ಶಿವಮೊಗ್ಗ,ಹಸಿರು ಮತ್ತು ಸುಸ್ಥಿರ ಪರಿಸರದ ಆಶಯದೊಂದಿಗೆ, ಪಶು ವೈದ್ಯಕೀಯ ಕಾಲೇಜು ಮುಖ್ಯ ರಸ್ತೆ ನಿವಾಸಿಗಳ ಸಂಘ (ರಿ.), ಕಾಶಿಪುರ ಹಾಗೂ ಸ್ಟೇಟ್ ಪಿಯು ಕಾಲೇಜ್, ಶಿವಮೊಗ್ಗ ಇವರ ಜಂಟಿ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಂಘದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಚಾಲನೆ ನೀಡಲಾಯಿತು.
“ಪ್ರತಿ ಮನೆಯ ಮುಂದೆ ಸಸಿ ನೆಡುವ” ಅಪೂರ್ವ ಸಂಕಲ್ಪ:
ಈ ಸಂಘದ ಉದ್ಘಾಟನೆಯನ್ನು ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಬಡಾವಣೆಯ ಪ್ರತಿಯೊಂದು ಮನೆಯ ಮುಂಭಾಗದಲ್ಲೂ ಸಸಿಗಳನ್ನು ನೆಡುವ (Planting Drive) ಅತ್ಯಂತ ಪರಿಸರ ಪೂರಕ ಹಾಗೂ ವಿಶಿಷ್ಟ ಮಾದರಿಯ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಗಿಡ ನೆಡುವ ಈ ಜನಾಂದೋಲನದಲ್ಲಿ ನಿವಾಸಿಗಳೊಂದಿಗೆ ಖುದ್ದಾಗಿ ಭಾಗವಹಿಸಿ ಸಸಿಗಳನ್ನು ನೆಟ್ಟು, ನೀರೆರೆಯುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಈ ಸಂದರ್ಭದಲ್ಲಿ ಸಂಸದ BYR ಹಂಚಿಕೊಂಡರು.
ಬಡಾವಣೆಯ ಮೂಲಭೂತ ಸಮಸ್ಯೆಗಳ ಪರಿಹಾರದ ಜೊತೆಗೆ ಪರಿಸರದ ಸಮತೋಲನ ಕಾಪಾಡಲು ಒಗ್ಗಟ್ಟಾಗಿರುವ ಇಲ್ಲಿನ ನಿವಾಸಿಗಳ ಪ್ರಯತ್ನ ನಿಜಕ್ಕೂ ಹೆಮ್ಮೆ ತರುವಂತದ್ದು ಎಂದು ಸಂಸದರು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕರಾದ ಧನಂಜಯ ಸರ್ಜಿ, ಸಂಘದ ಅಧ್ಯಕ್ಷರಾದ ನಟರಾಜ್ ಹಾಗೂ ಬಡಾವಣೆಯ ನೂರಾರು ನಿವಾಸಿಗಳು ಕುಟುಂಬ ಸಮೇತರಾಗಿ ಪಾಲ್ಗೊಂಡು ಗಿಡ ನೆಡುವ ಅಭಿಯಾನವನ್ನು ಯಶಸ್ವಿಗೊಳಿಸಿದರು


