುವ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಕೇವಲ ಉಚಿತ ಪ್ರಯಾಣಕ್ಕಾಗಿ ಮಾತ್ರ ಬಳಸಬಹುದಾಗಿದ್ದರೆ, ಪುರುಷ ಪ್ರಯಾಣಿಕರಿಗೆ ವಿತರಿಸಲಾಗುವ ಸ್ಮಾರ್ಟ್ ಕಾರ್ಡ್‌ಗಳಿಗೆ ಹಣವನ್ನು ಭರ್ತಿ ಮಾಡಿಸಿ, ಆ ಮೂಲಕ ಬಸ್ ಟಿಕೆಟ್ ದರವನ್ನು ಪಾವತಿಸುವಂತಹ ಸುಲಭ ಹಾಗೂ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. […]

Continue Reading

ಶಿವಮೊಗ್ಗ | ಬಿ. ಕೆ. ಸಂಗಮೇಶ್ವರ್‌ಗೆ ಮಂತ್ರಿ ಸ್ಥಾನ ನೀಡಿ

ಕಾಂಗ್ರೆಸ್ ಜಿಲ್ಲೆಯಲ್ಲಿ ಮತ್ತೆ ಭದ್ರಕೋಟೆಯಾಗಬೇಕು. ಇದಕ್ಕಾಗಿ ಸಂಗಮೇಶ್‌ರವರ ನಾಯಕತ್ವ ಬೇಕಾಗಿದೆ. ಪಕ್ಷದ ಹಿತದೃಷ್ಟಿಯಿಂದಲೂ ಅವರು ಸಚಿವರಾಗಬೇಕು. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. 2028ಕ್ಕೆ ವಿಧಾನಸಭಾ ಚುನಾವಣೆಯೂ ಬರಲಿದೆ. ಈ ಎಲ್ಲಾ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಸಂಗಮೇಶ್ ಹೊಂದಿದ್ದಾರೆ. ಹಾಗಾಗಿ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆಗೊಳಿಸಲೇಬೇಕು ಎಂಬೊತ್ತಾಯ ಮಾಡಿದರು.

Continue Reading

ಶಿವಮೊಗ್ಗ | ಸಚಿವ ಸ್ಥಾನದ ಕುರಿತು ಮಾಜಿ ಸಚಿವರು ಹೇಳಿದ್ದಿಷ್ಟು..!

ಇದೇ ವೇಳೆ ತಾವು ಶಿಕ್ಷಣ ಸಚಿವರಾಗಿ ಮುಂದುವರೆಯುವ ವಿಚಾರವನ್ನೂ ಸಹ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಅವರು ಸ್ಪಷ್ಟಪಡಿಸಿದರು.ಪ್ರಸ್ತುತ ಮುಖ್ಯಮಂತ್ರಿಗಳ ಬಳಿಯೇ ಶಿಕ್ಷಣ ಖಾತೆ ಇದ್ದು, ಅವರು ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳ ಪರವಾಗಿ ಮಹತ್ವದ ಆದೇಶ ಹೊರಡಿಸಿದ್ದಾರೆ. ನೆರೆ ರಾಜ್ಯ ತೆಲಂಗಾಣದಲ್ಲೂ ಸಹ ಸಿಎಂ ರೇವಂತ್ ರೆಡ್ಡಿ ಅವರ ಬಳಿಯೇ ಶಿಕ್ಷಣ ಖಾತೆ ಇರುವುದರಿಂದ ಅಲ್ಲಿ ಇಲಾಖೆ ಅತ್ಯಂತ ಸುಸೂತ್ರವಾಗಿ ನಡೆಯುತ್ತಿದೆ. ಶಾಲೆ ಆರಂಭದ ಸಮಯದಲ್ಲಿ ಯಾರೂ ಪ್ರಮಾಣ ವಚನ ಸ್ವೀಕರಿಸದ ಕಾರಣ ಸಣ್ಣ ಬದಲಾವಣೆಯಾಗಿ ಕಾರ್ಯಕ್ರಮಗಳು […]

Continue Reading

ಮುಖ್ಯಮಂತ್ರಿಯವರಿಗೆ ಮುಖ್ಯ ಸಲಹೆಗಾರರಾಗಿ ಸುನೀಲ್‌ ಕನುಗೋಳು ನೇಮಕ

ಪಕ್ಷ ಗೆಲ್ಲುವಲ್ಲಿ ತೆರೆ ಹಿಂದಿನ ತಂತ್ರಗಾರಿಕೆಯನ್ನು ಹೆಣೆದಿದ್ದರು. ಈಗ ಆಡಳಿತದಲ್ಲೂ ಸಿಎಂಗೆ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

Continue Reading

ಶಿವಮೊಗ್ಗ | “ಪ್ರತಿ ಮನೆಯ ಮುಂದೆ ಸಸಿ ನೆಡುವ” ಅಪೂರ್ವ ಸಂಕಲ್ಪ

ಗಿಡ ನೆಡುವ ಈ ಜನಾಂದೋಲನದಲ್ಲಿ ನಿವಾಸಿಗಳೊಂದಿಗೆ ಖುದ್ದಾಗಿ ಭಾಗವಹಿಸಿ ಸಸಿಗಳನ್ನು ನೆಟ್ಟು, ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಈ ಸಂದರ್ಭದಲ್ಲಿ ಸಂಸದ BYR ಹಂಚಿಕೊಂಡರು. ಬಡಾವಣೆಯ ಮೂಲಭೂತ ಸಮಸ್ಯೆಗಳ ಪರಿಹಾರದ ಜೊತೆಗೆ ಪರಿಸರದ ಸಮತೋಲನ ಕಾಪಾಡಲು ಒಗ್ಗಟ್ಟಾಗಿರುವ ಇಲ್ಲಿನ ನಿವಾಸಿಗಳ ಪ್ರಯತ್ನ ನಿಜಕ್ಕೂ ಹೆಮ್ಮೆ ತರುವಂತದ್ದು ಎಂದು ಸಂಸದರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಸಂಘದ ಅಧ್ಯಕ್ಷರಾದ ನಟರಾಜ್ ಹಾಗೂ ಬಡಾವಣೆಯ ನೂರಾರು ನಿವಾಸಿಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು […]

Continue Reading

ಶಿವಮೊಗ್ಗ | ರಾಮಾಯಣದ ಆದರ್ಶ ಪಾತ್ರಗಳು – ಜೀವನಕ್ಕೆ ಬೆಳಕಾದ ಉಪನ್ಯಾಸ ಸಪ್ತಾಹ : ಶಬರೀಶ್ ಕಣ್ಣನ್

ಇಂದಿನ ಯಾಂತ್ರಿಕ ಜೀವನದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ರಾಮಾಯಣದ ಸಂದೇಶಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸುಂದರ ಸಮಾಜ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದು ವಿದ್ವಾಂಸರು ತಿಳಿಸಿದರು.ಉಪನ್ಯಾಸ ಸಪ್ತಾಹದ ಪ್ರತಿದಿನವೂ ಭಕ್ತರು, ಸಾಹಿತ್ಯಾಸಕ್ತರು ಹಾಗೂ ರಾಮಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸಾರ್ಥಕತೆಯನ್ನು ಹೆಚ್ಚಿಸಿದರು. ರಾಮಾಯಣದ ಆದರ್ಶ ಪಾತ್ರಗಳ ಜೀವನ ಚರಿತ್ರೆ ಹಾಗೂ ಅವರ ಮೌಲ್ಯಗಳ ಕುರಿತು ನಡೆದ ಈ ಉಪನ್ಯಾಸ ಮಾಲಿಕೆ ಭಕ್ತರ ಮನಸ್ಸಿನಲ್ಲಿ ಹೊಸ ಚಿಂತನೆ ಮತ್ತು ಜೀವನೋತ್ಸಾಹವನ್ನು ಮೂಡಿಸಿತು.ಕಾರ್ಯಕ್ರಮದ ಸಮಾರೋಪ ಸಂದರ್ಭದಲ್ಲಿ […]

Continue Reading